ಕುದೂರು: ತಿಂಗಳ ಹಿಂದೆ ಬೀಸಿದ ಬಿರುಗಾಳಿ ಮಳೆಗೆ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು, ಕಂಬ ಮತ್ತು ತಂತಿಗಳು ವಾಲಿಕೊಂಡು ಕೈಗೆಟುಕುವಂತಿದ್ದು ಜನರು ಪ್ರಾಣಭೀತಿಯಿಂದ ಓಡಾಡುವಂತಾಗಿದೆ.ಕುದೂರು ಗ್ರಾಮದ ಬಳಿಯಿರುವ ಕೋಡಿಹಳ್ಳಿ ಕಾಲೋನಿಯಲ್ಲಿ ಬಲಿಪೀಠದಂತೆ 11 ಕೆ.ವಿ ವಿದ್ಯುತ್ ತಂತಿಗಳಿರುವ ಲೈಟ್ ಕಂಬ ಕಾಯುತ್ತಿದೆ
ಕುದೂರು: ತಿಂಗಳ ಹಿಂದೆ ಬೀಸಿದ ಬಿರುಗಾಳಿ ಮಳೆಗೆ ಮರ ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದು, ಕಂಬ ಮತ್ತು ತಂತಿಗಳು ವಾಲಿಕೊಂಡು ಕೈಗೆಟುಕುವಂತಿದ್ದು ಜನರು ಪ್ರಾಣಭೀತಿಯಿಂದ ಓಡಾಡುವಂತಾಗಿದೆ.
ಕುದೂರು ಗ್ರಾಮದ ಬಳಿಯಿರುವ ಕೋಡಿಹಳ್ಳಿ ಕಾಲೋನಿಯಲ್ಲಿ ಬಲಿಪೀಠದಂತೆ 11 ಕೆ.ವಿ ವಿದ್ಯುತ್ ತಂತಿಗಳಿರುವ ಲೈಟ್ ಕಂಬ ಕಾಯುತ್ತಿದೆ.ಕಳೆದ ತಿಂಗಳು ಬೀಸಿದ ಗಾಳಿ ಹಾಗೂ ಮಳೆಗೆ ಮರದ ರೆಂಬೆಮುರಿದು ವಿದ್ಯುತ್ ಲೈನ್ ಮೇಲೆ ಬಿದ್ದು ತಂತಿಗಳು ಇಳಿಬಿದ್ದು ವಿದ್ಯುತ್ ಕಂಬ ವಾಲಿಕೊಂಡಿದೆ. ರೆಂಬೆ ತೆಗೆದು ಹೋದವರು ಕಂಬವನ್ನು ಸರಿಯಾಗಿ ನಿಲ್ಲಿಸಿ ಕೈಗೆಟುಕುತ್ತಿರುವ ತಂತಿಗಳನ್ನು ಸರಿಪಡಿಸುವ ಕೆಲಸವನ್ನು ಬೆಸ್ಕಾಂ ಕಚೇರಿಯವರು ಮಾಡಿಲ್ಲ.
ಕಂಬ ದಿನೇ ದಿನೇ ವಾಲುತ್ತಿದೆ. ಅಪಾಯಕ್ಕೆ ಹತ್ತಿರವಾಗುತ್ತಿದೆ. ಇದು ಬೇಸಿಗೆಯಾಗಿರುವ ಕಾರಣ ಶಾಲಾ ಮಕ್ಕಳಿಗೆ ರಜೆ ಇದೆ. 11.ಕೆ.ವಿ. ವಿದ್ಯುತ್ ತಂತಿಗಳು ಜೋತುಬಿದ್ದು ಕೈಗೆಟುಕುವಂತಿದೆ. ಇದರಿಂದ ಮಕ್ಕಳು ಅರಿವಿಲ್ಲದೆ ಆಟವಾಡುವಾಗ ಮುಟ್ಟಿದರೆ ಅಪಾಯವಾಗುವ ಸಾಧ್ಯತೆಗಳಿವೆ.ಕೋಡಿಹಳ್ಳಿ ಕಾಲೂನಿ ನಿವಾಸಿ ಮೆಕಾನಿಕ್ ವಸಂತ್‌ಕುಮಾರ್ ಬೆಸ್ಕಾಂ 1912 ದೂರವಾಣಿಗೆ ಸಾಕಷ್ಟು ಬಾರಿ ಕರೆ ಮಾಡಿ ದೂರು ನೀಡಿದ್ದಾರೆ. ಮತ್ತು ಕುದೂರು ಕಚೇರಿಗೆ ಖುದ್ದಾಗಿ ಹೋಗಿ ಸಮಸ್ಯೆ ವಿವರಿಸಿ ಬಂದು ತಿಂಗಳಾಗಿವೆ. ಆದರೆ ಇದನ್ನು ಗಂಭೀರವಾಗಿ ತೆಗೆದುಕೊಳ್ಳದೆ. ಇಗೋ ಬಂದೆ ಅಗೋಬಂದೆ ಎಂಬ ಉತ್ತರಗಳನ್ನು ನೀಡಿ ಕಳಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನಾದರು ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಅವಘಡ ಸಂಭವಿಸುವ ಮುನ್ನ ವಿದ್ಯುತ್ ಕಂಬ ಮತ್ತು ಜೋತುಬಿಎದ್ದ ತಂತಿಗಳನ್ನು ಸರಿಪಡಿಸಲು ಕೋಡಿಹಳ್ಳಿ ಕಾಲೂನಿ ನಿವಾಸಿಗಳು ಮನವಿ ಮಾಡಿದ್ದಾರೆ.14ಕೆಆರ್ ಎಂಎನ್ 5,6.ಜೆಪಿಜಿ
5.ಕುದೂರು ಗ್ರಾಮದ ಬಳಿಯಿರುವ ಕೋಡಿಹಳ್ಳಿ ಕಾಲೂನಿ ರಸ್ತೆ ಪಕ್ಕದಲ್ಲಿ 11. ಕೆ.ವಿ. ಲೈನ್ ಇರುವ ವಿದ್ಯುತ್ ಕಂಬ ಮನೆಯ ಕಡೆಗೆ ವಾಲಿರುವುದು.6.ಕೈಗೆಟುವಂತೆ ಜೋತುಬಿದ್ದಿರುವ ವಿದ್ಯುತ್ ತಂತಿಗಳು.