ರಾಜ್ಯದ ಎಸ್ಕಾಂಗಳ ಖಾಸಗೀಕರಣ ತಡೆಗಟ್ಟಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ಇಲ್ಲಿಯ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಶಿಗ್ಗಾಂವಿ ತಹಸೀಲ್ದಾರ್ ಮೂಲಕ ಬೆಂಗಳೂರು ಕೆ.ಇ.ಆರ್.ಸಿ, ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.
ಶಿಗ್ಗಾಂವಿ:ರಾಜ್ಯದ ಎಸ್ಕಾಂಗಳ ಖಾಸಗೀಕರಣ ತಡೆಗಟ್ಟಬೇಕೆಂದು ಕರ್ನಾಟಕ ರಾಜ್ಯ ಅನುಮತಿ ಪಡೆದ ಇಲ್ಲಿಯ ವಿದ್ಯುತ್ ಗುತ್ತಿಗೆದಾರ ಸಂಘದಿಂದ ಶಿಗ್ಗಾಂವಿ ತಹಸೀಲ್ದಾರ್ ಮೂಲಕ ಬೆಂಗಳೂರು ಕೆ.ಇ.ಆರ್.ಸಿ, ಕಾರ್ಯದರ್ಶಿಯವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ಮುಖಂಡ ಮಂಜುನಾಥ ಮಣ್ಣನವರ ಮಾತನಾಡಿ, ರಾಜ್ಯದ ಎಸ್ಕಾಂಗಳ ಖಾಸಗೀಕರಣ ಮತ್ತು ಟಾಟಾ ಪವರ್ ಕಂಪನಿಗೆ ವಿದ್ಯುತ್ ವಿತರಣಾ ಪರವಾನಗಿಯನ್ನು ನೀಡುತ್ತಿರುವುದು ನಮ್ಮ ಸಂಘದ ಬಲವಾದ ಆಕ್ಷೇಪಣೆ ಇದ್ದು, ಲಕ್ಷಾಂತರ ನೌಕರರು, ಗುತ್ತಿಗೆದಾರರು ಖಾಸಗೀಕರಣದಿಂದಾಗಿ ಬೀದಿಗೆ ಬರುವಂತಾಗುತ್ತದೆ.ದಯಾಳುಗಳಾದ ತಾವು ರಾಜ್ಯದ ಹಿತದೃಷ್ಟಿಯಿಂದ ಮತ್ತು ಗುತ್ತಿಗೆದಾರರ ಹಿತದೃಷ್ಟಿಯಿಂದ ಎಸ್ಕಾಂಗಳನ್ನು ಖಾಸಗಿಕರಣಗೊಳಿಸಬಾರದೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಮಂಜುನಾಥ ಮಣ್ಣನವರ, ಅಬ್ದುಲ್‌ಸಾಬ ಹರಪನಹಳ್ಳಿ, ನಾಗಯ್ಯ ಎಸ್. ಹಿರೇಮಠ, ಮುದಕಪ್ಪ ಹೊನ್ನಳ್ಳಿ, ನವೀನ ಸಾಸನೂರ, ಶೀರಾಜ ಮುಲ್ಲಾ, ಬಸವರಾಜ ಸಂಜೀವಣ್ಣವರ, ಹಜರತಲಿ ದೊಡ್ಡಮನಿ, ಎಫ್.ಜಿ. ಪೂಜಾರ, ಸಿ.ಎಸ್. ಅಜ್ಜಣ್ಣವರ ಸೇರಿದಂತೆ ಹಲವರು ಇದ್ದರು.