ಡಿಜೆ ಬಳಸಲು ಅವಕಾಶ ನೀಡದಿದ್ದರೇ ಚುನಾವಣೆ ಬಹಿಷ್ಕಾರ

| Published : Apr 12 2024, 01:02 AM IST

ಡಿಜೆ ಬಳಸಲು ಅವಕಾಶ ನೀಡದಿದ್ದರೇ ಚುನಾವಣೆ ಬಹಿಷ್ಕಾರ
Share this Article
  • FB
  • TW
  • Linkdin
  • Email

ಸಾರಾಂಶ

ರಾಯಬಾಗ: ಡಾ.ಬಾಬಾಸಾಹೇಬ ಅಂಬೇಡ್ಕರ್‌ ಜಯಂತಿ ದಿನದಂದು ಧ್ವನಿವರ್ಧಕ (ಡಿಜೆ) ಬಳಸಲು ಅವಕಾಶ ನೀಡದಿದ್ದರೇ ಲೋಕಸಭೆ ಚುನಾವಣೆ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ದಲಿತ ಸಂಘಟನೆ ಮುಖಂಡರು ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ರಾಯಬಾಗ: ಡಾ.ಬಾಬಾಸಾಹೇಬ ಅಂಬೇಡ್ಕರ್‌ ಜಯಂತಿ ದಿನದಂದು ಧ್ವನಿವರ್ಧಕ (ಡಿಜೆ) ಬಳಸಲು ಅವಕಾಶ ನೀಡದಿದ್ದರೇ ಲೋಕಸಭೆ ಚುನಾವಣೆ ಮತದಾನವನ್ನು ಬಹಿಷ್ಕರಿಸಲಾಗುವುದು ಎಂದು ದಲಿತ ಸಂಘಟನೆ ಮುಖಂಡರು ಎಚ್ಚರಿಸಿದರು.

ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್‌ ಜಯಂತಿ ಆಚರಣೆ ನಿಮಿತ್ತ ಪೊಲೀಸ್‌ ಇಲಾಖೆಯಿಂದ ಬುಧವಾರ ಆಯೋಜಿಸಿದ್ದ ಶಾಂತಿಪಾಲನಾ ಸಭೆಯಲ್ಲಿ ಸಿಪಿಐ ಅರುಣಕುಮಾರ ಅವರು ಅಂಬೇಡ್ಕರ್‌ ಜಯಂತಿ ದಿನದಂದು ಚುನಾವಣೆ ನೀತಿಸಹಿಂತೆ ಹಿನ್ನಲೆಯಲ್ಲಿ ಧ್ವನಿವರ್ಧಕ (ಡಿಜೆ) ಬಳಸಲು ಮೇಲಾಧಿಕಾರಿಗಳು ಅವಕಾಶ ನೀಡದೇ ಇರುವುದಿಲ್ಲವೆಂದು ಸಭೆಯಲ್ಲಿ ತಿಳಿಸಿದಾಗ ದಲಿತ ಮುಖಂಡರು ಅಸಮಾಧಾನ ವ್ಯಕ್ತಪಡಿಸಿ ಚುನಾವಣೆ ಬಹಿಷ್ಕರಿಸಿ, ಉಗ್ರ ಹೋರಾಟ ನಡೆಸುವುದಾಗಿ ಹೇಳಿ ಸಭೆಯಿಂದ ಹೊರ ನಡೆದರು. ಪ್ರತಿ ಸಲ ಅಂಬೇಡ್ಕರ್‌ ಜಯಂತಿ ಸಮಯದಲ್ಲಿಯೇ ಚುನಾವಣೆ ಘೋಷಣೆ ಮಾಡುವುದರಿಂದ ಮಹಾನ ವ್ಯಕ್ತಿ ಜಯಂತಿ ಆಚರಿಸಲು ತೊಂದರೆಯಾಗುತ್ತಿದೆ. ಅಂತಹ ಮಹಾನ ವ್ಯಕ್ತಿ ಸಂವಿಧಾನದ ಮೂಲಕ ಎಲ್ಲರಿಗೂ ಮತದಾನ ಹಕ್ಕು ನೀಡಿದ್ದು, ಅವರ ಜಯಂತಿಯನ್ನು ವಿಜೃಂಭನೆಯಿಂದ ಆಚರಿಸಲು ಅವಕಾಶ ನೀಡದೇ ಇರುವುದು ಇಡೀ ಸಮುದಾಯಕ್ಕೆ ನೋವು ಉಂಟಾಗಿದೆ ಎಂದು ಅಸಮಾಧನ ವ್ಯಕ್ತಪಡಿಸಿದರು.

ಪಿಎಸೈ ಐಶ್ವರ್ಯ ನಾಗರಾಳ, ದಲಿತ ಮುಖಂಡರಾದ ಮಹಾದೇವ ಕಾಂಬಳೆ, ಕಿರಣ ಕಾಂಬಳೆ, ದಿಲೀಪ ಪಾಯನ್ನವರ, ಶ್ರವಣ ಕಾಂಬಳೆ,ಗಣೇಶ ಕಾಂಬಳೆ, ರಾಕೇಶ ಅವಳೆ, ಉತ್ತಮ ಕಾಂಬಳೆ, ಮಹಾವೀರ ಐಹೊಳೆ, ಮಹೇಶ ಮಾಂಗ, ಜ್ಯೋತಿಬಾ ಮಾನೆ, ರಮೇಶ ಕಾಂಬಳೆ ಸೇರಿದಂತೆ ಅನೇಕರು ಇದ್ದರು.