ಮೆಣಸಿಗನಹಳ್ಳಿ ಡೇರಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

| Published : Feb 27 2024, 01:35 AM IST

ಸಾರಾಂಶ

ಚನ್ನಪಟ್ಟಣ: ತಾಲೂಕಿನ ಮೆಣಸಿಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಚ್. ಕರೀಗೌಡ, ಉಪಾಧ್ಯಕ್ಷರಾಗಿ ಚೌಡಮ್ಮ ಅವಿರೋಧ ಆಯ್ಕೆಯಾದರು.

ಚನ್ನಪಟ್ಟಣ: ತಾಲೂಕಿನ ಮೆಣಸಿಗನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಎಚ್. ಕರೀಗೌಡ, ಉಪಾಧ್ಯಕ್ಷರಾಗಿ ಚೌಡಮ್ಮ ಅವಿರೋಧ ಆಯ್ಕೆಯಾದರು. ಚುನಾವಣೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಇವರಿಬ್ಬರ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ಬಿ.ಕೆ.ಮಂಜುನಾಥ್ ಇವರಿಬ್ಬರ ಅವಿರೋಧ ಆಯ್ಕೆ ಘೋಷಿಸಿದರು. ನಿರ್ದೇಶಕರಾದ ಎಂ.ಸಿ. ಪವನ್‌ಕುಮಾರ್, ಸುನಿಲ್ ಎಂ.ಎಸ್, ಸುನಿಲ್ ಎಂ.ಆರ್, ಚಿಕ್ಕರಾಜು ಎಂ.ಬಿ, ರಾಜು, ವೆಂಕಟೇಶ್, ನಾಗರಾಜು, ಗಾಯತ್ರಮ್ಮ, ಮುತ್ತುರಾಜು ಹಾಗೂ ರಾಜಶೇಖರ್ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿ ಅವಿರೋಧ ಆಯ್ಕೆಗೆ ಸಮ್ಮತಿ ಸೂಚಿಸಿದರು. ಡೇರಿ ಮುಖ್ಯ ಕಾರ್ಯನಿರ್ವಾಹಕ ಎಂ.ಸಿ. ಚನ್ನಪ್ಪ, ಹಾಲು ಪರೀಕ್ಷಕ ಯೋಗೇಶ್, ಸಹಾಯಕರಾದ ಬಸವಲಿಂಗು ಹಾಗೂ ಕುಮಾರ್ ಸುಗಮ ಚುನಾವಣೆಗೆ ಸಹಕಾರ ನೀಡಿದರು. ಗ್ರಾಮದ ಮುಖಂಡರಾದ ಗ್ರಾಪಂ ಸದಸ್ಯ ಗವಿಗೌಡ, ಬಸವಲಿಂಗೇಗೌಡ, ಪುನೀತ್ ಕುಮಾರ್, ಸಿದ್ದರಾಮೇಗೌಡ, ಅಪ್ಪಾಜಿ, ರಾಜೇಶ್, ಸಿದ್ದಲಿಂಗೇಗೌಡ, ಕೆಂಪರಾಜು, ಶಿವು, ಹುಚ್ಚಪ್ಪ, ವೆಂಕಟೇಶ್, ಮಧು, ವಿಜಿಕೃಷ್ಣ, ಸಿದ್ದರಾಜು, ನಾಗರಾಜು, ಅರ್ಚಕ ಹನುಮಂತಪ್ಪ, ಶಿವರಾಜು, ಬಾಬು, ರವಿ, ಎಂ.ಡಿ.ಶಿವು, ಪಾಪಣ್ಣ ಹಾಗೂ ಅನೇಕರು ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷೆ ಅವರನ್ನು ಅಭಿನಂದಿಸಿದರು.

ಪೊಟೋ೨೫ಸಿಪಿಟಿ೧೧:

ಚನ್ನಪಟ್ಟಣ ತಾಲೂಕಿನ ಮೆಣಸಿಗನಹಳ್ಳಿ ಡೇರಿ ನೂತನ ಅಧ್ಯಕ್ಷ ಕರೀಗೌಡ ಹಾಗೂ ಉಪಾಧ್ಯಕ್ಷೆ ಚೌಡಮ್ಮ ಅವರನ್ನು ಗ್ರಾಪಂ ಸದಸ್ಯ ಗವಿಗೌಡ, ಬಸವಲಿಂಗೇಗೌಡ, ಪುನೀತ್ ಕುಮಾರ್, ಸಿದ್ದರಾಮೇಗೌಡ, ಅಪ್ಪಾಜಿ, ರಾಜೇಶ್, ಸಿದ್ದಲಿಂಗೇಗೌಡ, ಕೆಂಪರಾಜು, ವೆಂಕಟೇಶ್, ಮಧು ಅಭಿನಂದಿಸಿದರು.