ಸಾರಾಂಶ
ಅರಸೀಕೆರೆ ನಗರಸಭೆಗೆ ಶನಿವಾರ 8 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್‌ನಲ್ಲಿದ್ದ ವೇಳೆ 7 ಜೆಡಿಎಸ್ ಸ್ಥಾನಗಳು ಮತ್ತು ಒಂದು ಪಕ್ಷೇತರ ಅಭ್ಯರ್ಥಿ ತಮ್ಮದಾಗಿಸಿಕೊಂಡಿದ್ದ ಶಾಸಕರು ಶನಿವಾರ ಅದೇ 8 ಸ್ಥಾನಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಜೆಡಿಎಸ್ ಆರು ಕ್ಷೇತ್ರಗಳಿಗೆ ಚುನಾವಣಾ ಕಣಕ್ಕೆ ತನ್ನ ಅಭ್ಯರ್ಥಿಗಳನ್ನು ಇಳಿಸಿದ್ದರೆ, ಬಿಜೆಪಿ ನಾಲ್ಕರಲ್ಲಿ ಸ್ಪರ್ಧೆ ನೀಡಿದೆ, ಕಳೆದ ಬಾರಿ ನಗರಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್ ತೆಕ್ಕೆಗೆ ನಗರಸಭೆ ಒಲಿದಿತ್ತು.
ಕನ್ನಡಪ್ರಭ ವಾರ್ತೆ ಅರಸೀಕೆರೆ
ಇಲ್ಲಿನ ನಗರಸಭೆಗೆ ಶನಿವಾರ 8 ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದ್ದು, ಜೆಡಿಎಸ್‌ನಲ್ಲಿದ್ದ ವೇಳೆ 7 ಜೆಡಿಎಸ್ ಸ್ಥಾನಗಳು ಮತ್ತು ಒಂದು ಪಕ್ಷೇತರ ಅಭ್ಯರ್ಥಿ ತಮ್ಮದಾಗಿಸಿಕೊಂಡಿದ್ದ ಶಾಸಕರು ಶನಿವಾರ ಅದೇ 8 ಸ್ಥಾನಗಳ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಮೂಲಕ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ. ಜೆಡಿಎಸ್ ಆರು ಕ್ಷೇತ್ರಗಳಿಗೆ ಚುನಾವಣಾ ಕಣಕ್ಕೆ ತನ್ನ ಅಭ್ಯರ್ಥಿಗಳನ್ನು ಇಳಿಸಿದ್ದರೆ, ಬಿಜೆಪಿ ನಾಲ್ಕರಲ್ಲಿ ಸ್ಪರ್ಧೆ ನೀಡಿದೆ, ಕಳೆದ ಬಾರಿ ನಗರಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಗೆಲ್ಲಿಸಿಕೊಳ್ಳುವ ಮೂಲಕ ಜೆಡಿಎಸ್ ತೆಕ್ಕೆಗೆ ನಗರಸಭೆ ಒಲಿದಿತ್ತು, ಈಗಲೂ ಆಡಳಿತ ಇದೆಯಾದರೂ ಶಾಸಕರ ಮಾರ್ಗದರ್ಶನದಲ್ಲಿಯೇ ಕಾರ್ಯನಿರ್ವಹಿಸುತ್ತಾ ಅಭಿವೃದ್ಧಿ ಕಾರ್ಯ ನಡೆಸುತ್ತಿದೆ. ಶಾಸಕರು ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳುವ ಸಲುವಾಗಿ ಕಳೆದ ಚುನಾವಣೆಯಂತೆಯೇ ಮತದಾರರ ಮನೆ ಬಾಗಿಲಿಗೆ ಪಾದಯಾತ್ರೆ ಮಾಡುತ್ತಿದ್ದಾರೆ, ನೀರಿನ ಬರ ನೀಗಿರುವುದು, ರಸ್ತೆಗಳ ಅಭಿವೃದ್ಧಿ ಮತದಾರರ ಮೇಲ್ನೋಟಕ್ಕೆ ಗೋಚರಿಸುವುದಾದರೂ, ಒಳಚರಂಡಿ ವ್ಯವಸ್ಥೆ ಮೊದಲಾದ ಸಮಸ್ಯೆಗಳು ಇದ್ದೇ ಇದೆ. ಶಾಸಕರು ತಮ್ಮ ಎಂಟು ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವುದು ಅವರ ಪ್ರತಿಷ್ಠೆಯ ಪ್ರಶ್ನೆಯಾಗಿದೆ, ಅವರ ರಾಜಕೀಯ ಪ್ರಬಲತೆ ಜಿಲ್ಲಾ ಮಂತ್ರಿ ಇದ್ದಂತೆಯೇ ಬಹುತೇಕ ಆಗಿದೆ, ಆದರೂ ಕೆಲವು ವಾರ್ಡ್‌ಗಳಲ್ಲಿ ಹೆಚ್ಚಿನ ಶ್ರಮ ಹಾಕಬೇಕಾಗಿದೆ, ಬಹುತೇಕ ಯುವಕರಿಗೆ ಆದ್ಯತೆ ಕೊಟ್ಟಿದ್ದಾರೆ. ಹೆಚ್ಚು ಕುತೂಹಲ ಮೂಡಿಸುವುದೆಂದರೆ 25ನೇ ವಾರ್ಡ್. ಇಲ್ಲಿ ಜೆಡಿಎಸ್ ಅಭ್ಯರ್ಥಿ ಬಿ ಎನ್ ವಿದ್ಯಾಧರ್ ಕಳೆದ ಬಾರಿಯೂ ಇದೇ ವಾರ್ಡಿನಿಂದ ಐದನೇ ಬಾರಿ ವಿಜೇತರಾಗಿದ್ದರು, ಹಿರಿಯ ಸದಸ್ಯರಿಗೆ ಸರಿಯಾದ ಸ್ಥಾನ ಸಿಗಲಿಲ್ಲವೆಂದು ಭಿನ್ನರಾಗಿದ್ದರು, ಮರು ಆಯ್ಕೆಗಾಗಿ ಮತ್ತೆ ಕಣಕ್ಕೆ ಇಳಿದಿದ್ದಾರೆ, ಒಳ್ಳೆಯ ಕೆಲಸಗಾರ ಯಾವುದೇ ವಾರ್ಡಿನ ಜನರಿಗಾದರೂ ಪಕ್ಷಾತೀತವಾಗಿ ಸ್ಪಂದಿಸುವ ವ್ಯಕ್ತಿ, ನಿತ್ಯ ಬೆಳಗ್ಗೆ ವಾರ್ಡ್ ರೌಂಡ್ ಮಾಡುವ ಮೂಲಕ ಮತದಾರರ ಕೈಗೆ ಸಿಗುತ್ತಿದ್ದರು, ಇದು ಇವರ ಪ್ಲಸ್ ಪಾಯಿಂಟ್, ಆದರೂ ಈ ಬಾರಿ ವಾರ್ಡಿನ ಪ್ರಬಲ ಸಮುದಾಯಗಳ ಮತ ಹಂಚಿಕೆ ಆಗುವುದರಿಂದ ಶಾಸಕರು ಹೆಚ್ಚಿನ ಒತ್ತನ್ನು ನೀಡುತ್ತಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪ್ರಬಲ ಹೋರಾಟವಿದೆ. ಜೆಡಿಎಸ್ ಅಭ್ಯರ್ಥಿಗಳಿಗೆ ಎನ್ ಆರ್ ಸಂತೋಷ್ ಗೆಲುವಿಗಾಗಿ ಪಣತೊಟ್ಟು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಹಿರಿಯರು ನಿರೀಕ್ಷೆಯಷ್ಟು ಮಟ್ಟದಲ್ಲಿ ಕಾಣಸಿಗುತ್ತಿಲ್ಲ. ಮಂಡಲ ಅಧ್ಯಕ್ಷರು ಪದಾಧಿಕಾರಿಗಳು ಯುವ ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಅವಿರತ ಪ್ರಯತ್ನ ನಡೆಸುತ್ತಿದ್ದಾರೆ. ಬಿಜೆಪಿಯ ಅತಿ ಕಿರಿಯ ಅಭ್ಯರ್ಥಿಯೆಂದರೆ ಜೀವನ್, ಪತ್ರಕರ್ತ ಕಣಕಟ್ಟೆ ಕುಮಾರ್ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಉಮ ಕುಮಾರ್ ಪುತ್ರ, ಈ ವಾರ್ಡಿನಲ್ಲಿ ಬಹುತೇಕ ನೌಕರವರ್ಗವಿದೆ, ಪ್ರಜ್ಞಾವಂತ ಮತದಾರರು ಇದ್ದಾರೆ, ಯಾವುದೇ ವಾರ್ಡಿನಲ್ಲಿಯೂ ಯಾವ ಮತದಾರರು ಅಮ್ಮ ನಿಲುವನ್ನು ಬಿಟ್ಟುಕೊಡುತ್ತಿಲ್ಲ, ಮತದಾರರು ಯಾರಿಗೆ ಕೃಪೆ ತೋರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.