ಸಾರಾಂಶ
ಕಡೂರು, ಚಿರತೆಗಳನ್ನು ಹಿಡಿಯಲು ಕೂಡಲೆ ಕ್ರಮ ವಹಿಸಬೇಕು ಮತ್ತು ಇಲ್ಲಿಗೆ ಚಿರತೆಗಳನ್ನು ತಂದು ಬಿಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಿರತೆ ದಾಳಿಗೆ ಒಳಗಾದ ಸಂತ್ರಸ್ತ ರೈತರೊಂದಿಗೆ ತಾಲೂಕಿನ ಎಮ್ಮೇದೊಡ್ಡಿ ಭಾಗದ ಗ್ರಾಮಸ್ಥರು ಕಡೂರು ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.
- ಎರಡು ಚಿರತೆಗಳನ್ನು ಎಮ್ಮೇದೊಡ್ಡಿ ಪ್ರದೇಶಕ್ಕೆ ತಂದು ಬಿಟ್ಟಿದ್ದಾರೆ: ಆರೋಪ
ಕನ್ನಡಪ್ರಭ ವಾರ್ತೆ, ಕಡೂರುಚಿರತೆಗಳನ್ನು ಹಿಡಿಯಲು ಕೂಡಲೆ ಕ್ರಮ ವಹಿಸಬೇಕು ಮತ್ತು ಇಲ್ಲಿಗೆ ಚಿರತೆಗಳನ್ನು ತಂದು ಬಿಟ್ಟವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚಿರತೆ ದಾಳಿಗೆ ಒಳಗಾದ ಸಂತ್ರಸ್ತ ರೈತರೊಂದಿಗೆ ತಾಲೂಕಿನ ಎಮ್ಮೇದೊಡ್ಡಿ ಭಾಗದ ಗ್ರಾಮಸ್ಥರು ಕಡೂರು ಪಟ್ಟಣದ ವಲಯ ಅರಣ್ಯಾಧಿಕಾರಿಗಳ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.ಎರಡು ದಿನಗಳ ಹಿಂದಷ್ಟೇ (ಗುರುವಾರ)ಎಮ್ಮೇದೊಡ್ಡಿ ಪ್ರದೇಶದ ಮದಗದಕೆರೆ ಪಾತ್ರದ ಸಿದ್ದರಹಳ್ಳಿ ಗ್ರಾಮದ ಮೂರ್ತಣ್ಣ ಹಾಗೂ ಮಂಜಣ್ಣ ಎಂಬುವರ ಮೇಲೆ ಚಿರತೆ ದಾಳಿ ಮಾಡಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದರು. ಇದಕ್ಕೆ ಬೇರೆಡೆ ಯಿಂದ ಚಿರತೆಗಳನ್ನು ಇಲ್ಲಿ ತಂದು ಬಿಟ್ಟಿರುವುದೇ ಕಾರಣ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು..ಶನಿವಾರ ನೂರಾರು ರೈತರು ಪ್ರತಿಭಟನೆ ವೇಳೆ ಅರಣ್ಯಇಲಾಖೆ ಕಚೇರಿಗೆ ನುಗ್ಗಲು ಹೋದಾಗ ಪೊಲೀಸರು ಅಡ್ಡಗಟ್ಟಿದರು. ಸಿಟ್ಟಿಗೆದ್ದ ರೈತರು ಕೆ.ಎಂ.ರಸ್ತೆಯ ಅರಣ್ಯ ಇಲಾಖೆ ಮುಂದೆ ಘೋಷಣೆ ಕೂಗಿದರು.ಬೇರೆಡೆ ಸೆರೆ ಹಿಡಿದ 2 ಚಿರತೆಗಳನ್ನು ಎಮ್ಮೇದೊಡ್ಡಿ ಪ್ರದೇಶಕ್ಕೆ ತಂದು ಬಿಟ್ಟಿರುವುದರಿಂದ ದಾಳಿಯಂತಹ ಕೃತ್ಯ ನಡೆದು ಜನ ಭಯದಲ್ಲಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಇಂತಹ ಗಂಭೀರ ಘಟನೆ ನಡೆದಿದೆ ಎಂದು ದೂರಿದರು. ಈ ಘಟನೆಗೆ ಕಾರಣರಾದವರ ಮೇಲೆ ಎಫ್ ಐಆರ್ ಹಾಕಲು ಆಗ್ರಹಿಸಿ ಗಲಾಟೆ ಆರಂಭಿಸಿದಾಗ ಪೊಲೀಸ್ ವೃತ್ತ ನಿರೀಕ್ಷಕ ಎಂ. ರಫೀಕ್ ಗ್ರಾಮಸ್ಥರನ್ನು ಸಮಾಧಾನಪಡಿಸಿ ಎಸಿಎಫ್ ಮಾತನಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿದರು.ನಂತರ ಸ್ಥಳಕ್ಕೆ ಆಗಮಿಸಿದ ಎಸಿಎಫ್ ಮೋಹನ್ ನಾಯ್ಕ ಈ ಬಗ್ಗೆ ರೈತರು ಮತ್ತು ಜನರು ದೃತಿ ಗೆಡುವುದು ಬೇಡ. ನಾವು ಚಿರತೆಗಳನ್ನು ಬಿಟ್ಟು ಹೋಗಿದ್ದಾರೆಯೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಅಂತಹ ಕೆಲಸ ನಡೆಸಿದ್ದರೆ ಅದರ ವಿರುದ್ಧ ಕ್ರಮ ವಹಿಸುತ್ತೇವೆ ಎಂಬ ಭರವಸೆ ನೀಡಿದರು. ಗ್ರಾಮದಲ್ಲಿ ಎರಡು ಬೋನುಗಳಿಟ್ಟು ಚಿರತೆಗಳನ್ನು ಹಿಡಿಯಲಾಗುವುದು ಎಂದು ಹೇಳಿದರು.ಭರವಸೆ ಬಳಿಕ ರೈತರು ಪ್ರತಿಭಟನೆ ಕೈಬಿಟ್ಟರು. ಈ ಸಂದರ್ಭದಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ರಮೇಶ್ ಬಾಬು,ಆರ್.ಎಫ್.ಒ ಹರೀಶ್ ಇದ್ದರು. ಪ್ರತಿಭಟನೆಯಲ್ಲಿ ತಾಪಂ ಮಾಜಿ ಸದಸ್ಯ ಹೊಗರೇಹಳ್ಳಿ ಶಶಿ, ಕಾಂಗ್ರೆಸ್ ಮುಖಂಡ ವಿನಯ್ ವಳ್ಳು, ಎಮ್ಮೇದೊಡ್ಡಿ ಭಾಗದ ರೈತರು ಇದ್ದರು.2ಕೆಕೆಡಿಯು1.2ಕೆೆಕೆಡಿಯು2ಎ.ಚಿರತೆ ತಂದು ಬಿಟ್ಟವರ ಮೇಲೆ ಕ್ರಮ ಜರುಗಿಸುವಂತೆ ಆಗ್ರಹಿಸಿ ಎಮ್ಮೇದೊಡ್ಡಿ ಭಾಗದ ಜನರು ಕಡೂರಿನ ಅರಣ್ಯಇಲಾಖೆ ಮುಂದೆ ಪ್ರತಿಭಟನೆ ನಡೆಸಿದರು.