ಸ್ವಾಮಿ ವಿವೇಕಾನಂದರ ಆದರ್ಶಗಳ ಅಳವಡಿಸಿಕೊಳ್ಳಿ: ಪುನೀತ್ ಮಹಾರಾಜ್

| Published : Jan 20 2024, 02:00 AM IST

ಸ್ವಾಮಿ ವಿವೇಕಾನಂದರ ಆದರ್ಶಗಳ ಅಳವಡಿಸಿಕೊಳ್ಳಿ: ಪುನೀತ್ ಮಹಾರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪುನೀತ್ ಮಹಾರಾಜ್ ಹೇಳಿದರು.

ಗದಗ: ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ಪುನೀತ್ ಮಹಾರಾಜ್ ಹೇಳಿದರು. ನಗರದ ಸಂಕನೂರ ಇನ್‌ಸ್ಟಿಟ್ಯೂಟ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ಯುತ್ ಡೇ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಕಾರ್ಯಕ್ರಮದ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ಅಧ್ಯಯನ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಜೀವನದಲ್ಲಿ ವಿವೇಕಾನಂದರಂತೆ ತಮ್ಮ ಜೀವನವನ್ನು ರೂಪಿಸಿಕೊಂಡು ಸಮಯವನ್ನು ದುರ್ಬಳಕೆ ಮಾಡದೇ ಸದುಪಯೋಗಪಡಿಸಿಕೊಂಡು ಶ್ರೇಷ್ಠ ಹಾಗೂ ಮಹಾನ್ ವ್ಯಕ್ತಿಯಾಗಲು ಕರೆ ನೀಡಿದರು.

ಸಂಕನೂರ್ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಮೀನಾಕ್ಷಿ ದೇವಾಂಗಮಠ ಮಾತನಾಡಿ, ಸ್ವಾಮಿ ವಿವೇಕಾನಂದರ ಜೀವನದಲ್ಲಿ ನಡೆದ ಹಲವಾರು ಘಟನೆಗಳ ಕುರಿತು ಅನೇಕ ಮಾಹಿತಿಗಳನ್ನು ನೀಡಿದರು. ಡಾಕ್ಟರ್ ಶ್ವೇತ ಸಂಕನೂರ ಮಾತನಾಡಿ, ವಿವೇಕಾನಂದರ ಸ್ವಾಮೀಜಿ ಅವರ ಆಯಸ್ಸು ಅಲ್ಪವಾದರೂ ಅವರ ಸಾಧನೆ ಮಾತ್ರ ಅಪಾರವಾದದ್ದು, ಸ್ವಾಮೀಜಿ ಅವರು ದ್ವೈತ್ವ ಹಾಗೂ ಅದ್ವೈತ್ವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ನಿರೂಪಣೆ ವಿದ್ಯಾರ್ಥಿ ರೋಹಿಣಿ ಎಸ್. ಮಾಡಿದರು. ಸ್ವಾಗತವನ್ನು ವಿದ್ಯಾರ್ಥಿನಿ ಚೈತ್ರಾ ಮಾಡಿದರು. ಅಮೃತಾ ಬಡಿಗೇರ ಭಕ್ತಿ ಗೀತೆಯೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ರಶ್ಮಿ ವಿನ್ಸೆಂಟ್ ಪಾಟೀಲ್, ಕವಿತಾ ಪವಾರ್ ಮತ್ತು ಕಾಲೇಜಿನ ಇನ್ನುಳಿದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.