ಚೌಡಯ್ಯನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಉಮೇಶ

| Published : Jun 30 2024, 12:57 AM IST

ಚೌಡಯ್ಯನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ಉಮೇಶ
Share this Article
  • FB
  • TW
  • Linkdin
  • Email

ಸಾರಾಂಶ

ಗುರುಮಠಕಲ್ ತಾಲೂಕಿನ ಅಜಲಾಪುರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಲೋಕಾರ್ಪಣೆ ಗೊಳಿಸಲಾಯಿತು.

ಅಂಬಿಗರ ಚೌಡಯ್ಯನವರ ನಾಮಫಲಕ ಲೋಕಾರ್ಪಣೆಕನ್ನಡಪ್ರಭ ವಾರ್ತೆ ಯಾದಗಿರಿ

ಜಿಲ್ಲೆಯ ಗುರುಮಠಕಲ್ ತಾಲೂಕಿನ ಅಜಲಾಪುರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಲೋಕಾರ್ಪಣೆಗೊಳಿಸಲಾಯಿತು.

ಈ ವೇಳೆ ಮಾತನಾಡಿದ ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ, ಸಮಾಜ ಬಾಂಧವರು ಅಂಬಿಗರ ಚೌಡಯ್ಯನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದರು.

ಕೋಲಿ ಸಮಾಜ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣ. ಏಕೆಂದರೆ, ಟೋಕ್ರಿ ಕೋಲಿ ಬಿಟ್ಟುಹೊದ ಪರ್ಯಾಯ ಪದಗಳಾದ ಕೋಲಿ ಕಬ್ಬಲಿಗ, ಅಂಬಿಗ, ಬೆಸ್ತ ಸೇರಿದಂತೆ ಅನೇಕ ಪದಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ವಿಠಲ್ ಹೇರೂರು ಅವರು ಸಾಕಷ್ಟು ವರ್ಷಗಳ ಹೋರಾಟ ಮಾಡಿದರೂ ಸಹ ಸೇರ್ಪಡೆ ಮಾಡದ ರಾಜಕಾರಣಿಗಳು ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಚುನಾವಣೆ ಬಂದಾಗ ಮಾತ್ರ ಕೋಲಿ ಸಮಾಜದ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಇಲ್ಲಸಲ್ಲದ ಸುಳ್ಳು ಹೇಳುತ್ತಾ, ಮತ ಪಡೆಯುತ್ತಾ ಬಂದಿದ್ದು, ಆ ಪಕ್ಷಗಳಲ್ಲಿರುವ ನಮ್ಮ ಮುಖಂಡರಿಂದ ಹೇಳಿಕೆ ಕೊಡಿಸುತ್ತಾ ಮರಳು ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ನಮ್ಮವರು ಜಾಗೃತರಾಗಬೇಕು. ರಾಜಕಾರಣಿಗಳು ಬಂದಾಗ ಪ್ರತಿಯೊಬ್ಬರು ಪ್ರಶ್ನೆ ಮಾಡಬೇಕು. ಅಂದಾಗ ಮಾತ್ರ ಸಮಾಜವನ್ನು ಗುರುತಿಸುತ್ತಾರೆ. ಹೀಗಾಗಿ ಜಾಗೃತರಾಗಿ ಎಂದು ಕರೆ ನೀಡಿದರು.

ಇದಕ್ಕೂ ಮುನ್ನ ಪ್ರಮುಖ ರಸ್ತೆಗಳ್ಲಲಿ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

ರಫೀಕ್ ಪಟೇಲ್, ಅಂಜನೇಯ, ಬಾಬಾಖಾನ್, ಚೆನ್ನಪ್ಪ, ನಿಂಗು, ಶಂಕ್ರಪ್ಪ, ಚಂದ್ರಪ್ಪ, ಸಿದ್ರಾಮ, ಭೀಮಪ್ಪ, ನಿಂಗಪ್ಪ, ಶಿವರಾಜ, ತಾಯಪ್ಪ, ಬಾಲರಾಜ, ಸಾಯಿಬಣ್ಣ, ಭೀಮಶೆಪ್ಪ, ಅಚಿಜಪ್ಪ, ಚಂದ್ರಶೇಖರ, ಸುರೇಶ, ವೆಂಕಟಪ್ಪ, ಬಾಲಪ್ಪ, ಬಸವರಾಜ, ಶಂಕ್ರಮ್ಮ, ಮಲ್ಲಮ್ಮ, ದೇವಮ್ಮ, ಅಮೃತಾ, ಮಾದೇವಿ, ಅನಂತಮ್ಮ, ಪೋಷಮ್ಮ, ಶಾಮಮ್ಮ, ರಾಜೇಶ್ವರ, ಸುನಿತಾ ಸೇರಿದಂತೆ ಇತರರಿದ್ದರು.