ಕೂಡಲಸಂಗಮ ಪಿಕೆಪಿಎಸ್‌ಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

| Published : Jul 09 2024, 12:51 AM IST

ಸಾರಾಂಶ

ಹುನಗುಂದ ತಾಲೂಕಿನ ಕೂಡಲಸಂಗಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಾಂತೇಶ ಲಗಮಣ್ಣವರ, ಉಪಾಧ್ಯಕ್ಷರಾಗಿ ನೂರಂದಪ್ಪ ಚೌಧರಿ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಹುನಗುಂದ

ತಾಲೂಕಿನ ಕೂಡಲಸಂಗಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸೋಮವಾರ ನಡೆದ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಾಂತೇಶ ಲಗಮಣ್ಣವರ, ಉಪಾಧ್ಯಕ್ಷರಾಗಿ ನೂರಂದಪ್ಪ ಚೌಧರಿ ಅವಿರೋಧವಾಗಿ ಆಯ್ಕೆಯಾದರು.

ನಿರ್ದೇಶಕರಾದ ಶಿದ್ರಾಮಯ್ಯ ಕೋಟೂರ, ಸಂಗಪ್ಪ ಬಾಗೇವಾಡಿ, ಅಬ್ದುಲ್‌ ರಹಿಮಾನ ಹಲಕಾವಟಗಿ, ಶೇಖರಪ್ಪ ದೇಶಿ, ಅಶೋಕ ಗೌಡರ, ವಿನೋದ ತಳವಾರ, ರಂಗನಾಥ ಪಲಕ್ಕಿ, ರೇಖಾ ಮೇಟಿ, ಗಂಗಮ್ಮ ನಾಲತವಾಡ ಪ್ರೇಮಾ ಬುದುರಿ, ಹುನಗುಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರ ದೊಡಮನಿ, ಗಂಗಣ್ಣ ಬಾಗೇವಾಡಿ, ಪಿಕೆಪಿಎಸ್ ಮ್ಯಾನೇಜರ್‌ ಮುತ್ತು ನೇಗಲಿ, ಚುನಾವಣಾಧಿಕಾರಿ ಎಂ.ಸಿ. ತಿಪ್ಪಣ್ಣವರ ಸೇರಿದಂತೆ ಇತರರು ಇದ್ದರು. ನಂತರ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನಿಗಳು ವಿಯೋತ್ಸವ ಆಚರಿಸಿದರು.