ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ತಾಲೂಕಿನ ಹಳಿಂಗಳಿ ಗ್ರಾಮದ ಅಂಬೇಡ್ಕರ್ ಪ್ರದೇಶದ ವಿದ್ಯುತ್ ಟ್ರಾನ್ಸಫಾರ್ಮರ್ ಶಾರ್ಟ್ ಆದ ಘಟನೆ ಇತ್ತೀಚಿಗೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ವಿದ್ಯುತ್ ಶಾಕ್ ನಿಂದಾಗಿ ಈ ಭಾಗದ ಹತ್ತಾರು ಮನೆಗಳಲ್ಲಿರುವ ಫ್ಯಾನ್, ಟಿವಿ ಸೇರಿ ಹಲವು ಇಲೇಕ್ಟ್ರಿಕ್ ಸಾಮಾನುಗಳು ಹಾನಿಗೊಳಗಾಗಿವೆ. ಪ್ರ‍್ರಲ್ಹಾದ ದೊಡಮನಿ ಅವರ ಮನೆಯಲ್ಲಿರುವ ಫ್ಯಾನ್, ಟಿವಿ, ಪ್ರೀಜ್, ಮನೆಯ ಅಡುಗೆ ಸಾಮಾನುಗಳು, ಬಟ್ಟೆ, ಬರೆಗಳೆಲ್ಲವು ಹಾನಿಗೊಳಗಾಗಿದ್ದು, ಕುಟುಂಬ ಕಂಗಾಲಾಗಿದೆ. ಇದೇ ಏರಿಯಾದಲ್ಲಿರುವ ಮನೆಯೊಂದರಲ್ಲಿ ಸ್ವಿಚ್ ಬಂದ ಮಾಡಲು ಹೋದ ಮಹಿಳೆಗೆ ಶಾಕ್ ಹೊಡೆದ ಘಟನೆ ಸಹ ನಡೆದಿದೆ. ವಿದ್ಯುತ್ ಶಾಕ್ ನಿಂದಾಗಿ ಬಾರಿ ಪ್ರಮಾಣದ ಹಾನಿಯಾಗಿದ್ದರು ಸಹ ಸಂಬಂಧಿತ ಇಲಾಖೆಯು ಹಾನಿಯ ಕುರಿತಾಗಿ ಪಟ್ಟಿ ಮಾಡುವ ಕಾರ್ಯ ಮಾತ್ರ ಮಾಡಿದ್ದು, ಹಾಳಾದ ಸಾಮಗ್ರಿಗಳ ಬಗೆಗೆ ಯಾವುದೇ ಖಚಿತ ಭರವಸೆ ನೀಡಿಲ್ಲ. ಹಾಗಾಗಿ ನಮಗೆ ಹಾನಿಗೊಳಗಾದ ವಸ್ತುಗಳನ್ನು ಹೆಸ್ಕಾಂ, ಜಿಲ್ಲಾಡಳಿತ ಅಥವಾ ಸರ್ಕಾರವೇ ಖರೀದಿಸಿ ಕೊಡುವಂತೆ ಸ್ಥಳಿಯರು ಒತ್ತಾಯಿಸಿದ್ದಾರೆ.