ಸಮಾಜಕ್ಕಾಗಿ ಬದುಕನ್ನೇ ಅರ್ಪಿಸಿದ್ದ ಎಲ್ಹೇರಿ: ಸೇಡಂ

| Published : Feb 05 2024, 01:46 AM IST

ಸಮಾಜಕ್ಕಾಗಿ ಬದುಕನ್ನೇ ಅರ್ಪಿಸಿದ್ದ ಎಲ್ಹೇರಿ: ಸೇಡಂ
Share this Article
  • FB
  • TW
  • Linkdin
  • Email

ಸಾರಾಂಶ

ನೀಲಕಂಠರಾಯ ಎಲ್ಹೇರಿ ಅಕಾಲಿಕ ಸಾವಿಗೀಡಾಗಿದ್ದಾರೆ. ಅವರ ಕುಟುಂಬ ದುಃಖದಲ್ಲಿದ್ದು, ನಾವು ಮಾನವೀಯ ಕಾರ್ಯಗಳನ್ನು ಮಾಡಲು ಮಾತ್ರ ಸಾಧ್ಯ.

ಕನ್ನಡಪ್ರಭ ವಾರ್ತೆ ಯಾದಗಿರಿ

ವಿಕಾಸ ಅಕಾಡೆಮಿಯ ಲಿಂ. ನೀಲಕಂಠರಾಯ ಎಲ್ಹೇರಿ ಅವರು ಸಮಾಜದ ಒಳತಿಗಾಗಿ ತಮ್ಮ ಬದುಕನ್ನು ಅರ್ಪಿಸುವ ಮೂಲಕ, ನಮ್ಮ ಮಧ್ಯೆ ಚರಿತ್ರೆಯಲ್ಲಿ ಶಾಶ್ವತವಾಗಿ ಉಳಿದಿದ್ದಾರೆ ಎಂದು ವಿಕಾಸ ಅಕಾಡೆಮಿ ಸೇಡಂನ ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಹಾಗೂ ವಿಕಾಸ ಅಕಾಡೆಮಿಯ ಮುಖ್ಯಸ್ಥರಾದ ಡಾ. ಬಸವರಾಜ ಪಾಟೀಲ್ ಸೇಡಂ ಹೇಳಿದರು.

ವಿಕಾಸ ಅಕಾಡೆಮಿ ಜಿಲ್ಲಾ ಸಂಚಾಲಕ ನೀಲಕಂಠರಾಯ ಎಲ್ಹೇರಿ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಶ್ರದ್ಧಾಂಜಲಿ ಸಭೆ ಮತ್ತು ವಿಕಾಸ ಅಕಾಡೆಮಿ ಮುಂದಿನ ಕಾರ್ಯ ಚಟುವಟಿಕೆಗಳ ಕುರಿತು ಹಿತೈಷಿಗಳ ಸಭೆಯಲ್ಲಿ ಅವರು ಮಾತನಾಡಿದರು.

ನೀಲಕಂಠರಾಯ ಎಲ್ಹೇರಿ ಅಕಾಲಿಕ ಸಾವಿಗೀಡಾಗಿದ್ದಾರೆ. ಅವರ ಕುಟುಂಬ ದುಃಖದಲ್ಲಿದ್ದು, ನಾವು ಮಾನವೀಯ ಕಾರ್ಯಗಳನ್ನು ಮಾಡಲು ಮಾತ್ರ ಸಾಧ್ಯ. ನನ್ನ ಸುದೀರ್ಘ ಬದುಕಿನ ಚಟುವಟಿಕೆಗಳ ಪಯಣದಲ್ಲಿ ಕಳೆದುಕೊಂಡ ಪ್ರಮುಖರಲ್ಲಿ ನಮ್ಮೆಲ್ಲರ ಶಕ್ತಿಯಾಗಿದ್ದ ಎಲ್ಹೇರಿಯವರು 3ನೇ ವ್ಯಕ್ತಿಯಾಗಿದ್ದಾರೆ. ಅವರ ಮಕ್ಕಳು ಭವಿಷ್ಯದಲ್ಲಿ ಒಳ್ಳೆಯ ಗೌರವ ನಾಗರಿಕರಾಗಿ ಬಾಳಬೇಕೆಂಬುದೇ ಎಲ್ಲರ ಅಪೇಕ್ಷೆಯಾಗಿದೆ ಎಂದು ತಿಳಿಸಿದರು.

ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಅಕಾಡೆಮಿ ಚಟುವಟಿಕೆಗಳನ್ನು ನಡೆಸಿಕೊಂಡು ಬದಲಾವಣೆಗೆ ಪ್ರಯತ್ನಿಸಬೇಕಿದೆ ಎಂದು ಮನವಿ ಮಾಡಿದರು.

ಸುರೇಶ ಸಜ್ಜನ್, ಡಾ, ಸಿದ್ದರಾಜ ರೆಡ್ಡಿ ಪಾಟೀಲ್, ಎಚ್.ಸಿ. ಪಾಟೀಲ್ ರಾಜನಕೋಳೂರ, ಡಾ.ಜ್ಯೋತಿಲತಾ ತಡಿಬಿಡಿಮಠ, ನಾಗರತ್ನ ಕುಪ್ಪಿ, ಪತ್ರಕರ್ತ ಲಕ್ಷ್ಮಿಕಾಂತ ಕುಲಕರ್ಣಿ, ಬಸವರಾಜಸ್ವಾಮಿ ಸ್ಥಾವರಮಠ ಹುಣಸಗಿ, ಸಂಗಮೇಶ ಕೆಂಭಾವಿ, ಸುಭಾಷ ಪಾಟೀಲ್ ದೇವದುರ್ಗ ಮುಂತಾದವರು ನೀಲಕಂಠರಾಯ ಎಲ್ಹೇರಿಯವರ ಬದುಕು, ಕಾರ್ಯ ಚಟುವಟಿಕೆಗಳ ಬಗ್ಗೆ ಮಾತನಾಡಿದರು.

ವಿಕಾಸ ಅಕಾಡೆಮಿ ಹಿರಿಯರಾದ ಶಾಂತರಡ್ಡಿ ವನಕೇರಿ, ನರಸರಡ್ಡಿ ಗುರುಮಠಕಲ್, ಯುವ ಮುಖಂಡ ಮಹೇಶ ರಡ್ಡಿ ಮುದ್ನಾಳ ವೇದಿಕೆಯಲ್ಲಿದ್ದರು. ಭೀಮಣ್ಣ ವಡವಟ್ ಸ್ವಾಗತಿಸಿ, ಶೃತಿ ಕಂದಕೂರ ವಂದಿಸಿದರು.