ಬಡವರ ಬದುಕು-ಯುವಕರ ಉದ್ಯೋಗ ಸೃಷ್ಟಿ ಆಧಾರದಲ್ಲಿ ಚುನಾವಣೆ: ಆನಂದ್‌

| Published : Apr 08 2024, 01:06 AM IST

ಬಡವರ ಬದುಕು-ಯುವಕರ ಉದ್ಯೋಗ ಸೃಷ್ಟಿ ಆಧಾರದಲ್ಲಿ ಚುನಾವಣೆ: ಆನಂದ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಭಾರಿ ಲೋಕಸಭಾ ಚುನಾವಣೆ ಬಡವರ ಬದುಕು ಮತ್ತು ಯುವಕರ ಉದ್ಯೋಗ ಸೃಷ್ಟಿ ಎಂಬ ಆಧಾರದ ಮೇಲೆ ನಡೆಯಲಿದೆ ಎಂದು ಕಡೂರು ಕ್ಷೇತ್ರದ ಶಾಸಕ ಕೆ ಎಸ್ ಆನಂದ್ ತಿಳಿಸಿದರು.

ಕೇವಲ ಐದು ವರ್ಷಕ್ಕೆ ಪ್ರಜ್ವಲ್‌ ರೇವಣ್ಣ 5 ಬಾರಿ ಕಡೂರು ಕ್ಷೇತ್ರಕ್ಕೆ ಬಂದಿದ್ದೆ ಸಾಧನೆ: ವ್ಯಂಗ್ಯ

ಕನ್ನಡಪ್ರಭ ವಾರ್ತೆ, ಕಡೂರು

ಈ ಭಾರಿ ಲೋಕಸಭಾ ಚುನಾವಣೆ ಬಡವರ ಬದುಕು ಮತ್ತು ಯುವಕರ ಉದ್ಯೋಗ ಸೃಷ್ಟಿ ಎಂಬ ಆಧಾರದ ಮೇಲೆ ನಡೆಯಲಿದೆ ಎಂದು ಕಡೂರು ಕ್ಷೇತ್ರದ ಶಾಸಕ ಕೆ ಎಸ್ ಆನಂದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ 2019ರಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಮೈತ್ರಿಯಿಂದ ಗೆಲುವು ಸಾಧಿಸಿದ ಪ್ರಜ್ವಲ್ ರೇವಣ್ಣ ಕನಿಷ್ಠ ಸೌಜನ್ಯಕ್ಕಾದರೂ ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರಿಗೆ ಕೃತಜ್ಞತೆ ಹೇಳಲಿಲ್ಲ ಅವರಿಂದ ಯಾವ ಉಪಯೋಗ ಕೂಡ ನಮ್ಮ ಕ್ಷೇತ್ರಕ್ಕೆ ಆಗಲಿಲ್ಲ. ಇದೀಗ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ. ಐದು ವರ್ಷಗಳಲ್ಲಿ ಕೊಡುಗೆ ಕೂಡ ಏನೂ ಇಲ್ಲ. ಕೇವಲ ಐದು ವರ್ಷಕ್ಕೆ 5 ಬಾರಿ ಕಡೂರು ಕ್ಷೇತ್ರಕ್ಕೆ ಬಂದಿದ್ದೆ ಸಾಧನೆ ಆಗಿದೆ ಎಂದು ವ್ಯಂಗ್ಯವಾಡಿದರು. ನಂತರ ಅವರ ಜೆಡಿಎಸ್ ಪಕ್ಷದ ಶಾಸಕ, ಕಾರ್ಯಕರ್ತರ ಫೋನ್ ಕೂಡ ತೆಗೆದುಕೊಳ್ಳಲಿಲ್ಲ ಎಂದರೆ ಅವರ ಗೆಲುವಿಗೆ ಶ್ರಮಿಸಿದ ಕಾಂಗ್ರೆಸ್ ನವರ ಕಥೆ ಹೇಗಿರಬಹುದು. ಇದೀಗ ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿದ್ದು, ಸಂಸತ್ತಿನಲ್ಲಿ ಹಾಸನ ಕ್ಷೇತ್ರದ ಪರವಾಗಿ ದನಿ ಎತ್ತಲಿಲ್ಲ. ಜಲಜೀವ ಮಿಷನ್, ಬಹು ಗ್ರಾಮ ಯೋಜನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಶೇ 50 ರ ಪಾಲುದಾರಿಕೆಯಲ್ಲಿ ನಡೆವ ಕಾಮಗಾರಿಯನ್ನು ತಮ್ಮದೆಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಉತ್ಪ್ರೇಕ್ಷೆ ಇಲ್ಲ ಎಂದರು.

ಅಮಿತ್ ಶಾ ರವರೇ ಅಭ್ಯರ್ಥಿ ಬದಲಾಯಿಸಿಕೊಳ್ಳಿ ಎಂದು ಹೇಳಿದ್ದಾರೆ. ನಮ್ಮ ಶ್ರೇಯಸ್ ಪಟೇಲ್ ಒಳ್ಳೆಯ ಅಭ್ಯರ್ಥಿ ಯಾಗಿದ್ದು ಕೇವಲ 2 ಸಾವಿರ ವೋಟಿನಲ್ಲಿ ಶ್ರೇಯಸ್ ಪಟೇಲ್ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೋತಿದ್ದು ಈ ಬಾರಿ ಅನುಕೂಲಕರ ವಾತಾವರಣವಿದ್ದು ಹೆಚ್ಚಿನ ಮತಗಳನ್ನು ಕಡೂರು ಕ್ಷೇತ್ರದಲ್ಲಿ ಕೊಡಿಸುತ್ತೇವೆ ಎಂದರು.

ನಾವು ಅಭಿವೃದ್ಧಿ ಮಾಡಿ ಜನರಿಗೆ ಮತ ಕೇಳುತ್ತಿದ್ದೇವೆ. ಆದರೆ ಭಾವನಾತ್ಮಕ ಮತ್ತು ರಾಮಮಂದಿರದ ವಿಷಯ ಇಟ್ಟುಕೊಂಡು ಬಿಜೆಪಿಯವರು ಮತ ಕೇಳುತ್ತಿದ್ದಾರೆ ಎಲ್ಲೂ ಕೂಡ ಅಭಿವೃದ್ಧಿ ಕುರಿತು ಮಾತನಾಡುತ್ತಿಲ್ಲ. ಕೇಂದ್ರದ ಕಾಂಗ್ರೆಸ್ ನ ಅಧಿಕಾರದಲ್ಲಿ ಉದ್ಯೋಗ ಸೃಷ್ಟಿ ಬಿಟ್ಟರೆ ಬಿಜೆಪಿ ಸರಕಾರದಲ್ಲಿ ಸ್ಟಾರ್ಟ್ ಅಪ್ ಆಗಲೇ ಇಲ್ಲ ಎಂದರು.ಕರ್ನಾಟಕದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಯಾವ ಹಣವನ್ನು ನೀಡಲಿಲ್ಲ. ರಾಷ್ಟ್ರೀಯ ಯೋಜನೆ ಮಾಡುತ್ತೇವೆ ಎಂದು ಭದ್ರಾ ಮೇಲ್ದಂಡೆ ಯೋಜನೆಗೆ ನಯಾ ಪೈಸೆ ನೀಡದ ಬಿಜೆಪಿ ಕೇಂದ್ರ ಸರಕಾರ ಕರ್ನಾಟಕವನ್ನು ನಿರ್ಲಕ್ಷಿಸುತ್ತಾ ಬಂದಿದೆ ಇದನ್ನು ಜನ ತೀರ್ಮಾನಿಸಲಿದ್ದಾರೆ.ನಮ್ಮ ಮಾಜಿ ಶಾಸಕರಾದ ವೈ.ಎಸ್ ವಿ. ದತ್ತ ರವರು ಕೋಮುವಾದ ಟೀಕಿಸುತ್ತಿದ್ದ ಹಿರಿಯ ರಾಜಕಾರಣಿ ಅವರೇ ಬಿಜೆಪಿ ಶಾಲನ್ನು ಹಾಕಿಕೊಳ್ಳುತ್ತಾರೆ ಎಂಬ ನಿರೀಕ್ಷೆ ಮಾಡಿರಲಿಲ್ಲ. ಇದು ದೊಡ್ಡ ವಿಪರ್ಯಾಸ. ಇನ್ನು ಜೆಡಿಎಸ್ ನ ಪ್ರಜ್ವಲ್ ರವರಿಗೆ ಬಿಜೆಪಿ ಬೆಳ್ಳಿ ಪ್ರಕಾಶ್ ರವರು ಕೂಡ ಜೆಡಿಎಸ್ ಗೆ ಸಹಕಾರ ಮಾಡುವುದು ಅನುಮಾನ. ಬಹಳ ಬುದ್ಧಿವಂತ ಬಿಜೆಪಿ ಮತದಾರರು ಕೂಡ ಚಿಹ್ನೆ ಇಲ್ಲದ ಕಾರಣ ಮತ ನೀಡುವ ಮನಸಿಲ್ಲದೆ ಮತ ನಡುವರು. ಜೆಡಿಎಸ್ ನ ಬಹುತೇಕ ಮತಗಳು ಕಾಂಗ್ರೆಸ್ಸಿಗೆ ಬರುವ ಸಾಧ್ಯತೆ ಇದೆ. ಜೂನ್ 4 ಕಳೆದ ಮೇಲೆ ಜೆಡಿಎಸ್ ಧೂಳಿಪಟವಾಗಲಿದೆ ಎಂದರು.

ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಚಿಕ್ಕಮಗಳೂರು ಲೋಕಸಭೆಯಲ್ಲಿದ್ದ ಕಡೂರು ತಾಲೂಕನ್ನು ಹಾಸನಕ್ಕೆ ಸೇರಿಸಿದ್ದು ದೇವೇಗೌಡರ ಸ್ವಾರ್ಥಕ್ಕಾಗಿ. ಬೇರೆ ಕೋಮುಗಳ ಯಾರೂ ನಿಲ್ಲದಂತೆ ಹಾಸನಕ್ಕೆ ಸೇರಿಸಲಾಗಿದೆ. ಪ್ರಜ್ವಲ್ ರವರ ಬಗ್ಗೆ ಹಾಸನ ಜನತೆಗೆ ತಿಳಿದಿದೆ. ಪ್ರಜ್ವಲ್ ಮತ್ತು ನಿಖಿಲ್ ರವರನ್ನು ರಾಜಕೀಯವಾಗಿ ಮೇಲೆ ತರಲು ದೇವೇಗೌಡರು ಕುಟುಂಬ ರಾಜಕಾರಣಕ್ಕಾಗಿ ಜೆಡಿಎಸ್‌ ನ್ನು ಬಲಿ ಕೊಡುತ್ತಿದ್ದಾರೆ ಎಂದು ಟೀಕಿಸಿದರು.

7ಕೆಕೆಡಿಯು1. ಶಾಸಕ ಕೆ. ಎಸ್. ಆನಂದ್