ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ತೇಜೇಶಲಿಂಗ ಶ್ರೀ

| Published : May 12 2024, 01:16 AM IST

ಬಸವಣ್ಣನವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳಿ: ತೇಜೇಶಲಿಂಗ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ಮೆರವಣಿಗೆ ರಾಜಬೀದಿಗಳಲ್ಲಿ ಬರುತ್ತಿದ್ದಂತೆ ಅನೇಕರು ರಸ್ತೆ ಬದಿ ನಿಂತು ಮೆರವಣಿಗೆ ವೀಕ್ಷಿಸಿದರಲ್ಲದೇ ಬಸವೇಶ್ವರರಿಗೆ ಪೂಜೆ ಸಲ್ಲಿಸಿದರು. ಶರಣೆಯರ ತಂಡ ದಾರಿಯುದ್ದಕ್ಕೂ ಕೋಲಾಟ, ನೃತ್ಯದೊಂದಿಗೆ ಮೆರವಣಿಗೆ ನಡೆಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ಬಸವ ಜಯಂತಿ ಅಂಗವಾಗಿ ನಗರದಲ್ಲಿ ಅರಳೇಪೇಟೆಯ ಬಸವೇಶ್ವರ ಭಕ್ತ ಮಂಡಳಿ ಮತ್ತು ಶರಣೆಯರ ಬಳಗದಿಂದ ಬಸವೇಶ್ವರ ದೇವಾಲಯದಲ್ಲಿ ಮೂಲ ದೇವರಿಗೆ ಮಹಾ ರುದ್ರಾಭಿಷೇಕ ಮತ್ತು ಮಧ್ಯಾಹ್ನ ಮಹಾಮಂಗಳಾರತಿ ಕಾರ್ಯಕ್ರಮ ನಡೆದಿದ್ದು, ಸಂಜೆ ಅಶ್ವರೂಢ ಬಸವೇಶ್ವರರ ಬೆಳ್ಳಿ ಮೂರ್ತಿಯ ಭವ್ಯ ಮೆರವಣಿಗೆ ನಗರದ ರಾಜಬೀದಿಗಳಲ್ಲಿ ಸಂಚರಿಸಿತು.

ಮೆರವಣಿಗೆಯಲ್ಲಿ ವೀರಗಾಸೆ, ತಮಟೆ, ನಂದಿ ಧ್ವಜ, ಕರಡಿ ವಾದ್ಯ ಹಾಗೂ ಚಂಡಿವಾದ್ಯಗಳು ಪಾಲ್ಗೊಂಡಿದ್ದು, ಭವ್ಯ ಪಲ್ಲಕ್ಕಿ ಮೆರವಣಿಗೆಯೊಂದಿಗೆ ಸಮುದಾಯದ ನೂರಾರು ಮಂದಿ ಪಾಲ್ಗೊಂಡು ಸಂಭ್ರಮಿಸಿದರು.

ಮೆರವಣಿಗೆ ರಾಜಬೀದಿಗಳಲ್ಲಿ ಬರುತ್ತಿದ್ದಂತೆ ಅನೇಕರು ರಸ್ತೆ ಬದಿ ನಿಂತು ಮೆರವಣಿಗೆ ವೀಕ್ಷಿಸಿದರಲ್ಲದೇ ಬಸವೇಶ್ವರರಿಗೆ ಪೂಜೆ ಸಲ್ಲಿಸಿದರು. ಶರಣೆಯರ ತಂಡ ದಾರಿಯುದ್ದಕ್ಕೂ ಕೋಲಾಟ, ನೃತ್ಯದೊಂದಿಗೆ ಮೆರವಣಿಗೆ ನಡೆಸಿದರು.ಮೆರವಣಿಗೆಗೆ ಶ್ರೀಗಳಿಂದ ಚಾಲನೆ:

ಬಸವೇಶ್ವರ ಉತ್ಸವಕ್ಕೆ ಶ್ರೀ ನಾಗಲಾಪುರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ತೇಜೇಶಲಿಂಗ ಶಿವಾಚಾರ್ಯ ಮಹಾಸ್ವಾಮೀಜಿ ಚಾಲನೆ ನೀಡಿ, ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ ಬಸವಣ್ಣನವರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಂಡರೆ ಸಮಾಜದಲ್ಲಿ ಯಾವುದೇ ಗೊಂದಲ, ಸಮಸ್ಯೆ ಇರದು ಎಂದರು.

ಕಳೆದ ಮೂರು ದಿನಗಳಿಂದ ಬಸವಜಯಂತಿ ಅಂಗವಾಗಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು.

ಮೆರವಣಿಗೆಯ ನಂತರ ದೇವಾಸ್ಥಾನದ ಆವರಣದಲ್ಲಿ ಸಿದ್ಧಪಡಿಸಿದ ಅಗ್ನಿಕುಂಡದಲ್ಲಿ ವೀರಗಾಸೆಯ ಮಹಾವೀರರ ಪ್ರವೇಶದೊಂದಿಗೆ ಭಕ್ತಾದಿಗಳು ಜೊತೆಗೊಡಿದರು.

ಕಾರ್ಯಕ್ರಮದಲ್ಲಿ ಶ್ರೀ ಬಸವೇಶ್ವರಸ್ವಾಮಿ ಭಕ್ತ ಮಂಡಳಿ ಮತ್ತು ಶರಣೆಯರ ಬಳಗದ ಉಷಾ ಗಂಗಾಧರ್, ಪ್ರಮೀಳಾ ಮಲ್ಲಿಕಾರ್ಜುನ್, ಕೆ.ಬಿ.ಬೈಲಪ್ಪ, ಜಗದೀಶ್, ಎನ್.ಆರ್.ಪ್ರಭಾಕರ್, ಕೆ.ಎನ್.ಪರಮೇಶ್, ನವೀನ್, ಬಸವರಾಜ್, ದೇವರಾಜ್, ಮಲ್ಲಿಕಾರ್ಜುನ್ ಇದ್ದರು.