ಚಿಕ್ಕಮಗಳೂರುಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ರಾಜ್ಯದಲ್ಲಿ 7 ಸ್ಥಾನದಲ್ಲಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಎಎಸ್‌ಡಿಡಿಒ (ಗೈರು, ಸ್ಥಳಾಂತರ, ಸಾವು, ಡ್ಯುಪ್ಲಿಕೆಟ್ ಹಾಗೂ ಇತರೆ) ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಎನುಮರೇಶನ್ ಫಾರಂ ವಾಪಸ್ ಅವಧಿ17ರವರೆಗೆ ವಿಸ್ತರಣೆ । ಜಿಲ್ಲಾ ಚುನಾವಣಾ ವಿಭಾಗದ ಎಎಸ್‌ಡಿಡಿಒ ಮರು ಪರಿಶೀಲನೆ
ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರುಮತದಾರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ರಾಜ್ಯದಲ್ಲಿ 7 ಸ್ಥಾನದಲ್ಲಿರುವ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದೀಗ ಎಎಸ್‌ಡಿಡಿಒ (ಗೈರು, ಸ್ಥಳಾಂತರ, ಸಾವು, ಡ್ಯುಪ್ಲಿಕೆಟ್ ಹಾಗೂ ಇತರೆ) ಸಂಖ್ಯೆಯನ್ನು ಇನ್ನಷ್ಟು ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಾಗುತ್ತಿದೆ.
ಎನುಮರೇಶನ್ ಫಾರಂ ವಾಪಾಸ್ ಸಲ್ಲಿಸುವುದಕ್ಕೆ ನಿಗದಿ ಪಡಿಸಿದ ಅವಧಿಯನ್ನು ಆ.17ಕ್ಕೆ ವಿಸ್ತರಣೆ ಮಾಡಿ ಬೆನ್ನಲ್ಲಿ ಜಿಲ್ಲಾ ಚುನಾವಣಾ ವಿಭಾಗದ ಎಎಸ್‌ಡಿಡಿಒ ಮರು ಪರಿಶೀಲನೆ ಮುಂದಾಗಿದೆ. ಈ ಅವಧಿಯಲ್ಲಿ ವಾಪಾಸ್ ಬರದೇ ಇರುವ ಎನುಮರೇಶನ್ ಫಾರಂ ಸಂಗ್ರಹಿಸುವುದಕ್ಕೆ ಒತ್ತು ನೀಡಲಾಗುತ್ತಿದೆ. ಈ ನಿಟ್ಟಿನಲ್ಲಿ ಮತ್ತೆ ಬಿಎಲ್‌ಒಗಳು ಕಾರ್ಯಾಚರಣೆ ಪರಿಶೀಲನೆಗೆ ಮುಂದಾಗಿದ್ದಾರೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 9,60,231 ಮತದಾರರಿದ್ದು, ಈಗಾಗಲೇ ಎಲ್ಲ ಮತದಾರರಿಗೆ ಎಸ್‌ಐಆರ್ ನ ಎನುಮರೇಶನ್ ಫಾರಂ ವಿತರಿಸಿ ವಾಪಸ್ ಪಡೆಯುವ ಕೆಲಸ ಸಹ ಬಹುತೇಕ ಪೂರ್ಣಗೊಂಡಿದೆ. ಆ.9 ರ ವರೆಗೆ ಜಿಲ್ಲೆಯಲ್ಲಿ 8,63,163 ಮತದಾರರ ಎನುಮರೇಶನ್ ಫಾರಂ ಡಿಜಿಟಲೀಕರಣ ಆಗಿದೆ.
ಇನ್ನೂ 97.068 ಮಂದಿ ಎನುಮರೇಶನ್ ಫಾರಂ ವಾಪಾಸ್ ಬಂದಿಲ್ಲ. ಈ ಫಾರಂಗಳನ್ನು ಎಎಸ್‌ಡಿಡಿಒ ಎಂದು ಪರಿಗಣಿಸಲಾಗಿದೆ. ಈ ಪ್ರಕಾರ ಶೇ.89.89 ರಷ್ಟು ಡಿಜಿಟಿಲೀಕರಣ ಆಗಿದ್ದು, ಇನ್ನೂ ಶೇ.10.11 ರಷ್ಟು ಎಎಸ್‌ಡಿಡಿಒ ಇದ್ದು, ಈ ಸಂಖ್ಯೆಯನ್ನು ಕಡಿಮೆಗೊಳಿಸುವುದಕ್ಕೆ ಚಿಕ್ಕಮಗಳೂರು ಜಿಲ್ಲಾ ಚುನಾವಣಾ ಶಾಖೆ ಮುಂದಾಗಿದೆ.ಎಎಸ್‌ಡಿಡಿಒ ಶೇ.10ಕ್ಕಿಂತ ಕಡಿಮೆಗೊಳಿಸುವುದು:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 48 ಸಾವಿರ ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 25 ಸಾವಿರ ಮಂದಿ ಮೃತ ಪಟ್ಟಿದ್ದಾರೆ. 11 ಸಾವಿರ ಮಂದಿ ಬೇರೆ ಮತಗಟ್ಟೆಯಲ್ಲಿ ಹೆಸರು ನೋಂದಾಯಿಸಿದ್ದಾರೆ. ಇನ್ನೂ 11 ಸಾವಿರಕ್ಕೂ ಅಧಿಕ ಮಂದಿ ಲಭ್ಯವಾಗಿಲ್ಲ. ಹೀಗಾಗಿ ಈ ಎಲ್ಲರನ್ನು ಎಎಸ್‌ಡಿಡಿಒ ಎಂದು ಪರಿಗಣಿಸಲಾಗಿದೆ.ಈ ಪೈಕಿ ಲಭ್ಯವಾಗದವರನ್ನು ಪತ್ತೆ ಮಾಡಿ ಅವರಿಂದ ಎನುಮರೇಶನ್ ಫಾರಂ ಪಡೆದು ಮತದಾರ ಪಟ್ಟಿಗೆ ಸೇರಿಸುವ ಮೂಲಕ ಶೇ.10ಕ್ಕಿಂತ ಕಡಿಮೆ ಮಾಡುವ ಗುರಿ ಹಾಕಿಕೊಳ್ಳಲಾಗಿದೆ. ಅದಕ್ಕೆ ಇನ್ನೂ 1200ಕ್ಕೂ ಅಧಿಕ ಫಾರಂ ಡಿಜಿಟಲೀಕರಣ ಆಗಬೇಕಾಗಿದೆ.
ಮರು ಪರಿಶೀಲನೆಗೆ ಸೂಚನೆ:ಈವರಗೆ ಲಭ್ಯವಾಗಿಲ್ಲ ಎಂದು ಎಎಸ್‌ಡಿಡಿಒಗೆ ಸೇರಿಸಿದ ಮತದಾರರ ಮನೆಗೆ ಪುನಃ ಭೇಟಿ ನೀಡಿ ಪರಿಶೀಲನೆ ನಡೆಸುವ ಮೂಲಕ ಖಾತ್ರಿ ಪಡಿಸಿಕೊಳ್ಳುವುದು. ಒಂದು ವೇಳೆ ಮತದಾರರು ಲಭ್ಯವಾದರೆ ಅವರಿಂದ ಎನುಮರೇಶನ್ ಫಾರಂ ಪಡೆಯುವುದಕ್ಕೆ ಜಿಲ್ಲಾಧಿಕಾರಿ ಭನ್ಚರ್ ಸಿಂಗ್ ಮೀನಾ ಎಲ್ಲ ಬಿಎಲ್‌ಒಗಳಿಗೆ ನಿರ್ದೇಶಿಸಿದ್ದಾರೆ.
ಈ ಕ್ರಮ ಕೈಗೊಂಡ ನಂತರ ಜಿಲ್ಲೆಯಲ್ಲಿ ಸುಮಾರು 300ಕ್ಕೂ ಹೆಚ್ಚಿನ ಮಂದಿಯಿಂದ ಎನುಮರೇಶನ್ ಫಾರಂ ಪಡೆಯ ಲಾಗಿದೆ. ಇನ್ನಷ್ಟು ಮಂದಿ ಫಾರಂ ದೊರೆಯುವ ನಿರೀಕ್ಷೆ ಇದೆ.-- ಬಾಕ್ಸ್--
ಬಿಎಲ್‌ಎ ನಿಂದ 50 ಫಾರಂ ಪಡೆಯಲು ಅವಕಾಶಎನುಮರೇಶನ್ ಫಾರಂ ಹಂಚಿಕೆಯನ್ನು ಬಿಎಲ್‌ಒಗಳೇ ಮಾಡಬೇಕು. ಆದರೆ, ಭರ್ತಿ ಮಾಡಿದ ಎನುಮರೇಶನ್ ಸಂಗ್ರಹಿ ಸು ವುದಕ್ಕೆ ರಾಜಕೀಯ ಪಕ್ಷದ ಏಜೆಂಟ್‌ಗಳಿಗೆ ಅವಕಾಶ ನೀಡಲಾಗಿದೆ. ಪ್ರತಿ ರಾಜಕೀಯ ಪಕ್ಷದಿಂದ ನೇಮಕಗೊಂಡ ಏಜೆಂಟ್ ದಿನಕ್ಕೆ ಗರಿಷ್ಠ 50 ಭರ್ತಿ ಮಾಡಿದ ಫಾರಂಗಳನ್ನು ಮತದಾರರಿಂದ ಸಂಗ್ರಹಿಸಿ, ಬಿಎಲ್‌ಒಗಳಿಗೆ ಸಲ್ಲಿಸಬಹು ದಾಗಿದೆ. ಈ ಅವಕಾಶ ಬಳಕೆ ಮಾಡಿಕೊಂಡು ಇದೀಗ, ವಾಪಾಸ್ ಬರದಿರುವ ಫಾರಂಗಳನ್ನು ಸಂಗ್ರಹಿಸುವುದಕ್ಕೆ ಕ್ರಮ ವಹಿಸಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಭನ್ವಿರ್ ಸಿಂಗ್ ಮೀನಾ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.-- ಕೋಟ್--
ಚಿಕ್ಕಮಗಳೂರು ಜಿಲ್ಲೆ ಎಸ್‌ಐಆರ್ ಚಟುವಟಿಕೆಯಲ್ಲಿ ರಾಜ್ಯದಲ್ಲಿ 7 ನೇ ಸ್ಥಾನದಲ್ಲಿ ಇದೆ. ಉತ್ತಮ ಕೆಲಸ ಆಗಿದೆ. ಇದೀಗ ಆ.17ರ ವರೆಗೆ ಕಾಲಾವಕಾಶ ವಿಸ್ತರಣೆ ಮಾಡಿರುವುದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಮತ್ತು ಯಾವುದೇ ಅರ್ಹ ಮತದಾರರು ಮತದಾರ ಪಟ್ಟಿಯಿಂದ ಹೊರಗೆ ಉಳಿಯ ಬಾರದು ಎಂಬ ಕಾರಣಕ್ಕೆ ಎಎಸ್‌ಡಿಡಿಒ ಮರು ಪರಿಶೀಲನೆಗೆ ಕ್ರಮ ವಹಿಸಲಾಗುತ್ತಿದೆ. ಈ ಪ್ರಮಾಣ ಶೇ.10ಕ್ಕಿಂತ ಕಡಿಮೆ ಮಾಡುವ ಗುರಿ ಹಾಕಿಕೊಂಡಿದ್ದೇವೆ.-ಭನ್ವಿರ್ ಸಿಂಗ್ ಮೀನಾ, ಜಿಲ್ಲಾ ಚುನಾವಣಾಧಿಕಾರಿ, ಚಿಕ್ಕಮಗಳೂರು---ಬಾಕ್ಸ್---
ಎನುಮರೇಶನ್ ಫಾರಂ ವಿವರವಿಧಾನಸಭಾ ಕ್ಷೇತ್ರಒಟ್ಟು ಮತದಾರರುಡಿಜಿಟಲಿಕರಣ ಫಾರಂ ಸಂಖ್ಯೆಎಎಸ್‌ಡಿಡಿಒ ಸಂಖ್ಯೆಶೃಂಗೇರಿ1,67,1711,57,03510,136
ಮೂಡಿಗೆರೆ1,67,299 1,53,42813,871ಚಿಕ್ಕಮಗಳೂರು 2,26,9341.92,47734,457ತರೀಕೆರೆ 1,92,089 1,72,24419,843ಕಡೂರು 2,06,7401,87,97918,761
ಒಟ್ಟು 9,60,231 8,63,16397,068