ಸಾರಾಂಶ
ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಯಾವುದೇ ರಾಜಕಾರಣಿಗಳ ಒತ್ತಡಗಳಿಗೆ ಮಣಿಯದೇ ಪ್ರಾಮಾಣಿಕವಾಗಿ ಚುನಾವಣಾ ಆಯೋಗದಡಿಯಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾಗಿದ್ದು. ಇದರಲ್ಲಿ ಯಾರೇ ನಿರ್ಲಕ್ಷವಹಿಸಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಎಚ್ಚರಿಕೆ ನೀಡಿದರು.
ಬಂಗಾರಪೇಟೆ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವುದರಿಂದ ಚುನಾವಣಾ ನೀತಿ ಸಂಹಿತಿ ಜಾರಿಯಲ್ಲಿರುವುದರಿಂದ ಯಾವುದೇ ರಾಜಕಾರಣಿಗಳ ಒತ್ತಡಗಳಿಗೆ ಮಣಿಯದೇ ಪ್ರಾಮಾಣಿಕವಾಗಿ ಚುನಾವಣಾ ಆಯೋಗದಡಿಯಲ್ಲಿ ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಬೇಕಾಗಿದ್ದು. ಇದರಲ್ಲಿ ಯಾರೇ ನಿರ್ಲಕ್ಷವಹಿಸಿದ್ದಲ್ಲಿ ಅಂತಹವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಎಚ್ಚರಿಕೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಚುನಾವಣಾ ಭಾಗವಹಿಸುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸೂಕ್ತ ಅರಿವು ಮೂಡಿಸುವ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಚುನಾವಣೆ ಅಂಗವಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪ್ರಾಮಾಣಿಕವಾಗಿ ಚುನಾವಣೆಯನ್ನು ನಡೆಸುವ ದೃಷ್ಠಿಯಿಂದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈಹಲರ್ಟ್ ಆಗಿರಬೇಕು. ಮತದಾನಕ್ಕೆ ತೆರಳುವ ಅಧಿಕಾರಿ ಮತ್ತು ಸಿಬ್ಬಂದಿ ಎಚ್ಚರಿಕೆಯಿಂದರಿಬೇಕು. ಮತದಾನ ಮಾಡಲು ಬರುವ ಮತದಾರರೊಂದಿಗೆ ಉತ್ತಮ ವಿಶ್ವಾಸದಿಂದ ನಡೆದುಕೊಳ್ಳುವುದರಿಂದ ಶೇ ೧೦೦% ಮತದಾನವನ್ನು ಯಾವುದೇ ಗೊಂದಲವಿಲ್ಲದೇ ಶಾಂತಿಯುತವಾಗಿ ನಡೆಸಲು ಸಾಧ್ಯವಾಗಲಿದೆ ಎಂದು ಹೇಳಿದರು.ಪ್ರತಿಯೊಂದು ಮತದಾನ ಕೇಂದ್ರದಲ್ಲಿ ಬೇಸಿಗೆ ಕಾಲವಾಗಿರುವುದರಿಂದ ಎರಡು ಪ್ಯಾನ್, ಎರಡು ಸಿಎಐಎಲ್ ಬಲ್ಪ್, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಈಗಾಗಲೇ ತಿಳಿಸಿದ್ದು, ಮತದಾನ ಮಾಡಲು ಬರುವ ಮತದಾರರಿಗೂ ಸಹ ಸಾಲಿನಲ್ಲಿ ನಿಂತಾಗ ನೆರಳಿನಲ್ಲಿಯೇ ಇರುವಾಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕೆಜಿಎಫ್ ಜಿಲ್ಲಾ ಎಸ್ಪಿ ಕೆ.ಎಂ.ಶಾಂತರಾಜು, ಸಹಾಯಕ ಚುನಾವಣಾಧಿಕಾರಿ ಶಿವಕುಮಾರ್, ತಹಸೀಲ್ದಾರ್ ಯು.ರಶ್ಮಿ, ತಾಲೂಕು ಸ್ವೀಪ್ ಸಮಿತಿ ಅಧ್ಯಕ್ಷ ಹಾಗೂ ತಾಪಂ ಇಒ ಎಚ್.ರವಿಕುಮಾರ್ ಮುಂತಾದವರು ಹಾಜರಿದ್ದರು.