ಸಾರಾಂಶ
ನವದೆಹಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಾರ್ಟಿಯ ಸಮರ್ಥ ನಾಯಕಿ ರೇಖಾ ಗುಪ್ತರನ್ನು ಮುಖ್ಯಮಂತ್ರಿಯಾಗಿ ಮಾಡಿರುವುದು ಮಹಿಳಾ ಸಂಕುಲಕ್ಕೆ ಬಿಜೆಪಿ ನೀಡಿದ ಅನನ್ಯ ಕೊಡುಗೆ ಆಗಿದೆ ಎಂದು ಹಿರಿಯ ವಕೀಲ ಹಾಗೂ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್ ಹೇಳಿದ್ದಾರೆ. ಸಂಘಪರಿವಾರದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ದಿಟ್ಟ ಮಹಿಳೆ ಎಂದೇ ಗುರುತಿಸಿಕೊಂಡಂತಹ ರೇಖಾಗುಪ್ತ ನಿಜವಾಗಲು ಅಭಿನಂದನಾರ್ಹರು ಎಂದವರು ತಿಳಿಸಿದರು.
ಅರಸೀಕೆರೆ: ನವದೆಹಲಿ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದ ಭಾರತೀಯ ಜನತಾ ಪಾರ್ಟಿಯ ಸಮರ್ಥ ನಾಯಕಿ ರೇಖಾ ಗುಪ್ತರನ್ನು ಮುಖ್ಯಮಂತ್ರಿಯಾಗಿ ಮಾಡಿರುವುದು ಮಹಿಳಾ ಸಂಕುಲಕ್ಕೆ ಬಿಜೆಪಿ ನೀಡಿದ ಅನನ್ಯ ಕೊಡುಗೆ ಆಗಿದೆ ಎಂದು ಹಿರಿಯ ವಕೀಲ ಹಾಗೂ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎನ್.ಡಿ.ಪ್ರಸಾದ್ ಹೇಳಿದ್ದಾರೆ.
ದೆಹಲಿಯಲ್ಲಿ ಬನಿಯಾಗಳೆಂದು ಕರೆಯಲ್ಪಡುವ ಇವರು ಆರ್ಯವೈಶ್ಯ ಸಮಾಜದವರು. ನಡೆ, ನುಡಿ, ಸಜ್ಜನಿಕೆಯ ಸಾಂಸ್ಕೃತಿಕ ರಾಯಭಾರಿಯ ಪ್ರತೀಕವಾಗಿರುವ ಆರ್ಯವೈಶ್ಯ ಜನಾಂಗದವರು ಜಗನ್ಮಾತೆಯ ಸ್ವರೂಪಿಯಾದ ಕನ್ನಿಕಾಪರಮೇಶ್ವರಿಯ ಪರಮಭಕ್ತರು ಇವರು. ದೆಹಲಿ ಮಹಾನಗರ ಪಾಲಿಕೆಯ ಕೌನ್ಸಿಲರ್ ಆಗಿ, ಮೇಯರ್ ಆಗಿ ಪ್ರಾಮಾಣಿಕ ಆಡಳಿತಕ್ಕೆ ಹೆಸರಾದ ಹಾಗೂ ಸಂಘಪರಿವಾರದ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ ದಿಟ್ಟ ಮಹಿಳೆ ಎಂದೇ ಗುರುತಿಸಿಕೊಂಡಂತಹ ರೇಖಾಗುಪ್ತ ನಿಜವಾಗಲು ಅಭಿನಂದನಾರ್ಹರು ಎಂದವರು ತಿಳಿಸಿದರು.ಭಾರತೀಯ ಜನತಾ ಪಾರ್ಟಿ ಅಲ್ಪಸಂಖ್ಯಾತರನ್ನು ಹಾಗೂ ಪ್ರಾಮಾಣಿಕರನ್ನು ಮತ್ತು ಮಹಿಳೆಯರನ್ನು ಹೇಗೆ ಆದರಿಸುತ್ತದೆ ಎಂಬುದಕ್ಕೆ ಈ ಆಯ್ಕೆಯು ಒಂದು ಉದಾರಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.