ಮಾಲೇಕಲ್ ತಿರುಪತಿಯಲ್ಲಿ ಇರುವ ಶ್ರೀಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಸಂತೆ ಮತ್ತು ಆಹಾರ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯಲ್ಲಿ ಹಳೆಯ ಕೃಷಿ ಪದ್ಧತಿಗಳನ್ನು ಮರೆತಿರುವುದರಿಂದ ಆಹಾರದಲ್ಲಿನ ಪೌಷ್ಟಿಕಾಂಶ ಕಡಿಮೆಯಾಗುತ್ತಿದೆ. ಸಾವಯವ ಕೃಷಿಯು ಇದಕ್ಕೆ ಉತ್ತಮ ಪರಿಹಾರವಾಗಿದ್ದು, ಕೇವಲ ಕೃಷಿಯಲ್ಲದೆ ಹೈನುಗಾರಿಕೆಯಂತಹ ಉಪವ್ಯವಸಾಯಗಳನ್ನೂ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.
ಅರಸೀಕೆರೆ: ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿಯೇ ಸಾಮಾನ್ಯ ಜ್ಞಾನ ಮತ್ತು ವ್ಯವಹಾರಿಕ ಅರಿವು ನೀಡಿದರೆ ಅವರ ಕಲಿಕೆಯ ಗುಣಮಟ್ಟ ಇನ್ನಷ್ಟು ಉತ್ತಮಗೊಳ್ಳುತ್ತದೆ ಎಂದು ಕೃಷಿಕ ಹಾಗೂ ಸಂಪನ್ಮೂಲ ವ್ಯಕ್ತಿ ನಿಂಗರಾಜ್ ಅಭಿಪ್ರಾಯಪಟ್ಟರು.
ನಗರದ ಮಾಲೇಕಲ್ ತಿರುಪತಿಯಲ್ಲಿ ಇರುವ ಶ್ರೀಚಂದ್ರಶೇಖರ ಭಾರತಿ ಇಂಟರ್‌ನ್ಯಾಷನಲ್ ಶಾಲೆ ವತಿಯಿಂದ ಆಯೋಜಿಸಿದ್ದ ಮಕ್ಕಳ ಸಂತೆ ಮತ್ತು ಆಹಾರ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯಲ್ಲಿ ಹಳೆಯ ಕೃಷಿ ಪದ್ಧತಿಗಳನ್ನು ಮರೆತಿರುವುದರಿಂದ ಆಹಾರದಲ್ಲಿನ ಪೌಷ್ಟಿಕಾಂಶ ಕಡಿಮೆಯಾಗುತ್ತಿದೆ. ಸಾವಯವ ಕೃಷಿಯು ಇದಕ್ಕೆ ಉತ್ತಮ ಪರಿಹಾರವಾಗಿದ್ದು, ಕೇವಲ ಕೃಷಿಯಲ್ಲದೆ ಹೈನುಗಾರಿಕೆಯಂತಹ ಉಪವ್ಯವಸಾಯಗಳನ್ನೂ ಅಳವಡಿಸಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.ಶಾಲೆಯಲ್ಲಿ ಆಹಾರ ಮೇಳ ಮತ್ತು ಮಕ್ಕಳ ಸಂತೆಯನ್ನು ಆಯೋಜಿಸಿರುವುದು ಮಕ್ಕಳಿಗೆ ಜ್ಞಾನಾರ್ಜನೆ ಮಾತ್ರವಲ್ಲದೆ ವ್ಯವಹಾರಿಕ ಅರಿವು ಪಡೆಯಲು ಸಹಕಾರಿಯಾಗುತ್ತದೆ. ವಿದ್ಯಾರ್ಥಿಗಳ ಕಲಿಕೆಗೆ ಶಿಕ್ಷಕರು ತೋರುತ್ತಿರುವ ಕಾಳಜಿ ಮಕ್ಕಳ ಭವಿಷ್ಯಕ್ಕೆ ದಿಕ್ಕು ತೋರಿಸುತ್ತಿದೆ ಎಂದು ಪ್ರಶಂಶಿಸಿದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ದುಮ್ಮೇನಹಳ್ಳಿ ಸೋಮಶೇಖರ್ ಮಾತನಾಡಿದರು.ಮಕ್ಕಳ ಸಂತೆಯಲ್ಲಿ ತರಕಾರಿ, ತೆಂಗಿನಕಾಯಿ, ಚಾಕೋಲೇಟ್, ಸ್ಟೇಷನರಿ ಸಾಮಗ್ರಿಗಳು, ತಂಪು ಪಾನೀಯಗಳು ಮಾರಾಟಕ್ಕೆ ಇಡಲಾಗಿತ್ತು. ಆಹಾರ ಮೇಳದಲ್ಲಿ ಪಾನಿಪುರಿ, ಕೋಸಂಬರಿ, ಗೊಜ್ಜವಲಕ್ಕಿ ಮಿಠಾಯಿ, ಖಾದ್ಯಗಳು, ಕೋಡುಬಳೆ, ಫ್ರೂಟ್ ಸಲಾಡ್ ಹಾಗೂ ವಿವಿಧ ಹಣ್ಣುಗಳು ಸಾರ್ವಜನಿಕರನ್ನು ಆಕರ್ಷಿಸಿದವು. ಮಕ್ಕಳು ನಿಗದಿತ ಬೆಲೆಯೊಂದಿಗೆ ವ್ಯವಹಾರ ನಡೆಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
