ರಸ್ತೆ ಬದಿ ಮಲಗಿರುವ ಬಡ ವರ್ಗದವರಿಗೆ ಹೊದಿಕೆ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಡವರಿಗೆ ಸೇವೆ ಸಲ್ಲಿಸಿದರೇ ದೇವರಿಗೆ ಸಲ್ಲುತ್ತದೆ.
ಕನ್ನಡಪ್ರಭ ವಾರ್ತೆ ಮೈಸೂರು
ಮಾನವೀಯತೆ ಮೈಗೂಡಿಸಿಕೊಂಡು ಜೀವನ ಸಾಗಿಸುವಂತೆ ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಕೆ.ಬಿ. ಲಿಂಗರಾಜು ಕರೆ ನೀಡಿದರು.ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ ಹೊದಿಕೆ ವಿತರಣಾ ಅಭಿಯಾನಕ್ಕೆ ಮೈಸೂರು ರೈಲು ನಿಲ್ದಾಣ ಮುಂಭಾಗ ರಸ್ತೆ ಬದಿ ಮಲಗಿರುವ ಬಡ ವರ್ಗದವರಿಗೆ ಹೊದಿಕೆ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಬಡವರಿಗೆ ಸೇವೆ ಸಲ್ಲಿಸಿದರೇ ದೇವರಿಗೆ ಸಲ್ಲುತ್ತದೆ ಎಂದರು.
ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್ ಮಾತನಾಡಿ, ಸ್ನೇಹಿತರ ಸಹಕಾರದೊಂದಿಗೆ ಕಳೆದ 6 ವರ್ಷದಿಂದ ನಿರಂತರವಾಗಿ ಡಿಸೆಂಬರ್ ಹಾಗೂ ಜನವರಿ ತಿಂಗಳಿನಲ್ಲಿ ಚಳಿಗಾಲ ಸಂದರ್ಭದಲ್ಲಿ ಹೊದಿಕೆ ವಿತರಿಸುತ್ತಾ ಬಂದಿದ್ದೇವೆ ಎಂದು ಹೇಳಿದರು.ಮುಖಂಡರಾದ ಜೋಗಿ ಮಂಜು, ಅಜಯ್ ಶಾಸ್ತ್ರಿ, ಎಸ್.ಬಿ. ರಾಮು, ಎಸ್.ಎನ್. ರಾಜೇಶ್, ಕಡಕೋಳ ಆರೋಗ್ಯಾಧಿಕಾರಿ ಮಂಜುನಾಥ್, ಸಚಿನ್ ನಾಯಕ್, ಅಮಿತ್ ಮೊದಲಾದವರು ಇದ್ದರು.