ಸಾರಾಂಶ
ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ
ಇಲ್ಲಿನ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿರುವ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ನೂತನ ಅಧ್ಯಕ್ಷರಾಗಿ ಸುನಿಲ್ ಕುಮಾರ್ ದಡ್ಡು ಹಾಗೂ ಉಪಾಧ್ಯಕ್ಷರಾಗಿ ದಯಾನಂದ ಸರೋಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಹಕಾರಿ ಕ್ಷೇತ್ರ ಹಾಗೂ ಪರಿವಾರ ಸಂಘಟನೆಯ ಮುಂದಾಳುಗಳಾದ ದಯಾನಂದ ಉಜಿರೆಮಾರ್, ಕೃಷ್ಠ ಪ್ರಸಾದ್ ಮುರಳೀಧರ ಹಸಂತಡ್ಕ, ಮೋಹನ್ ಪಕ್ಕಳ, ಪ್ರಶಾಂತ್ ಶಿವಾಜಿನಗರ, ವಿದ್ಯಾಧರ ಜೈನ್, ಶಶಿ ಕುಮಾರ್ ಬಾಳ್ಯೊಟ್ಟು, ಪುರುಷೋತ್ತಮ ಮುಂಗ್ಲಿಮನೆ, ಸುರೇಶ್ ಅತ್ರಮಜಲು ಮೊದಲಾದ ಪ್ರಮುಖರ ಉಪಸ್ಥಿತಿಯಲ್ಲಿ ಮಂಗಳವಾರ ಆಯ್ಕೆ ಪ್ರಕ್ರಿಯೆ ಸಭೆ ನಡೆಯಿತು.ಸಭೆಯಲ್ಲಿ, ಸಹಕಾರಿ ಕ್ಷೇತ್ರದಲ್ಲಿ ಈ ಹಿಂದೆ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವಿ ಕಾರ್ಯಕರ್ತ ಸುನಿಲ್ ದಡ್ಡು ಅವರನ್ನು ಅಧ್ಯಕ್ಷನಾಗಿ ಸೂಚಿಸಿ ಅನುಮೋದಿಸಲಾಯಿತು. ಉಪಾಧ್ಯಕ್ಷರಾಗಿ ಈ ಹಿಂದಿನ ಅವಧಿಯಲ್ಲಿ ನಿರ್ದೇಶಕನಾಗಿ , ಸಂಘಟನೆಯ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವಿ ದಯಾನಂದ ಸರೋಳಿ ಅವರನ್ನು ಸೂಚಿಸಿ ಅನುಮೋದಿಸಲಾಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುರಳೀಧರ ಹಸಂತಡ್ಕ , ಸಾಮಾನ್ಯ ಕಾರ್ಯಕರ್ತನ ನಿಸ್ವಾರ್ಥ ದುಡಿಮೆಗೆ ಸ್ಥಾನಮಾನಗಳು ಹುಡುಕಿಕೊಂಡು ಬರುತ್ತಿದೆ ಎನ್ನುವುದಕ್ಕೆ ಈ ದಿನದ ಅಧ್ಯಕ್ಷ ಉಪಾಧ್ಯಕ್ಷರೇ ಸಾಕ್ಷಿ ಎಂದರು. ಸಹಕಾರಿ ಕ್ಷೇತ್ರಕ್ಕೆ ಆಯ್ಕೆಯಾದ ಎಲ್ಲರೂ ಸಂಘವನ್ನು ಮುನ್ನಡೆಸಲು ಸಮರ್ಥರೇ ಆಗಿರುವಾಗ ಎಲ್ಲರೂ ಒಗ್ಗೂಡಿ ಶ್ರಮಿಸುವ ಮೂಲಕ ಸಂಘವನ್ನು ಮತ್ತಷ್ಟು ಉನ್ನತಿಗೆ ಕೊಂಡೊಯ್ಯಬೇಕೆಂದರು.ಹಿರಿಯ ನ್ಯಾಯವಾದಿ, ನೂತನವಾಗಿ ಸಂಘಕ್ಕೆ ನಿರ್ದೇಶಕರಾಗಿ ಆಯ್ಕೆಯಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಉಷಾ ಮುಳಿಯ, ರಾಜೇಶ್, ಶ್ರೀರಾಮ ಪಾತಾಳ, ಗೀತಾ, ಸಂಧ್ಯಾ, ರಾಘವ ನಾಯ್ಕ್, ವಸಂತ ಪಿಜಕ್ಕಳ, ಸುಂದರ್ ಕೆ, ಸದಾನಂದ ಶೆಟ್ಟಿ ಪ್ರಮುಖರಾದ ಹರಿರಾಮಚಂದ್ರ, ರವೀಂದ್ರ ಆಚಾರ್ಯ, ತಿಮ್ಮಪ್ಪ ಗೌಡ, ಯಶವಂತ ಜಿ, ಚಂದ್ರಶೇಖರ್ ಮಡಿವಾಳ, ಗಂಗಾಧರ ಪಿಎನ್ , ಕಂಗ್ವೆ ವಿಶ್ವನಾಥ ಶೆಟ್ಟಿ, ಪ್ರಸಾದ್ ಭಂಡಾರಿ , ಶೌಕತ್ ಅಲಿ, ಆನಂದ ಕುಂಟಿನಿ , ಸಂತೋಷ್ , ಲಕ್ಷ್ಮಣ ಗೌಡ , ಸಚಿನ್, ಯತೀಶ್ ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು.