ಕಚೇರಿಯಲ್ಲಿ ಯಾವುದೇ ಗುತ್ತಿಗೆದಾರರು ಫೈಲ್ ಕಳೆದು ಹೋದರೆ ಅದನ್ನು ಕೂಡಲೆ ಹುಡುಕಿಸಿಕೊಡಬೇಕು.
ಕುಕನೂರು: ಪಟ್ಟಣದ ಜೆಸ್ಕಾಂ ಎಇಇ ವಿರುದ್ಧ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಯಲಬುರ್ಗಾ, ಕುಕನೂರು ವತಿಯಿಂದ ಮಂಗಳವಾರ ಜೇಸ್ಕಾಂ ಕಚೇರಿ ಮುಂದಿನ ರಸ್ತೆಯಲ್ಲಿ ಪ್ರತಿಭಟನೆ ಜರುಗಿತು.
ಎಇಇ ನಾಗರಾಜ ಅವರು ಗುದ್ನೇಶ್ವರ ಜಾತ್ರೆಯಲ್ಲಿ ೧೩೦ಕ್ಕಿಂತ ಹೆಚ್ಚು ಅಂಗಡಿ ಮುಂಗಟ್ಟುಗಳಿಗೆ ಮೀಟರ್ ಇಲ್ಲದೆ ನೇರ ವಿದ್ಯುತ್ ಸಂಪರ್ಕ ಕೊಟ್ಟು ಅವರಿಂದ ಸಾವಿರಾರು ಹಣ ಪಡೆದು ನೂರಾರು ರಶೀದಿ ಹಾಕಿಸಿದ್ದಾರೆ. ಇದರ ಸಮಗ್ರ ತನಿಖೆಯಾಗಬೇಕು. ಕಚೇರಿಯಲ್ಲಿ ಯಾವುದೇ ಗುತ್ತಿಗೆದಾರರು ಫೈಲ್ ಕಳೆದು ಹೋದರೆ ಅದನ್ನು ಕೂಡಲೆ ಹುಡುಕಿಸಿಕೊಡಬೇಕು. ಸಿಗದೆ ಇದ್ದಲ್ಲಿ ಆನ್‌ಲೈನ್‌ಲ್ಲಿ ಅಪ್ಲೋಡ್ ಮಾಡಿದ ಪ್ರತಿ ಝರಾಕ್ಸ್ ಪ್ರತಿ ಹಾಕಿ ಡುಪ್ಲಿಕೇಟ್ ಪೈಲ್ ಮಾಡಿ ಅಂದೇ ಪೂರ್ಣಗೊಳಿಸಬೇಕು. ಕಳೆದ ವರ್ಷದ ಜಾತ್ರೆಯ ಪೈಲ್ ಡಿಪಾಸಿಟಿನಲ್ಲಿ ಉಳಿದ ಹಣ ಮರುಪಾವತಿ ಮಾಡಬೇಕು. ಇದನ್ನು ಸಮಗ್ರವಾಗಿ ಮೇಲಾಧಿಕಾರಿಗಳಿಂದ ತನಿಖೆಗೆ ಆದೇಶಿಸಬೇಕು. ಕಚೇರಿಯ ಕಂಪ್ಯೂಟರ್ ಆಪರೇಟರ್ ಮಂಜುನಾಥ ವೀರಾಪೂರ ಅವರನ್ನು ಕೆಲಸದಿಂದ ತೆಗೆದು ಹಾಕಬೇಕು. ಎಲ್‌ಸಿ ಕೇಳಿದ ನಂತರ ಶಾಖಾಧಿಕಾರಿಗಳು ಗುತ್ತಿಗೆದಾರರಿಗೆ ಬೇಗನೆ ಎಲ್‌ಸಿ ಕೊಡಬೇಕು. ಇದನ್ನು ಎಲ್.ಎಂ ಗಳು ಸಹಕಾರ ನೀಡಬೇಕು. ತಾತ್ಕಾಲಿಕ ವಿದ್ಯುತ್ ಕ್ಲೋಸಿಂಗ್ ಫೈಲ್ ಗಳಿಗೆ ಶಾಖಾಧಿಕಾರಿಗಳೇ ರೀಡಿಂಗ್ ರಿಫೋರ್ಟ್ ಅನ್ನು ಮೂರು ದಿನಗಳ ಒಳಗೆ ನೀಡಬೇಕು ಹಾಗೂ ನಾನಾ ಇತರೆ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ಪ್ರತಿಭಟಿಸಿದರು.ಸಂಘದ ಅಧ್ಯಕ್ಷ ವಿಜಯಕುಮಾರ ಮರಾಟಿ, ಉಪಾಧ್ಯಕ್ಷ ಸಂಗಯ್ಯ ಸಾವಳಿಗಿಮಠ, ಕಾರ್ಯದರ್ಶಿ ವಿಜಯಕುಮಾರ ಅಂಗಡಿ, ಸಹಕಾರ್ಯದರ್ಶಿ ಮಹೇಶ ಹೊಕ್ಕಳದ, ಮಹಾಕಾಳೇಶ್ವರ ಗಂಗಾವತಿ, ನೀಲಪ್ಪ ಕುರಿ, ದೇವಪ್ಪ ಶಿಳ್ಳಿನ, ಧರ್ಮಣ್ಣ ಜೈನ್, ಮಾಜೀದ್ ಮುಲ್ಲಾ, ಮೈನುದ್ದೀನ್ ಮಕಾಂದಾರ್, ರಿಜ್ವಾನ್ ನದಾಫ್, ಖಾದೀರಸಾಬ್ ನದಾಫ್,ತಿಮ್ಮಣ್ಣ ಸೋಮಸಾಗರ್ ಇನ್ನಿತರರಿದ್ದರು.