ಸಾರಾಂಶ
ಜಗತ್ತು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಈ ಜಾಗತಿಕ ವ್ಯವಸ್ಥೆಯಲ್ಲಿ 2050ಕ್ಕೆ ವಿದ್ಯುತ್ ಗೂ ಬೇಡಿಕೆ ಹೆಚ್ಚಾಗುತ್ತದೆ. ನಮಗೆ ಇಂದಿನ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ನಾಲ್ಕರಷ್ಟು ವಿದ್ಯುತ್ ಅಂದು ಬೇಕಾಗಬಹುದು ಎಂದು ಹಿಟಾಚಿ ಹಿರಿಯ ಪ್ರಧಾನ ವಿಜ್ಞಾನಿ ಡಾ. ಒ.ಡಿ. ನಾಯ್ಡು ಅವರು ತಿಳಿಸಿದರು.
ಕನ್ನಡಪ್ರಭ ವಾರ್ತೆ ತುಮಕೂರು
ಜಗತ್ತು ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂದುತ್ತಿದೆ. ಈ ಜಾಗತಿಕ ವ್ಯವಸ್ಥೆಯಲ್ಲಿ 2050ಕ್ಕೆ ವಿದ್ಯುತ್ ಗೂ ಬೇಡಿಕೆ ಹೆಚ್ಚಾಗುತ್ತದೆ. ನಮಗೆ ಇಂದಿನ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ನಾಲ್ಕರಷ್ಟು ವಿದ್ಯುತ್ ಅಂದು ಬೇಕಾಗಬಹುದು ಎಂದು ಹಿಟಾಚಿ ಹಿರಿಯ ಪ್ರಧಾನ ವಿಜ್ಞಾನಿ ಡಾ. ಒ.ಡಿ. ನಾಯ್ಡು ಅವರು ತಿಳಿಸಿದರು.ನಗರದ ಎಸ್‌ಐಟಿ ಕಾಲೇಜಿನಲ್ಲಿ ಹಮ್ಮಿ ಕೊಂಡಿದ್ದ ‘ಟೆಕ್ನಿಷಿಯಂ- 2025’ ಎಂಬ ಮೂರನೇ ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು ''''''''ಶಕ್ತಿ ಪರಿವರ್ತನೆಯಲ್ಲಿ ಸವಾಲುಗಳು ಮತ್ತು ಅವಕಾಶಗಳು'''''''' ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಇಸ್ರೋ ಸಿಸ್ಟಮ್ ಎಂಜಿನಿಯರಿಂಗ್ ವಿಭಾಗದ ಗ್ರೂಪ್ ಡೈರೆಕ್ಟರ್ ಡಾ. ಮಧುಸೂದನ್ ಸಿ.ಎಸ್. ಬಾಹ್ಯಾಕಾಶದ ಸವಾಲುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿ, ಯಾವುದೇ ಒಂದು ಕೆಲಸವನ್ನು ನೀಡುವಾಗ ನಾವು ಮಾಡುತ್ತಿದ್ದೇವೆ, ನಮಗೆ ಆ ಕೆಲಸದ ಬಗ್ಗೆ ಏನು ಗೊತ್ತು ಎಂಬುದರ ಬಗ್ಗೆ ನಮಗೆ ಸ್ಪಷ್ಟತೆ ಇರಬೇಕು. ಆಗ ನಾವು ಮಾಡುವ ಕೆಲಸ ಯಶಸ್ವಿಯಾಗುತ್ತದೆ ಎಂದು ಹೇಳಿದರು.ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಸಿದ್ಧಗಂಗಾ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಟಿ.ಕೆ. ನಂಜುಂಡಪ್ಪ ಮಾತನಾಡಿ, ವಿದ್ಯುತ್ ವಿಜ್ಞಾನಕ್ಕೆ ಅನ್ವಹಿಸುವ ಸ್ಮಾರ್ಟ್ ಸಿಸ್ಟಮ್ ಗಳ ಕ್ಷೇತ್ರದಲ್ಲಿನ ಪ್ರಗತಿಗಳು, ಸವಾಲುಗಳು ಮತ್ತು ಅವಿಷ್ಕಾರಗಳನ್ನು ಚರ್ಚಿಸಲು ಭಾರತ ಮತ್ತು ವಿದೇಶಗಳ ಪ್ರಮುಖ ಸಂಶೋಧಕರು, ಶಿಕ್ಷಣ ತಜ್ಞರು, ಉದ್ಯಮ ತಜ್ಞರನ್ನು ಒಟ್ಟುಗೂಡಿಸುವ ಉದ್ದೇಶದಿಂದ ಈ ಸಮ್ಮೇಳನವನ್ನು ಆಯೋಜಿಸಿದ್ದು, ಅದರ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಮ್ಮೇಳನ ಸಂಘಟನಾಧ್ಯಕ್ಷೆ ಡಾ. ರಶ್ಮಿ ಗಣ್ಯರನ್ನು ಸ್ವಾಗತಿಸಿದರು. ಎಚ್.ಎಸ್. ಶ್ರೀಧರ್ ವರದಿ ಮಂಡಿಸಿದರು. ಈ ವೇಳೆ ಸಿದ್ಧಗಂಗಾ ವಿದ್ಯಾಸಂಸ್ಥೆಯ ಜಂಟಿ ಕಾರ್ಯದರ್ಶಿ ಹಾಗೂ ಎಸ್.ಐ.ಟಿ. ಮುಖ್ಯ ಕಾರ‍್ಯನಿರ್ವಾಹಕ ಅಧಿಕಾರಿ ಡಾ. ಶಿವಕುಮಾರಯ್ಯ, ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಸ್.ವಿ. ದಿನೇಶ್, ಸಂಯೋಜಕ ವಿನಾಯಕ್ ಉಪಸ್ಥಿತರಿದ್ದರು.