ಎಳನೀರು ಮಾರುಕಟ್ಟೆಯ ಅಭಿವೃದ್ಧಿ ಹಾಗೂ ವರ್ತಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಾರುಕಟ್ಟೆಗೆ ವೇಬ್ರಿಡ್ಜ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅತಿ ಶೀಘ್ರದಲ್ಲಿ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ತಿಳಿಸಿದರು. ಶ್ರವಣಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಲಕ್ಷ್ಮೇಗೌಡ ಪುಟ್ಟೇಗೌಡ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೊಟ್ಟರು. ಸಂಘದ ಬೆಳವಣಿಗೆ ಹಾಗೂ ವರ್ತಕರ ಸಂಘಟನೆಯಲ್ಲಿ ಹಿಂದಿನ ಪದಾಧಿಕಾರಿಗಳು ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣಎಳನೀರು ಮಾರುಕಟ್ಟೆಯ ಅಭಿವೃದ್ಧಿ ಹಾಗೂ ವರ್ತಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಶಾಸಕ ಸಿ. ಎನ್. ಬಾಲಕೃಷ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮಾರುಕಟ್ಟೆಗೆ ವೇಬ್ರಿಡ್ಜ್ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಅತಿ ಶೀಘ್ರದಲ್ಲಿ ಕಲ್ಪಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಜೆಡಿಎಸ್ ಯುವ ಘಟಕದ ರಾಜ್ಯ ಸಂಘಟನಾ ಕಾರ್ಯದರ್ಶಿ ಜಗದೀಶ್ ತಿಳಿಸಿದರು. ಶ್ರೀ ಬಾಹುಬಲಿ ಎಳನೀರು ವರ್ತಕರ ಸಂಘದ ೨೦೨೬-೨೮ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಭಾನುವಾರ ನಡೆದಿದ್ದು, ನೂತನ ಪದಾಧಿಕಾರಿಗಳ ಆಯ್ಕೆಯ ಬಳಿಕ ಮಾತನಾಡಿದ ಅವರು, ಶ್ರವಣಬೆಳಗೊಳದ ಎಳನೀರು ಮಾರುಕಟ್ಟೆಯು ಸ್ಥಳೀಯ ವರ್ತಕರು ಹಾಗೂ ರೈತರ ಪಾಲಿಗೆ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿಗೆ ಪ್ರತಿನಿತ್ಯ ವಿವಿಧ ಗ್ರಾಮಗಳಿಂದ ಎಳನೀರು ಮಾರಾಟಕ್ಕಾಗಿ ವರ್ತಕರು ಬರುತ್ತಾರೆ. ಹೀಗಾಗಿ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿ ಅತ್ಯಗತ್ಯವಾಗಿದೆ ಎಂದರು. ಮಾರುಕಟ್ಟೆಯಲ್ಲಿ ವೇಬ್ರಿಡ್ಜ್ ವ್ಯವಸ್ಥೆ ಕಲ್ಪಿಸುವುದರಿಂದ ಎಳನೀರು ವ್ಯಾಪಾರಕ್ಕೆ ಅನುಕೂಲವಾಗಲಿದೆ. ಜತೆಗೆ ವರ್ತಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತರಲಾಗಿದ್ದು, ಅವುಗಳನ್ನು ಹಂತಹಂತವಾಗಿ ಪರಿಹರಿಸುವುದಾಗಿ ಶಾಸಕ ಸಿ.ಎನ್.ಬಾಲಕೃ? ಭರವಸೆ ನೀಡಿದ್ದಾರೆ. ವರ್ತಕರ ಸಂಘದ ಪದಾಧಿಕಾರಿಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ ಮಾರುಕಟ್ಟೆಯ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹೇಳಿದರು.ಸಂಘದ ೨೦೨೬-೨೮ನೇ ಸಾಲಿನ ಅಧ್ಯಕ್ಷರಾಗಿ ಬಸವರಾಜ್ ದಮ್ಮನಿಂಗಳ, ಗೌರವಾಧ್ಯಕ್ಷರಾಗಿ ಎ. ಎಸ್. ಯೋಗೇಶ್, ಉಪಾಧ್ಯಕ್ಷರಾಗಿ ಆರ್.ಸಿ.ಪ್ರತಾಪ್, ಕಾರ್ಯದರ್ಶಿಯಾಗಿ ಸಂತೋಷ ಕೋಡಿ ಹಾಗೂ ಖಜಾಂಚಿಯಾಗಿ ಎಂ. ಕೆ. ಪುನೀತ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಹಿಂದಿನ ಅವಧಿಯಲ್ಲಿ ಸೇವೆ ಸಲ್ಲಿಸಿದ ಅಧ್ಯಕ್ಷ ಡಿ. ಬಿ. ಮಂಜುನಾಥ್, ಗೌರವಾಧ್ಯಕ್ಷ ಕೊತ್ತನಘಟ್ಟ ಸಂತೋಷ, ಉಪಾಧ್ಯಕ್ಷ ಎಸ್. ಸತೀಶ್, ಕಾರ್ಯದರ್ಶಿ ದಮ್ಮನಿಂಗಳ ಕುಮಾರ್ ಹಾಗೂ ಶ್ರವಣಬೆಳಗೊಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಲಕ್ಷ್ಮೇಗೌಡ ಪುಟ್ಟೇಗೌಡ ಅವರನ್ನು ನೂತನ ಪದಾಧಿಕಾರಿಗಳು ಸನ್ಮಾನಿಸಿ ಗೌರವಪೂರ್ವಕವಾಗಿ ಬೀಳ್ಕೊಟ್ಟರು. ಸಂಘದ ಬೆಳವಣಿಗೆ ಹಾಗೂ ವರ್ತಕರ ಸಂಘಟನೆಯಲ್ಲಿ ಹಿಂದಿನ ಪದಾಧಿಕಾರಿಗಳು ಸಲ್ಲಿಸಿದ ಸೇವೆಯನ್ನು ಸ್ಮರಿಸಲಾಯಿತು.ಈ ಸಂದರ್ಭದಲ್ಲಿ ಕೊತ್ತನಘಟ್ಟ ಕೋಡಿ ಮಂಜುನಾಥ್, ನಾಗೇಶ್, ನಾಗಯ್ಯನಕೊಪ್ಪಲು ಕಿರಣ್ ಸೇರಿದಂತೆ ಸಂಘದ ಸದಸ್ಯರು, ವರ್ತಕರು ಹಾಗೂ ಮುಖಂಡರು ಉಪಸ್ಥಿತರಿದ್ದರು..