ಎಂ.ಸಿ. ತಳಲು ಗ್ರಾಪಂ ಅಧ್ಯಕ್ಷರಾಗಿ ರಂಜಿತಾ ಅವಿರೋಧ ಆಯ್ಕೆ

| Published : Oct 22 2024, 12:11 AM IST

ಎಂ.ಸಿ. ತಳಲು ಗ್ರಾಪಂ ಅಧ್ಯಕ್ಷರಾಗಿ ರಂಜಿತಾ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಎಂ.ಸಿ. ತಳಲು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ದೊರೆಯುವಂತೆ ಎಲ್ಲಾ ಸದಸ್ಯರೊಡಗೂಡಿ ಪ್ರಾಮಾಣಿಕತೆಯಿಂದ ದುಡಿ

ಕನ್ನಡಪ್ರಭ ವಾರ್ತೆ ಸರಗೂರುತಾಲೂಕಿನ ಎಂ.ಸಿ. ತಳಲು ಗ್ರಾಪಂ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ರಂಜಿತಾ ವೆಂಕಟರಾಮು ಅವಿರೋಧವಾಗಿ ಆಯ್ಕೆಯಾದರು.ಸೋಮವಾರ ಗ್ರಾಪಂ ಕಚೇರಿಯಲ್ಲಿ ನಡೆದ ಚುನಾವಣ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿ ರಂಜಿತಾ ಅವರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಸರಗೂರಿನ ನೀರಾವರಿ ಇಲಾಖೆಯ ಎಇಇ ಹಾಗೂ ಚುನಾವಣಾಧಿಕಾರಿ ಉಷಾ ಘೋಷಿಸಿದರು.ನೂತನ ಅಧ್ಯಕ್ಷೆ ರಂಜಿತಾ ವೆಂಕಟರಾಮು ಮಾತನಾಡಿ, ಎಂ.ಸಿ. ತಳಲು ಗ್ರಾಪಂ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಮತ್ತು ಸಾರ್ವಜನಿಕರಿಗೆ ಮೂಲಭೂತ ಸೌಲಭ್ಯ ದೊರೆಯುವಂತೆ ಎಲ್ಲಾ ಸದಸ್ಯರೊಡಗೂಡಿ ಪ್ರಾಮಾಣಿಕತೆಯಿಂದ ದುಡಿಯುವುದಾಗಿ ಹೇಳಿದರು.ಪಿಡಿಒ ಜೆ. ಪರಮೇಶ್, ಎಸ್.ಡಿ.ಎ ಗಜೇಂದ್ರ, ಕ್ಲರ್ಕ್ ಹಾಗೂ ಕಂಪ್ಯೂಟರ್ ಆಪರೇಟರ್ ಶಿವಲಿಂಗಪ್ರಸಾದ್ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.ಉಪಾಧ್ಯಕ್ಷೆ ಲಕ್ಷ್ಮೀ ಕುಮಾರ್, ಸದಸ್ಯರಾದ ಮಾಜಿ ಅಧ್ಯಕ್ಷ ಕೆಂಡನಾಯ್ಕ, ಪ್ರಕಾಶ್ ಚಂದ್ರ, ಅಂಬಿಕಾ, ರಾಜಕುಮಾರ್, ರಮೇಶ್, ಚಿಕ್ಕಕ್ಯಾತ, ಲಕ್ಷ್ಮೀ ಮಾದಪ್ಪ, ನಿಂಗಮ್ಮ, ಭಾಗ್ಯಮ್ಮ, ನಾಗಮ್ಮ, ಜಯಲಕ್ಷ್ಮಿಪುರದ ಬೆಂಗಳೂರು ರಾಜು, ನಾಗೇಂದ್ರ ಇವರ ಸಹಾಯ ಸಹಕಾರದೊಂದಿಗೆ ಅಧ್ಯಕ್ಷರ ಆಯ್ಕೆಗೆ ಹೆಚ್ಚು ಶ್ರಮಿಸಿದ್ದರು.ಜಯಲಕ್ಷ್ಮಿಪುರದ ಮಾಜಿ ಯಜಮಾನರಾದ ದೊಡ್ಡಬೋವಿ, ರಾಮಬೋವಿ, ಜೈರಾಮ ಮುತ್ತಿಗೆಹುಂಡಿಯ ಭವನೇಶ್, ಮಲ್ಲಪ್ಪ, ಸಕಲೇಶ್, ಮಂಜು, ಶಿವಪುರದ ಪ್ರಕಾಶ್, ನಾಗರಾಜು, ಕೃಷ್ಣಪ್ಪ, ದೊಡ್ಡ ಬರಗಿಯ ಚಂದ್ರು, ಮಹದೇವಣ್ಣ, ಕುಮಾರ, ನಿಂಗಪ್ಪ, ರವಿ, ಕರಿಯಪ್ಪ, ಲೋಕೇಶ್, ಮಾಜಿ ಅಧ್ಯಕ್ಷ ನಾಗೇಂದ್ರ, ನಾಗೇಶ್, ಸಿದ್ದರಾಜು, ವೆಂಕಟಸ್ವಾಮಿ, ಚೆನ್ನಗುಂಡಿ, ಎಂ.ಸಿ. ತಳಲಿನ ಜಯಲಕ್ಷ್ಮೀಪುರ, ಮುಗುತನಮೂಲೆ, ಶಿವಪುರ, ಕಾನಕಾನಳ್ಳಿ, ಸಿದ್ದಾಪುರ, ದೊಡ್ಡಬರಗಿ,ಕಾಳನಹುಂಡಿ ಮುಂತಾದ ಗ್ರಾಮಗಳ ಮುಖಂಡರು ಹಾಜರಿದ್ದು ನೂತನ ಅಧ್ಯಕ್ಷರನ್ನು ಸನ್ಮಾನಿಸಿದರು.