ಸಾರಾಂಶ
ನಗರದ ಕಿನ್ನಾಳ ರಸ್ತೆ ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 19ರಲ್ಲಿನ ಎನ್.ಜಿ.ಓ. ಕಾಲನಿಯಲ್ಲಿರುವ ಶ್ರೀ ಈಶ್ವರ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಕೊಪ್ಪಳ:
ನಗರದ ಕಿನ್ನಾಳ ರಸ್ತೆ ಭಾಗ್ಯನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ 19ರಲ್ಲಿನ ಎನ್.ಜಿ.ಓ. ಕಾಲನಿಯಲ್ಲಿರುವ ಶ್ರೀ ಈಶ್ವರ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.ಗೌರವಾಧ್ಯಕ್ಷರಾಗಿ ಎಸ್.ಎಸ್. ಪುರಾಣಿಕಮಠ, ಅಧ್ಯಕ್ಷರಾಗಿ ವೀರಣ್ಣ ಚಾಕಲಬ್ಬಿ, ಉಪಾಧ್ಯಕ್ಷರಾಗಿ ಸಂಗಪ್ಪ ಹಾಲ್ಯಾಳ, ಮಂಜುನಾಥ ಡಂಬಳ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್ ಎಸ್. ಪುರಾಣಿಕಮಠ, ಖಜಾಂಚಿಯಾಗಿ ಪಾಲಾಕ್ಷಪ್ಪ ನಾಯಕ, ಆಂತರಿಕ ಲೆಕ್ಕಪರಿಶೋಧಕರಾಗಿ ಶ್ರೀನಿವಾಸ ಸಿದ್ನೇಕೊಪ್ಪ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ರೇವಯ್ಯ ಎಸ್.ಕಾಡದೇವರಮಠ, ಮಲ್ಲಯ್ಯ ಗಾರವಾಡಮಠ, ಎಂ.ಎಸ್. ಸಜ್ಜನ್, ಮಲ್ಲಿಕಾರ್ಜುನಗೌ ಪಾಟೀಲ, ಐ.ಎಂ. ಚಿಕ್ಕರೆಡ್ಡಿ, ಕೆ. ಶಂಭುಲಿಂಗಪ್ಪ, ವಿ.ಎಚ್. ಮಂಡಸೊಪ್ಪಿ, ಗಂಗಾಧರ ಖಾನಾಪುರ, ರವಿ ಆರ್. ವಾಲ್ಮೀಕಿ, ಮಧುಸೂಧನ ಕುಲಕರ್ಣಿ, ಪಂಪನಗೌಡ ಬಲಕುಂದಿ, ಬಸಯ್ಯ ಸಾಲಿಮಠ, ರಾಘವೇಂದ್ರ ದೇಶಪಾಂಡೆ, ವಿಜಯ್ ದಿವಟರ್, ಕಿರಣ ನಾಯಕ, ಚಂದ್ರಶೇಖರ ಕಳ್ಳೀಮನಿ, ವಿ.ಎಸ್. ಪಾಟೀಲ, ಮಂಜುನಾಥ ಕುಲಕರ್ಣಿ, ಅಭಿಷೇಕ ಕುಲಕರ್ಣಿ, ಗುರಪ್ಪ, ಬಸವರಾಜ ಎನ್. ಸವಡಿ, ಬಸಪ್ಪ ಬಂಡಿಹಾಳ, ವೀರಭದ್ರಪ್ಪ ಹಾಗೂ ಮಾಧ್ಯಮ ಸಂಚಾಲಕರನ್ನಾಗಿ ನಾಗರಾಜ ನಾಯಕ ಡಿ.ಡೊಳ್ಳಿನ ಅವರನ್ನು ಸಭೆಯು ಸರ್ವಾನುಮತದಿಂದ ಆಯ್ಕೆ ಮಾಡಿತು. ಈ ಪದಾಧಿಕಾರಿಗಳ ಅವಧಿಯು ಮೂರು ವರ್ಷಗಳದ್ದಾಗಿರುತ್ತದೆ ಎಂದು ಸಮಿತಿಯ ಪ್ರಕಟಣೆ ತಿಳಿಸಿದೆ.