ವಂದಾರಗುಪ್ಪೆ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

| Published : Sep 20 2025, 01:00 AM IST

ವಂದಾರಗುಪ್ಪೆ ಸಹಕಾರ ಸಂಘದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಪಟ್ಟಣ: ತಾಲೂಕಿನ ವಂದಾರಗುಪ್ಪೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿ.ಬಿ. ಚಂದ್ರಯ್ಯ, ಉಪಾಧ್ಯಕ್ಷರಾಗಿ ಪೌಳಿದೊಡ್ಡಿ ರಾಜೇಶ್ ಅವಿರೋಧವಾಗಿ ಆಯ್ಕೆಯಾದರು.

ಚನ್ನಪಟ್ಟಣ: ತಾಲೂಕಿನ ವಂದಾರಗುಪ್ಪೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ವಿ.ಬಿ. ಚಂದ್ರಯ್ಯ, ಉಪಾಧ್ಯಕ್ಷರಾಗಿ ಪೌಳಿದೊಡ್ಡಿ ರಾಜೇಶ್ ಅವಿರೋಧವಾಗಿ ಆಯ್ಕೆಯಾದರು.

ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಯ್ಯ, ಪೌಳಿದೊಡ್ಡಿ ರಾಜೇಶ್ ಹೊರತುಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಪುರುಷೋತ್ತಮ್ ಇವರಿಬ್ಬರ ಅವಿರೋಧ ಆಯ್ಕೆ ಘೋಷಿಸಿದ್ದಾರೆ. ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಸಂದೀಪ್ ಸಹಕಾರ ನೀಡಿದರು.

ಒಟ್ಟು ೧೧ ಸದಸ್ಯ ಬಲದ ಸಂಘದಲ್ಲಿ ಕಾಂಗ್ರೆಸ್ ಬೆಂಬಲಿತರು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದ ಕಾರಣ ಸಹಜವಾಗಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಕಾಂಗ್ರೆಸ್ ತೆಕ್ಕೆಗೆ ಜಾರಿತು. ಚುನಾವಣೆ ಪ್ರಕ್ರಿಯಲ್ಲಿ ನಿರ್ದೇಶಕರಾದ ರಾಂಪುರ ಮಲವೇಗೌಡ, ರಾಜಣ್ಣ, ಶ್ರೀನಿವಾಸ್, ರಮೇಶ್ ಇತರರು ಹಾಜರಾಗಿದ್ದರು.

ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್, ಮುಖಂಡರಾದ ಪ್ರಸನ್ನ, ಪೌಳಿದೊಡ್ಡಿ ಹನುಮಂತು, ಹರೂರು ರಾಜಣ್ಣ, ಚನ್ನೇಗೌಡ, ಮುದುಗೆರೆ.ಜೆ.ಕೆ, ವಿಶ್ವ ಮತ್ತಿತರರು ಅಭಿನಂದಿಸಿದರು.

ಸಂಘದ ಅಭಿವೃದ್ಧಿಗೆ ಶ್ರಮಿಸುವೆ: ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಬಿ.ಚಂದ್ರಯ್ಯ ಮಾತನಾಡಿ, ನನ್ನ ಅವಿರೋಧ ಆಯ್ಕೆಗೆ ಸಹಕರಿಸಿದ ಶಾಸಕ ಯೋಗೇಶ್ವರ್ ಪಕ್ಷದ ಮುಖಂಡರು, ಸಂಘದ ನಿರ್ದೇಶಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.

ದೊರತೆ ಅವಕಾಶ ಬಳಸಿಕೊಂಡು ಸಂಘದ ಎಲ್ಲ ಸದಸ್ಯರ ಸಹಕಾರದೊಂದಿಗೆ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಸಂಘದ ಸೌಲಭ್ಯಗಳನ್ನು ಎಲ್ಲ ಸದಸ್ಯರಿಗೂ ತಲುಪಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ತಿಳಿಸಿದರು.

ಪೊಟೋ೧೯ಸಿಪಿಟಿ೧:

ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ವಿ.ಬಿ.ಚಂದ್ರಯ್ಯ, ಉಪಾಧ್ಯಕ್ಷ ಪೌಳಿದೊಡ್ಡಿ ರಾಜೇಶ್‌ರನ್ನು ಮುಖಂಡರು ಅಭಿನಂದಿಸಿದರು.