ಬನಹಟ್ಟಿಯ ಶ್ರೀಮಲ್ಲಿಕಾರ್ಜುನ ದೇವರ ರಥೋತ್ಸವ ನಿಮಿತ್ತ ದಿ.೧೧ ಬುಧವಾರದಂದು ಅಶೋಕ ಕಾಲನಿಯ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಕುಸ್ತಿ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿವೆಯೆಂದು ಜಾತ್ರಾ ಕುಸ್ತಿ ಕಮಿಟಿ ಅಧ್ಯಕ್ಷ ಬ್ರಿಜ್‌ಮೋಹನ ಡಾಗಾ ತಿಳಿಸಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಬನಹಟ್ಟಿಯ ಶ್ರೀಮಲ್ಲಿಕಾರ್ಜುನ ದೇವರ ರಥೋತ್ಸವ ನಿಮಿತ್ತ ದಿ.೧೧ ಬುಧವಾರದಂದು ಅಶೋಕ ಕಾಲನಿಯ ಸೋಮವಾರ ಪೇಟೆ ಸಮಸ್ತ ದೈವ ಮಂಡಳಿಯ ಕುಸ್ತಿ ಮೈದಾನದಲ್ಲಿ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿವೆಯೆಂದು ಜಾತ್ರಾ ಕುಸ್ತಿ ಕಮಿಟಿ ಅಧ್ಯಕ್ಷ ಬ್ರಿಜ್‌ಮೋಹನ ಡಾಗಾ ತಿಳಿಸಿದರು.

ಸುಮಾರು ೩ ರಿಂದ ೪ ಲಕ್ಷ ರೂ.ಗಳ ವೆಚ್ಚದಲ್ಲಿ ನೂರಕ್ಕೂ ಅಧಿಕ ಕುಸ್ತಿಪಟುಗಳಿಂದ ಜಂಗಿ ನಿಕಾಲಿ ಕುಸ್ತಿಗಳು ಜರುಗಲಿವೆ ಎಂದರು. ಬುಧವಾರದಂದು ಮಧ್ಯಾಹ್ನ ೩ ಗಂಟೆಯಿಂದ ಕುಸ್ತಿಗಳು ಜರುಗಲಿವೆ. ಪ್ರಮುಖವಾಗಿ ಕರ್ನಾಟಕ ಚಾಂಪಿಯನ್ ಬಸಿಡೋಣಿಯ ನಾಗರಾಜ ಪೈ. ಜೊತೆ ಮಹಾರಾಷ್ಟç ಚಾಂಪಿಯನ್ ಜಗತಾಪ ಪ್ರಶಾಂತ ಪೈ. ಮೈಸೂರು ದಸರಾ ಕಂಠೀರವ ದಾವಣಗೆರೆಯ ಬಸು ಪೈ. ಯಲ್ಲಟ್ಟಿ ಜೊತೆ ದಾವಣಗೆರಿಯ ಸೌರಭ ಪೈ. ಸಾಂಗಲಿ. ಕಂಗ್ರಾಳೆಯ ಪ್ರೇಮ ಪೈ. ಜಾಧವ ಜೊತೆ ಇಂಗಳಿಯ ಸಂಜು ಪೈ. ಇಂಗಳೆ ಹಾಗೂ ಹಾರೂಗೇರಿಯ ಮುರುಗೇಶ ಪೈ. ಜೊತೆ ಇಂಚಲಕರಂಜಿಯ ಪಾರಸ ಪೈ. ಮತ್ತು ಮಹಿಳಾ ಕುಸ್ತಿಗಳಲ್ಲಿ ಮುರಗುಂಡಿಯ ನಿಖಿತಾ ಪೈ. ನಾಯಕ ಜೊತೆ ಮಹಾಲಿಂಗಪುರದ ಮುಸ್ಕಾನ್ ಪೈ. ಜೊತೆ ಹೀಗೆ ಪುರುಷ ಹಾಗೂ ಮಹಿಳಾ ಕುಸ್ತಿಗಳು ಸೇರಿದಂತೆ ೮೦ ಕ್ಕೂ ಅಧಿಕ ಕುಸ್ತಿಗಳು ಜರುಗಲಿವೆಯೆಂದು ತಿಳಿಸಿದ್ದಾರೆ.