ಭಾರತದ ಸಂವಿಧಾನವನ್ನು ನಾವು ಆಳವಾಗಿ ಅಧ್ಯಯನ ಮಾಡಿದರೆ, ಸಂವಿಧಾನ ಕೊಟ್ಟಿರುವ ಅತ್ಯುನ್ನತ ಸ್ಥಾನ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಇರಲ್ಲ, ಆಳುವ ಪಕ್ಷಗಳು ಇರಲ್ಲ. ರಾಜಕಾರಣ ಮಾಡಬೇಕಾಗಿರೋದು ಪ್ರಜೆಗಳು. ಕೆಲಸ ಮಾಡಬೇಕಾಗಿರೋದು ಪ್ರಜೆಗಳು ಆಯ್ಕೆ ಮಾಡಿದ ಮಂತ್ರಿಗಳು. ಆದರೆ ಎಲ್ಲ ರಾಜಕೀಯ ಪಕ್ಷಗಳು ಅದನ್ನು ತಿರುಚಿ, ಅವರು ರಾಜಕೀಯ ಮಾಡುತ್ತಿದ್ದಾರೆ. ನಾವು ಕೆಲಸ ಮಾಡುತ್ತಿದ್ದೇವೆ ಎಂದು ಬಹುಭಾಷ ನಟ ಪ್ರಕಾಶ್‌ ರೈ ಹೇಳಿದರು.

ಮಂಗಳೂರು : ಭಾರತದ ಸಂವಿಧಾನವನ್ನು ನಾವು ಆಳವಾಗಿ ಅಧ್ಯಯನ ಮಾಡಿದರೆ, ಸಂವಿಧಾನ ಕೊಟ್ಟಿರುವ ಅತ್ಯುನ್ನತ ಸ್ಥಾನ ಚುನಾವಣೆಯಲ್ಲಿ ವಿರೋಧ ಪಕ್ಷಗಳು ಇರಲ್ಲ, ಆಳುವ ಪಕ್ಷಗಳು ಇರಲ್ಲ. ರಾಜಕಾರಣ ಮಾಡಬೇಕಾಗಿರೋದು ಪ್ರಜೆಗಳು. ಕೆಲಸ ಮಾಡಬೇಕಾಗಿರೋದು ಪ್ರಜೆಗಳು ಆಯ್ಕೆ ಮಾಡಿದ ಮಂತ್ರಿಗಳು. ಆದರೆ ಎಲ್ಲ ರಾಜಕೀಯ ಪಕ್ಷಗಳು ಅದನ್ನು ತಿರುಚಿ, ಅವರು ರಾಜಕೀಯ ಮಾಡುತ್ತಿದ್ದಾರೆ. ನಾವು ಕೆಲಸ ಮಾಡುತ್ತಿದ್ದೇವೆ ಎಂದು ಬಹುಭಾಷ ನಟ ಪ್ರಕಾಶ್‌ ರೈ ಹೇಳಿದರು.ಅವರು ಶನಿವಾರ ನಗರದ ಬಲ್ಮಠ ಕೆಟಿಸಿ ಕ್ಯಾಂಪಸ್‌ನ ಬಿಷಪ್‌ ಜತ್ತನ್ನ ಸಭಾಂಗಣದಲ್ಲಿ ನಡೆದ ‘ಜನನುಡಿ’ ಕಾರ್ಯಕ್ರಮದ ಮಾತುಕತೆಯ ಸಂವಾದದಲ್ಲಿ ಮಾತನಾಡಿದರು.ನಾವು ರಾಜಕೀಯ ಪಕ್ಷದವರಲ್ಲ. ನಾವು ಚುನಾವಣೆಯಲ್ಲಿ ತಪ್ಪಾದ ಆಯ್ಕೆ ಮಾಡಬಾರದು ಎಂಬುದು ಮತದಾರರಾದ ನಮಗೆ ತಿಳಿದಿರಬೇಕು. ದೇಶ ನಡೆಯುತ್ತಿರುವುದು ನಾವು ಕಟ್ಟಿದ ತೆರಿಗೆ ಹಣದಿಂದ, ನಮ್ಮ ದುಡಿಮೆಯಿಂದ ಎಂಬುದು ನಮಗೆಲ್ಲ ಅರ್ಥವಾಗಿರಬೇಕು ಎಂದರು. ತಮಿಳುನಾಡಿನ ವಿಚಾರ ನೋಡಿದರೆ ಕಳೆದ ಚುನಾವಣೆಯಲ್ಲಿ ಒಂದು ಬದಲಾವಣೆ ಬೇಕು ಎಂದು ಜನರಲ್ಲಿ ಆರಂಭವಾಯಿತು. ಬದಲಾವಣೆ ತಪ್ಪಾಗಿದೆಯಾ? ಸರಿಯಾಗಿದೆಯಾ? ಎಂಬುದನ್ನು ನೋಡುವುದಕ್ಕೂ ಆಡಳಿತ ಪಕ್ಷಗಳು ಯಾಕೆ ಸೋತಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಆಂಧ್ರಪ್ರದೇಶದ ವಿಚಾರದಲ್ಲಿ ನೋಡುವುದಾದರೆ, ಮೂರು ಪ್ರಾದೇಶಿಕ ಪಕ್ಷಗಳು. ಮೂರರಲ್ಲೂ ಒಬ್ಬರೇ ಇದ್ದಾರೆ. ಏನು ಮಾಡೋದು? ಈ ರಾಜಕೀಯವನ್ನು ಜನ ಅರ್ಥ ಮಾಡಿಕೊಳ್ಳೋದು ಒಂದನೇ ಗೊಂದಲ. ಈ ರೀತಿಯಲ್ಲಿ ಫಲಿತಾಂಶಗಳು ಆಗುತ್ತಿದೆ, ಬೆಂಗಾಳ್‌ನಲ್ಲಿ ಏನಾಗಿದೆ. ಲಕ್ಷಾಂತರ ವೋಟುಗಳನ್ನು ತೆಗೆದುಹಾಕಿ ಗೆದ್ದಿದ್ದಾರೆ. ಇದೆಲ್ಲ ರಾಜಕೀಯದ ಬೆಳವಣಿಗೆ ಎಂದರು.

ಇವತ್ತು ಬಿಜೆಪಿ ಜೊತೆಗೆ ಇರುವವರೆಲ್ಲರೂ ಸೈದ್ದಾಂತಿಕ ಕಾರಣಕ್ಕೆ ಜೊತೆಗಿರುವವರಲ್ಲ, ಅದು ಕೇವಲ ಅವಕಾಶವಾದಿಗಳು ಹಾಗೂ ಮಾರಿಕೊಂಡ ಮಾಧ್ಯಮಗಳು. ಇಂದು ಪತ್ರಿಕೆಗಳನ್ನು ನೋಡಿ ಅವು ಯಾವ ಪಕ್ಷಕ್ಕೆ ಸೇರಿದೆ ಅನ್ನೋದನ್ನು ಹೇಳಬಹುದು. ದೇಶ ಇವತ್ತು ಸೈದ್ಧಾಂತಿಕವಾಗಿ ಮಾರಿಕೊಂಡಕ್ಕಿಂತ ಅವಕಾಶ ಬಾಧೆಯಿಂದ ನೋವು ಅನುಭವಿಸುತ್ತಿದೆ ಎಂದರು.ಬದುಕಿಗೆ ಒಂದು ಅರ್ಥ ಬೇಕು. ಸಾಯೋದಕ್ಕಿಂತ ಮುಂಚೆ ನಾನು ಸಾಯಲ್ಲ. ನೇರವಾಗಿ ಮಾತನಾಡಿದರೆ ಅವರು ಹೆದರುತ್ತಾರೆ. ಅವರು ಪುಕ್ಕಲರು. ಧೈರ್ಯವಾಗಿ ಎದ್ದರೆ ಹಿಂದೆ ಸರಿಯುತ್ತಾರೆ. ಪ್ರಜೆಗಳು ಒಂದೆಡೆ ಸೇರಿದರೆ ಹೆದರುತ್ತಾರೆ ಎಂದರು.

ಗೌರಿ ಲಂಕೇಶ್ ಅಂತ್ಯಕ್ರಿಯೆಯ ವೇಳೆ ‘ನಾನು ಗೌರಿಯನ್ನು ಹೂಳುತ್ತಿಲ್ಲ, ಬಿತ್ತುತ್ತಿದ್ದೇನೆ’ ಎಂದು ಹೇಳಿದ ಮಾತು ಸತ್ಯವಾದುದು. ಏಕೆಂದರೆ, ಒಂದು ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆದಾಗ, ಅದಕ್ಕಿಂತ ದೊಡ್ಡದಾದ ಪ್ರತಿರೋಧದ ಧ್ವನಿ ಎದ್ದು ಬರಲೇಬೇಕು. ನನ್ನಲ್ಲಿ ಇಂತಹ ಪ್ರತಿರೋಧದ ಧ್ವನಿ ಮೊಳಗಲು ಗೌರಿ ಒಂದು ಮಾಧ್ಯಮವಾದರೆ, ಅದಕ್ಕೆ ಭದ್ರ ಬುನಾದಿ ಹಾಕಿದ್ದು ನಮ್ಮನ್ನು ಬೆಳೆಸಿದ ಕನ್ನಡ ಸಾಹಿತ್ಯ ಮತ್ತು ಲಂಕೇಶ್ ಅವರಂತಹ ಕನ್ನಡದ ಪ್ರತಿರೋಧದ ಪರಂಪರೆ‌ ಎಂದರು.

ಡಾ.ನಾಗೇಗೌಡ ಕೆ.ಎಸ್‌. ಮಾತುಕತೆ ನಡೆಸಿಕೊಟ್ಟರು. ಚರಣ್‌ ಶೆಟ್ಟಿ ನಿರೂಪಿಸಿದರು.