ಚುನಾವಣೆ: ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ

| Published : Sep 28 2025, 02:00 AM IST

ಚುನಾವಣೆ: ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ
Share this Article
  • FB
  • TW
  • Linkdin
  • Email

ಸಾರಾಂಶ

ಟಿಎಪಿಸಿಎಂಎಸ್ ನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ 8 ಮಂದಿ ಜೆಡಿಎಸ್ ಬೆಂಬಲಿತರು ಸ್ಪರ್ಧಿಸಿದ್ದಾರೆ. ಸಿಎಸ್ಪಿ ಶಾಸಕ, ಸಂಸದ ಹಾಗೂ ಸಚಿವರಾಗಿ ಸಂಸ್ಥೆ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕಿನ ಟಿಎಪಿಸಿಎಂಎಸ್ ಆಡಳಿತ ಮಂಡಳಿ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಜೆಡಿಎಸ್ ರೈತವಿಭಾಗದ ಮಾಜಿ ರಾಜ್ಯ ಉಪಾಧ್ಯಕ್ಷ ಗವಿಗೌಡ (ಪ್ರವೀಣ್) ನೇತೃತ್ವದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿ ಮತಯಾಚನೆ ಮಾಡಿದರು.

ರೈತ ವಿಭಾಗದ ಮಾಜಿ ರಾಜ್ಯ ಉಪಾಧ್ಯಕ್ಷ ಗವಿಗೌಡ (ಪ್ರವೀಣ್ ) ಮಾತನಾಡಿ, ಟಿಎಪಿಸಿಎಂಎಸ್ ನ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಮಾಜಿ ಸಚಿವರಾದ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ 8 ಮಂದಿ ಜೆಡಿಎಸ್ ಬೆಂಬಲಿತರು ಸ್ಪರ್ಧಿಸಿದ್ದಾರೆ. ಸಿಎಸ್ಪಿ ಶಾಸಕ, ಸಂಸದ ಹಾಗೂ ಸಚಿವರಾಗಿ ಸಂಸ್ಥೆ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ. ಜತೆಗೆ ಹಿಂದಿನ ಆಡಳಿತ ಮಂಡಳಿಯೂ ಸಹ ಮಾದರಿಯಾಗಿ ಕೆಲಸ ಮಾಡಿ ಅಭಿವೃದ್ಧಿ ಪಡಿಸಿದ್ದಾರೆ. ಹಾಗಾಗಿ ಕ್ಷೇತ್ರದ ಮತದಾರು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಹೆಚ್ಚಿನ ಮತ ನೀಡುವ ಮೂಲಕ ಗೆಲ್ಲಿಸಿಕೊಟ್ಟು ಸಿ.ಎಸ್.ಪುಟ್ಟರಾಜು ಅವರ ಕೈಬಲಪಡಿಸಬೇಕು ಎಂದು ಮನವಿ ಮಾಡಿದರು.

ಈ ವೇಳೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಡಿ.ಶ್ರೀನಿವಾಸ್, ಚಿಕ್ಕಾಡೆ ಎಚ್. ಗಿರೀಶ್, ಎ.ಕೃಷ್ಣ, ಪಿ.ಎಲ್.ಆದರ್ಶ, ಬೊಮ್ಮರಾಜು, ನರಸಿಂಹನಾಯಕ, ಪ್ರೇಮಪುಟ್ಟೇಗೌಡ, ಎಂ.ಬಿ.ಶ್ರೀಲಾ, ಸೊಸೈಟಿ ನಿರ್ದೇಶಕ ಅಭಿಷೇಕ್, ಯಶ್ವಂತ್, ರವೀಂದ್ರ, ರೇವಣ್ಣ, ಚೇತನ್, ಗುಡ್ಡ ಹೇಮಂತ್, ತಾರಾ ಸೇರಿದಂತೆ ಜೆಡಿಎಸ್ ಪಕ್ಷದ ಮುಖಂಡರು ಹಾಜರಿದ್ದರು.

ಟಿಎಪಿಸಿಎಂಎಸ್ ಚುನಾವಣೆ: ಜೆಡಿಎಸ್ ಪ್ರಚಾರ

ಪಾಂಡವಪುರ: ಟಿಎಪಿಸಿಎಂಎಸ್ ನಿರ್ದೇಶಕ ಸ್ಥಾನಗಳ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ತಾಲೂಕಿನ ಚಿಕ್ಕಮರಳಿ ಗ್ರಾಮದಲ್ಲಿ ಪ್ರಚಾರ ನಡೆಸಿದರು.

ಇದೇ ವೇಳೆ ಡಾ.ಶ್ರೀನಿವಾಸ್ ಅವರು, ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ತಮ್ಮ ಮತಕೊಟ್ಟು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿ ಅಭ್ಯರ್ಥಿಗಳ ಚುನಾವಣಾ ಖರ್ಚಿಗೆ 10 ಸಾವಿರ ದೇಣಿಗೆ ನೀಡಿದರು.

ಈ ವೇಳೆ ಅಭ್ಯರ್ಥಿಗಳಾದ ಡಿ.ಶ್ರೀನಿವಾಸ್, ಎ.ಕೃಷ್ಣ, ಎಚ್.ಗಿರೀಶ್, ಪಿ.ಎಲ್.ಆದರ್ಶ, ನರಸಿಂಹನಾಯಕ, ಪ್ರೇಮ, ಬೊಮ್ಮರಾಜು, ಎಂ.ಬಿ.ಶೀಲಾಜಗದೀಶ್, ಕಿರಣ್‌ಕುಮಾರ್, ಮುಖಂಡರಾದ ಡಾ.ಶ್ರೀನಿವಾಸ್, ಚಂದ್ರಶೇಖರ್, ಪಿ.ರಮೇಶ್, ಕೃಷ್ಣ, ಆರ್.ಕೃಷ್ಣೇಗೌಡ. ವಿಜಯೇಂದ್ರಮೂರ್ತಿ, ಹಾಜರಿದ್ದರು.