ಸಾರಾಂಶ
ಮುಡಾ ಪ್ರಕರಣದಲ್ಲಿ ಕೋರ್ಟ್ ನಿರ್ದೇಶನದ ಮೇಲೆ ಎಫ್ಐಆರ್ ಆಗಿದೆ. ತನಿಖೆ ಆಗಬೇಕಾಗಿದೆ ಎಂದು ಶರಣ ಪ್ರಕಾಶ ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಮಡಿಕೇರಿ
ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಕೆ ಇಲಾಖೆ ದುರುಪಯೋಗ ಮಾಡಿಕೊಂಡು ದಬ್ಬಾಳಿಕೆಯಿಂದ ಬಾಂಡ್ ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಮುಖಂಡರ ವಿರುದ್ಧ ಎಫ್ಐಆರ್ ಆಗಿದೆ. ಅದರಲ್ಲಿ ದಾಖಲೆಗಳಿವೆ. ಮುಖಂಡರ ಐಟಿ ದಾಳಿ ಆಗುತ್ತದೆ, ಆಮೇಲೆ ಅವರು ಚುನಾವಣಾ ಬಾಂಡ್ ಕೊಡುತ್ತಾರೆ. ನಂತರ ಆ ಕೇಸು ಕ್ಲೋಸ್ ಆಗುತ್ತದೆ. ಒಂದಲ್ಲ ಇಂತಹ ನಿದರ್ಶನಗಳು ಹಲವು ಇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ ಪಾಟೀಲ್ ಆರೋಪಿಸಿದ್ದಾರೆನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿರ್ಮಲಾ ಸೀತಾರಾಮನ್, ಜೆ.ಪಿ. ನಡ್ಡಾ ಹಾಗೂ ವಿಜಯೇಂದ್ರ ಮೇಲೆ ಎಫ್ಐಆರ್ ದಾಖಲಾಗಿರುವುದು ರಾಜಕೀಯ ಪ್ರೇರಿತ ಎಂಬ ವಿಚಾರಕ್ಕ ಪ್ರತಿಕ್ರಿಯಿಸಿ, ಇದಕ್ಕೆ ಯಾರು ನಿರ್ದೇಶನ ನೀಡಲು ಸಾಧ್ಯ. ಐಫ್ಐಆರ್ ದಾಖಲಿಸಲು ಹೇಳಿರುವುದು ಕೋರ್ಟ್ ಅಲ್ಲವೆ? ಎಂದರು.
ಕೇಂದ್ರ ಸರ್ಕಾರ 8000 ಕೋಟಿಯನ್ನು ಚುನಾವಣಾ ಬಾಂಡ್ ಮೂಲಕ ಸಂಗ್ರಹಿಸಿದೆ. ಬೆದರಿಕೆಯೊಡ್ಡಿ ಹಣ ಸಂಗ್ರಹಿಸಿದೆ ಅಂತ ಎಫ್ಐಆರ್ ದಾಖಲಾಗಿದೆ. ಕಾಂಗ್ರೆಸ್ ಕೂಡ ಚುನಾವಣಾ ಬಾಂಡ್ ಸ್ವೀಕರಿಸಿದೆ. ಆದರೆ ಕಾಂಗ್ರೆಸ್ ಯಾರಿಗೂ ಫೇವರ್ ಮಾಡಿಲ್ಲ. ಯಾರಿಗಾದರೂ ಫೇವರ್ ಮಾಡಿ ಬಾಂಡ್ ತೆಗೆದುಕೊಂಡಿದ್ದರೆ ಅಕ್ರಮ ಅದು. ನಮ್ಮ ಸರ್ಕಾರ ಇರಲಿಲ್ಲ ನಾವು ಯಾರಿಗೂ ಫೇವರ್ ಮಾಡಿಲ್ಲ. ಆದರೆ ಬಿಜೆಪಿ ಬೆದರಿಸಿ ಬ್ಲಾಕ್ ಮೇಲ್ ಮಾಡಿ ಬಾಂಡ್ ತೆಗೆದುಕೊಂಡಿದೆ. ಇದೊಂದು ದೊಡ್ಡ ಹಗರಣ. ಇದರಲ್ಲಿ ಪ್ರಧಾನಿಯಿಂದ ಹಿಡಿದು ಎಲ್ಲ ಸಚಿವರು ಬರುತ್ತಾರೆ. ಮೊದಲು ಅವರು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.ಮುಡಾ ಪ್ರಕರಣದಲ್ಲಿ ಕೋರ್ಟ್ ನಿರ್ದೇಶನದ ಮೇಲೆ ಎಫ್ಐಆರ್ ಆಗಿದೆ. ತನಿಖೆ ಆಗಬೇಕಾಗಿದೆ ಎಂದು ಶರಣ ಪ್ರಕಾಶ ಪಾಟೀಲ್ ಹೇಳಿದ್ದಾರೆ.