ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಮುದ್ದೇಬಿಹಾಳ ಹಾಗೂ ತಾಳಿಕೋಟಿ ಅವಳಿ ತಾಲೂಕುಗಳ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ತುರುಸಿನಿಂದ ಸಾಗಿದೆ. ಶುಕ್ರವಾರ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದರಿಂದ ನಾಮಪತ್ರ ಸಲ್ಲಿಕೆಗೆ ಆಕಾಂಕ್ಷಿಗಳು ಮುಗಿಬಿದ್ದಿದ್ದರು. ಅಲ್ಲದೇ, ಇದು ಗೊಂದಲಕ್ಕೂ ಕಾರಣವಾಗಿದೆ. ತಾಲೂಕು ಶಿಕ್ಷಣ ಇಲಾಖೆ ಶಿಕ್ಷಕರು ಮತ್ತು ಚುನಾವಣಾ ಅಧಿಕಾರಿಗಳ ಮಧ್ಯೆ ವಾಗ್ವಾದ ಕೂಡ ನಡೆಯಿತು.ಒಟ್ಟು 30 ಸದಸ್ಯರ ಆಯ್ಕೆಗೆ 2024-29ನೇ ಅವಧಿಗೆ ನಡೆಯುವ ಚುನಾವಣೆಗೆ ಸಂಬಂಧಿಸಿದಂತೆ ಅ.9ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಅ.18 ಕೊನೆ ದಿನವಾಗಿತ್ತು. ಒಟ್ಟು 54 ಅಭ್ಯರ್ಥಿಗಳು ನಾಮಪತ್ರ ಸಲಿಸಿದ್ದು, ಇದರಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ 4 ಅಭ್ಯರ್ಥಿಗಳು ಸೇರಿ ವಿವಿಧ ಇಲಾಖೆಗಳ ಎರಡ್ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಕೆಲವು ಇಲಾಖೆಯಲ್ಲಿ ಅವಿರೋಧ ಆಯ್ಕೆಗಳು ನಡೆದಿವೆ ಎನ್ನಲಾಗುತ್ತಿದೆ. ಆದರೆ, ತಾಲೂಕು ಶಿಕ್ಷಣ ಇಲಾಖೆಯಿಂದ 5 ಸದಸ್ಯರ ಆಯ್ಕೆಗೆ 24 ಜನ ಶಿಕ್ಷಕ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಚುನಾವಣೆ ಬಹುತೇಕ ಖಚಿತಗೊಂಡಿದೆ. ರಾಜಕೀಯ ಪಕ್ಷಗಳ ಚುನಾವಣೆಯಂತೆ ಸರ್ಕಾರಿ ನೌಕರರ ಸಂಘದ ಚುನಾವಣೆಯೂ ಬಣಗಳಾಗಿದ್ದು, ಚುನಾವಣೆ ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.ಈ ಮಧ್ಯೆ ಹಾಲಿ ಆಡಳಿತ ಬಣದವರು ಮತ್ತೆ ತಾವೇ ಆಡಳಿತಕ್ಕೆ ಬರಬೇಕೆಂಬ ಉದ್ದೇಶದಿಂದ ಮತದಾರರ ಪಟ್ಟಿಯಲ್ಲಿ ಹಾಗೂ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದವು. ಇದು ಆಡಳಿತ ಮತ್ತು ವಿರೋಧಿ ಬಣಗಳ ನಡುವಿನ ವಾಗ್ವಾದಕ್ಕೆ ಕಾರಣವಾಯಿತು. ವಾಗ್ವಾದ ಜೋರಾಗುತ್ತಿದ್ದಂತೆ ಪೊಲೀಸರು ಮಧ್ಯೆ ಪ್ರವೇಶಿಸಿ ಅಭ್ಯರ್ಥಿಗಳು ಮತ್ತು ಮತದಾರರನ್ನು ಮತಗಟ್ಟೆಯಿಂದ ಹೊರಹಾಕಿದರು. ನಂತರ ಅಭ್ಯರ್ಥಿಗಳಿಗೆ ಮಾತ್ರ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದರು.
ಯಾರ್‍ಯಾರು ನಾಮಪತ್ರ ಸಲ್ಲಿಸಿದರು..?:ಮತಕ್ಷೇತ್ರ ಸಂಖ್ಯೆ-1(ಕೃಷಿ ಇಲಾಖೆ) ಎ.ಬಿ ಹೂಗಾರ, ಎಂ.ಎಚ್.ಬೀಳಗಿ, ಮತಕ್ಷೇತ್ರ ಸಂಖ್ಯೆ-2 (ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ) ಎಂ.ಎಸ್.ಹಿರೇಮಠ, ಶ್ರೀಕಾಂತ್ ಗೌಡರ. ಮತಕ್ಷೇತ್ರ್ರ ಸಂಖ್ಯೆ-3 (ಕಂದಾಯ ಇಲಾಖೆ) ವಿ.ವಿ.ಅಂಬಿಗೇರ, ಎನ್.ಬಿ.ಮಾವಿನಮಟ್ಟಿ. ಮತಕ್ಷೇತ್ರ ಸಂಖ್ಯೆ- 4 (ಲೋಕೋಪಯೋಗಿ ಇಲಾಖೆ) ಮುತ್ತುರಾಜ ಹಡಲಗೇರಿ, ವಿನೋದಕುಮಾರ ಬಿರಾದಾರ. ಮತಕ್ಷೇತ್ರ ಸಂಖ್ಯೆ-5 (ಪಿ.ಆರ್.ಇ) ರಾಜು ನಾಗೂರಕರ. ಮತಕ್ಷೇತ್ರ ಸಂಖ್ಯೆ-6 (ಪ್ರಾಥಮಿಕ ಶಾಲೆ) ಬಿ.ಎಸ್.ಹೊಳಿ, ಬಿ.ಎಚ್.ಮುದ್ನೂರ, ಬಿ.ಎಚ್.ಭಗವತಿ, ಎಸ್.ಎಸ್.ಚಿರಲದಿನ್ನಿ, ಎ.ಎಚ್.ಖಾಜಿ, ಎ.ಎಸ್. ನಾಗಾವಿ, ಎಚ್.ಎಂ.ಮೇತ್ರಿ, ಬಿ.ಎಸ್.ಬಂಗಾರಿ, ಪಿ.ಎನ್.ರೂಢಗಿ, ಶಂಕರಗೌಡ ಬಿರಾದಾರ, ಬನ್ನೆಪ್ಪ ಶೇಖನ್ನವರ, ಸುರೇಶ್ ವಾಲಿಕಾರ, ಬರದಗಿ ಪಾಟೀಲ್, ಮಹಾದೇವಿ ವಾಲಿ, ವಿಠ್ಠಲ ಪಾಟೀಲ್, ಎಚ್.ಜಿ ಶಾರೀಜಿ. ಮತಕ್ಷೇತ್ರ ಸಂಖ್ಯೆ-7 (ಸರ್ಕಾರಿ ಪ್ರೌಢಶಾಲೆಗಳು) ಎಸ್.ಬಿ.ಚೌದರಿ, ಎ.ಕೆ.ರಾಠೋಡ, ಬಿ.ಎಸ್.ಗಣಚಾರಿ, ಜಿ.ಪಿ.ಧನಪಾಲ, ಎಂ.ಬಿ.ಪಾಟೀಲ್, ಎಸ್.ಎಸ್.ಹಿರೇಮಠ, ಪ್ರಭುಗೌಡ ರಾರೆಡ್ಡಿ, ಬಿ.ಎಸ್.ಶಾಂತಪ್ಪನವರ, ಮತಕ್ಷೇತ್ರ ಸಂಖ್ಯೆ-8 (ಸಾರ್ವಜನಿಕ ಶಿಕ್ಷಣ ಇಲಾಖೆ ಆಡಳಿತ ಕಚೇರಿ )ಎಸ್.ಎ.ಹಿರೇಮಠ, ರಘುವೀರ ಹೊಲಗೇರಿ. ಮತಕ್ಷೇತ್ರ ಸಂಖ್ಯೆ-9 (ಸರ್ಕಾರಿ ಫೂರ್ವ ಕಾಲೇಜುಗಳು ಹಾಗೂ ಪದವಿ ಕಾಲೇಜು) ಎಸ್.ಜಿ.ಲೊಟಗೇರಿ. ಮತಕ್ಷೇತ್ರ ಸಂಖ್ಯೆ-10 (ಸಮಾಜ ಕಲ್ಯಾಣ ಇಲಾಖೆ) ಎಸ್.ಜಿ.ವಾಲಿಕಾರ. ಮತಕ್ಷೇತ್ರ ಸಂಖ್ಯೆ-11 (ಅರಣ್ಯ ಇಲಾಖೆ), ಬಿ.ಎಸ್.ಕೊಣ್ಣೂರ. ಮತಕ್ಷೇತ್ರ ಸಂಖ್ಯೆ-12(ಆರೋಗ್ಯ ಇಲಾಖೆ) ಸತೀಶ್ ಕುಲಕರ್ಣಿ, ಎ.ಎನ್.ಬಿರಾದಾರ, ವಿಠ್ಠಲ ಕಿಲಾರಹಟ್ಟಿ, ವೈ.ಎಂ ಚಲವಾದಿ. ಮತಕ್ಷೇತ್ರ ಸಂಖ್ಯೆ-13(ತೋಟಗಾರಿಕೆ ಇಲಾಖೆ) ರಾಘವೇಂದ್ರ ದೇಶಪಾಂಡೆ. ಮತಕ್ಷೇತ್ರ ಸಂಖ್ಯೆ-14(ಖಜಾನೆ ಇಲಾಖೆ) ಎಸ್.ಸಿ ಬಿರಾದಾರ. ಮತಕ್ಷೇತ್ರ ಸಂಖ್ಯೆ-15(ಭೂ ಮಾಪನ ಇಲಾಖೆ) ಎನ್.ಎಸ್.ಮೇಟಿ, ಮತ ಕ್ಷೇತ ಸಂಖ್ಯೆ-16(ನ್ಯಾಯಾಂಗ ಇಲಾಖೆ) ಬಸವರಾಜ ಹುಣಸ್ಯಾಳ. ಮತಕ್ಷೇತ್ರ ಸಂಖ್ಯೆ-17(ಪಂಚಾಯತ್ ರಾಜ್ ಇಲಾಖೆ), ವ್ಹಿ.ಜಿ.ಹೂಗಾರ, ಡಿ.ಬಿ.ಅಂಜುಟಗಿ, ಎಂ.ಕೆ.ಗುಡಿಮನಿ, ಮತಕ್ಷೇತ್ರ ಸಂಖ್ಯೆ-18 (ಸಿಡಿಪಿಒ) ಎಸ್.ಎಸ್ ಹಗರಗೊಂಡ, ಮತಕ್ಷೇತ್ರ ಸಂಖ್ಯೆ-19 (ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ) ಎಸ್.ಎ.ಗುಮತಿಮಠ, ಸೇರಿ ಒಟ್ಟು 54 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಶನಿವಾರ ನಾಮಪತ್ರ ಪರಿಶೀಲನೆ ನಡೆಯಲಿದ್ದು, ಅ.21ರವರಿಗೆ ನಾಮಪತ್ರ ಹಿಂಪಡೆಯಬಹುದು. ಕೊನೆಗೆ ಅ.28 ಸೋಮವಾರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಟ್ಟು 1544 ಸರಕಾರಿ ನೌಕರ ಮತದಾರು ತಮ್ಮ ಹಕ್ಕು ಚಲಾಯಿಸುವ ಮೂಲಕ ತಮ್ಮ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸನ್ನದ್ಧರಾಗಿದ್ದಾರೆ.