ಸಾರಾಂಶ
ಕನ್ನಡಪ್ರಭ ವಾರ್ತೆ, ತರೀಕೆರೆ
ದೂರದ ಊರುಗಳಿಂದ ಜನರು ಅಮೃತೇಶ್ವರ ದೇವರ ದರ್ಶನ ಪಡೆಯಲು ಬರುತ್ತಿದ್ದಾರೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದರು.ತರೀಕೆರೆ ತಾಲೂಕು ಆಡಳಿತ, ಮುಜರಾಯಿ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿಕ್ಕಮಗಳೂರು, ಅಮೃತಾಪುರ ಗ್ರಾಮ ಪಂಚಾಯಿತಿ ಹಾಗೂ ಅಮೃತೇಶ್ವರ ಸ್ವಾಮಿ ದೇವಾಲಯ ವ್ಯವಸ್ಥಾಪನ ಸಮಿತಿ ಸಂಯುಕ್ತ ಆಶ್ರಯದಲ್ಲಿ ಸಮೀಪದ ಅಮೃತಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಅಮೃತೋತ್ಸವ -2024ರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ತರೀಕೆರೆ ಕ್ಷೇತ್ರದಲ್ಲಿ ಅಮೃತಾಪುರ ಪ್ರವಾಸಿ ಸ್ಥಳವಾಗಿದೆ. ರಮ್ಯ, ಸುಂದರ, ಪರಿಸರದಲ್ಲಿ ಹೊಯ್ಸಳ ರಾಜ 2 ನೇ ವೀರ ಬಲ್ಲಾಳ 1196 ರಲ್ಲಿ ಕಟ್ಟಿಸಿರುವ ದೇವಸ್ಥಾನ ಶೀಥಿಲಾವಸ್ಥೆಯಲ್ಲಿದ್ದಾಗ ಪುರಾತತ್ವ ಇಲಾಖೆ ಮತ್ತು ದೇವಸ್ಥಾನ ಸಮಿತಿ ಯವರು ಜಿರ್ಣೋದ್ದಾರ ಮಾಡಿ ಅಭಿವೃದ್ದಿಪಡಿಸುತ್ತಿದ್ದಾರೆ. ಈ ದೇವರ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ ಎಂದು ಹೇಳಿದರು.ಉಪವಿಭಾಗಾಧಿಕಾರಿ ಡಾ.ಕೆ.ಜೆ. ಕಾಂತರಾಜ್ ಉದ್ಘಾಟನೆ ನೆರವೇರಿಸಿ ಮಾತನಾಡಿ, ಅಮೃತೇಶ್ವರ ದೇವಸ್ಥಾನವನ್ನು ಸೂಕ್ಷ್ಮವಾಗಿ ಗಮನಿಸಿದರೆ ಮಹಾಭಾರತ ರಾಮಾಯಣ ಕಥೆಗಳನ್ನುಕೆತ್ತಲಾಗಿದೆ, ಈ ದೇವಾಲಯದಲ್ಲಿ 52 ಸ್ತಂಭಗಳಿದ್ದು ಒಂದೊಂದು ಸ್ತಂಬ ವಿಭಿನ್ನವಾಗಿದೆ. ಈ ಸ್ತಂಬಗಳಿಗೆ ಇಂಟರ್ ಲಾಕ್ ವ್ಯವಸ್ಥೆ ಮಾಡಲಾಗಿದೆ. 42 ಓಲೆ ಅಕ್ಷರಗಳು ಇರುತ್ತವೆ. ನಾಟ್ಯ ನಟರಾಜನ ವಿಗ್ರಹ ಅದ್ಭುತವಾಗಿದೆ. ಹೊರ ದೇಶಗಳಿಂದ ರಾಜ್ಯಗಳಿಂದ ಬರುವ ಭಕ್ತರು, ಪ್ರವಾಸಿ ಗರಿಗೆ ಇದರ ಇತಿಹಾಸ ತಿಳಿಯಲು ಪುರತತ್ವ ಇಲಾಖೆಯವರು ಗೈಡ್‌ನ್ನು ನೇಮಿಸಬೇಕು. ನೆನೆಗುದಿಗೆ ಬಿದ್ದಿರುವ ಕಾಮಗಾರಿ ಗಳಿಗೆ ಹಣಕಾಸಿನ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಹುಣಸಘಟ್ಟದ ಹಾಲು ಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ ಆರ್ಶೀವಚನ ನೀಡಿದರು. ಪಾರಂಪರಿಕ ಸಂರಕ್ಷಣಾ ಸಮಿತಿ ಸದಸ್ಯ ಎ.ಎಸ್.ಈಶ್ವರಪ್ಪ, ಅಮೃತೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ವಿ.ಶೇಖರಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್ ಮಲ್ಲೇಶಪ್ಪ, ಉಪಾಧ್ಯಕ್ಷ ಟಿ. ಚಂದ್ರನಾಯ್ಕ ಎ.ಎಸ್. ಸತೀಶ್, ನಿವೃತ್ತ ಶಿಕ್ಷಕ ಕೋರಿ, ಬಿ.ಇ.ಓ ಗೋವಿಂದಪ್ಪ, ವಾಣಿ ಶ್ರೀನಿವಾಸ್, ದಯಾನಂದ್ , ತಹಶೀಲ್ದಾರ್ ರಾಜೀವ್ ಮುಂತಾದವರು ಉಪಸ್ಥಿತರಿದ್ದರು.17ಕೆಟಿಆರ್.ಕೆ.8ಃತರೀಕೆರೆ ಸಮೀಪದ ಅಮೃತಾಪುರ ಗ್ರಾಮದಲ್ಲಿ ಏರ್ಪಡಿಸಿದ್ದ ಅಮೃತೋತ್ಸವ 2024 ರ ಉದ್ಘಾಟನೆಯನ್ನು ಶಾಸಕ ಜಿ.ಎಚ್.ಶ್ರೀನಿವಾಸ್ ನೆರವೇರಿಸಿದರು. ಹುಣಸಘಟ್ಟದ ಹಾಲು ಸ್ವಾಮಿ ಮಠದ ಶ್ರೀ ಗುರುಮೂರ್ತಿ ಶಿವಾಚಾರ್ಯ ಸ್ವಾಮೀಜಿ. ಉಪ ವಿಭಾಗಾಧಿಕಾರಿ ಡಾ.ಕೆ.ಜಿ.ಕಾಂತರಾಜ್ ಮತ್ತಿತರರು ಇದ್ದಾರೆ.