- ಪ್ರಮಾಣ ಪತ್ರ ವಿತರಿಸಿದ ಸಹಾಯಕ ಚುನಾವಣಾಧಿಕಾರಿ ರುದ್ರಪ್ಪ
- ಮುಂದಿನ 5 ವರ್ಷಗಳ ಅವಧಿಗೆ ತಾಲೂಕು ಆಡಳಿತ ಮಂಡಳಿಗೆ ಆಯ್ಕೆ- - -
ಕನ್ನಡಪ್ರಭ ವಾರ್ತೆ ಹೊನ್ನಾಳಿಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಂದಿನ 5 ವರ್ಷಗಳ ಅವಧಿಗೆ ತಾಲೂಕು ಆಡಳಿತ ಮಂಡಳಿಗೆ ಅಧ್ಯಕ್ಷರು ಸೇರಿದಂತೆ 21 ಜನ ಪದಾಧಿಕಾರಿಗಳು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಸಹಾಯಕ ಚುನಾವಣಾಧಿಕಾರಿ ರುದ್ರಪ್ಪ ಚೀಲೂರು ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಮೇ 11ರಂದು ಸೋಮವಾರ ಅವಿರೋಧ ಆಯ್ಕೆಯಾದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯರಿಗೆ ಪ್ರಮಾಣ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
2025-26 ರಿಂದ 2029-39ರ ವರೆಗಿನ ಮಹಾಸಭಾ ಸಂವಿಧಾನ ಕಲಂ 15(1)ರ ಪ್ರಕಾರ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಪಿ.ಚನ್ನವೀರಪ್ಪ ಗೌಡ ಸೇರಿದಂತೆ 13 ಸಾಮಾನ್ಯ, 7 ಮಹಿಳಾ ಮೀಸಲಾತಿ ಕ್ಷೇತ್ರಕ್ಕೆ ಮೀಸಲಾಗಿರಿಸಿದ್ದ ಕ್ಷೇತ್ರಗಳಿಗೂ ಎಲ್ಲ ಸದಸ್ಯರು ಅವಿರೋಧ ಆಯ್ಕೆಗೊಂಡಿದ್ದಾರೆ ಎಂದರು.
13 ಸಾಮಾನ್ಯ ಕ್ಷೇತ್ರಗಳಿಗೆ ಎನ್.ಎಸ್. ಮಂಜುನಾಥ್, ಎಸ್.ಜಿ. ಮಧುಗೌಡ, ಟಿ.ಜಿ.ರಮೇಶ್ ಗೌಡ, ಎಚ್.ಎನ್. ಸಿದ್ದೇಶ್, ಕೆ.ಎಸ್.ನಾಗರಾಜ್, ಕೆ.ಎಸ್.ಯೋಗೇಶ್, ಚಿಕ್ಕಜೋಗಿಹಳ್ಳಿ ನಾಗರಾಜ್, ಪಿ.ವೀರಪ್ಪ, ಜಿ.ಎಸ್.ಪ್ರಭು ಪಾಟೀಲ್, ಎಚ್.ಡಿ.ಪ್ರಶಾಂತ್, ಸಿ.ಧರ್ಮರಾಜ್, ಬಿ.ನಂದಿಗೌಡ, ಬಿ.ಎಚ್.ನಾಗರಾಜ್, 7 ಮಹಿಳಾ ಮೀಸಲು ಕ್ಷೇತ್ರಕ್ಕೆ ಪ್ರೇಮಮ್ಮ, ಬಿ.ಆರ್.ಶಿಲ್ಪ, ಶಶಿಕಲಾ, ಎಂ.ಸಿ.ಲತಾ, ಎಸ್.ಜಿ.ಶಾರದಾ, ಸಿ.ಕುಸುಮಾ ಮತ್ತು ರೂಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಅವಳಿ ತಾಲೂಕುಗಳ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾದ ಮಾಜಿ ಅಧ್ಯಕ್ಷ ಲಿಂಗರಾಜ್ ಹವಳದ್, ನೂತನ ಅಧ್ಯಕ್ಷರಾದ ಪಿ.ಚನ್ನವೀರಪ್ಪ ಗೌಡ, ಪದಾಧಿಕಾರಿಗಳು ಇದ್ದರು.
- - --ಎಚ್.ಎಲ್.ಐ1:
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಮುಂದಿನ 5 ವರ್ಷಗಳ ಅವಧಿಗೆ ತಾಲೂಕು ಆಡಳಿತ ಮಂಡಳಿಗೆ ಆಯ್ಕೆಯಾದ ಅಧ್ಯಕ್ಷರು, 21 ಪದಾಧಿಕಾರಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.