ಸಾರಾಂಶ
ಎಚ್.ಡಿ. ರಂಗಸ್ವಾಮಿ
ಕನ್ನಡಪ್ರಭ ವಾರ್ತೆ ನಂಜನಗೂಡುಪಟ್ಟಣದ ನಗರಸಭೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಗಳಿಗೆ ಸೆ.3ರ ಮಧ್ಯಾಹ್ನ 1ಕ್ಕೆ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಸಲಾಗುವುದೆಂದು ಉಪವಿಭಾಗಾಧಿಕಾರಿಗಳ ಕಚೇರಿಯ ಪ್ರಕಟಣೆ ತಿಳಿಸಿದೆ.
31 ಸ್ಥಾನ ಬಲದ ನಂಜನಗೂಡು ನಗರಸಭೆಯಲ್ಲಿ ಬಿಜೆಪಿ-15, ಕಾಂಗ್ರೆಸ್- 10, ಜೆಡಿಎಸ್-3 ಹಾಗೂ 3 ಮಂದಿ ಪಕ್ಷೇತರರು ಆಯ್ಕೆಯಾಗಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಹೊಂದಿದ್ದು, 18 ಸ್ಥಾನಗಳಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.ಕಾಂಗ್ರೆಸ್ 10 ತನ್ನ ಸದಸ್ಯರೊಂದಿಗೆ ಶಾಸಕ ಹಾಗೂ ಸಂಸದರ ಮತಗಳನ್ನು ಹೊಂದಿದೆ, ಕಾಂಗ್ರೆಸ್ 3 ಮಂದಿ ಪಕ್ಷೇತರ ಬೆಂಬಲದೊಂದಿಗೆ ನಗರಸಭೆ ಅಧಿಕಾರ ಹಿಡಿಯಲು ವ್ಯೂಹ ರಚಿಸಿದೆ ಎನ್ನಲಾಗಿದ್ದು, ಸಂಸದ ಸುನಿಲ್ ಬೋಸ್ಜಿಲ್ಲಾ ಉಸ್ತುವಾರಿ ಸಚಿವ, ಶಾಸಕ, ಸಂಸದರನ್ನು ಹೊಂದಿರುವ ಕಾಂಗ್ರೆಸ್ಸತಾಯ-ಗತಾಯ ಅಧಿಕಾರ ಹಿಡಿಯುತ್ತೇವೆ ಎಂದು ಹೇಳಿಕೆ ನೀಡಿದ್ದು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕಾವು ಪಡೆದುಕೊಂಡಿದೆ.
ಈ ಬೆನ್ನಲ್ಲೇ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿದ್ದು, ಜೆಡಿಎಸ್ ಮತ್ತು ಪಕ್ಷೇತರ ಸದಸ್ಯರು ಇಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ. ಈಗಾಗಲೇ ಮೂವರು ಪಕ್ಷೇತರ ಸದಸ್ಯರು ಕಾಂಗ್ರೆಸ್ ನೊಂದಿಗೆ ಗುರುತಿಸಿಕೊಂಡಿದ್ದಾರೆ. ವೇಳೆ ಕೇಂದ್ರ ಮತ್ತು ರಾಜ್ಯದಲ್ಲಿ ಜೆಡಿಎಸ್- ಬಿಜೆಪಿ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಸ್ಥಳೀಯ ಚುನಾವಣೆಯಲ್ಲೂ ಮೈತ್ರಿ ಮುಂದುವರಿಯುವುದೇ ಎಂಬುದರ ಮೇಲೆ ಯಾವ ಪಕ್ಷ ಅಧಿಕಾರದ ಗದ್ದುಗೆ ಹಿಡಿಯುವುದು ಎಂಬುದು ನಿರ್ಣಯವಾಗಲಿದೆ.ಅಧ್ಯಕ್ಷ ಸ್ಥಾನ ಎಸ್ಸಿ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಲಾಗಿದೆ. ಕಾಂಗ್ರೆಸ್ ನಿಂದ ಶ್ರೀಕಂಠಸ್ವಾಮಿ, ಎಸ್.ಪಿ. ಮಹೇಶ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ, ಬಿಜೆಪಿಯಿಂದ ಮಹೇಶ್ ಅತ್ತಿಖಾನೆ, ದೇವು, ವಿಜಯಲಕ್ಷ್ಮಿ, ಮೀನಾಕ್ಷಿ ನಾಗರಾಜು, ಗಾಯತ್ರಿ ಮುರುಗೇಶ್ ಅವರಿಗೆ ಅವಕಾಶವಿದೆ. ಕಾಂಗ್ರೆಸ್ ನಲ್ಲಿ ಬಹುತೇಕ ಅಭ್ಯರ್ಥಿಯ ಒಮ್ಮತದಿಂದ ಶ್ರೀಕಂಠ ಸ್ವಾಮಿ ಒಬ್ಬರನ್ನು ಬೆಂಬಲಿಸಲು ನಿರ್ಣಯಿಸಲಾಗಿದೆ. ಆದರೆ ಬಿಜೆಪಿಯಲ್ಲಿ ಒಳ ಬೇಗುದಿ ಇನ್ನು ಶಮನವಾಗಿಲ್ಲ.
ಇವೆಲ್ಲರ ಮಧ್ಯೆ ನಂಜನಗೂಡು ನಗರಸಭೆಯ ಅಧಿಕಾರದ ಗದ್ದುಗೆಯನ್ನು ಯಾವ ಪಕ್ಷ ಹಿಡಿಯಲಿದೆ, ಯಾರಿಗೆ ವಿಜಯಲಕ್ಷ್ಮಿ ಹೊಲಿಯುತ್ತಾಳೆ ಕಾದು ನೋಡಬೇಕಿದೆ.