ದೊಡ್ಡೇರಿ ಹಾಲಿನ ಡೇರಿ ಸಮಗ್ರ ಅಭಿವೃದ್ಧಿಗೆ ಒತ್ತು

| Published : Sep 17 2025, 01:05 AM IST

ದೊಡ್ಡೇರಿ ಹಾಲಿನ ಡೇರಿ ಸಮಗ್ರ ಅಭಿವೃದ್ಧಿಗೆ ಒತ್ತು
Share this Article
  • FB
  • TW
  • Linkdin
  • Email

ಸಾರಾಂಶ

ದಾಬಸ್‍ಪೇಟೆ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಜೊತೆಗೂಡಿ ನೆಲಮಂಗಲ ತಾಲೂಕಿನ ಡೈರಿಗಳ ಅಭಿವೃದ್ಧಿಗೆ ಶ್ರಮಿಸಲಿದ್ದು, ಗುಣಮಟ್ಟದ ಹಾಲನ್ನು ಪೂರೈಸಿಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ಹೇಳಿದರು.

ದಾಬಸ್‍ಪೇಟೆ: ಬಮೂಲ್ ಅಧ್ಯಕ್ಷ ಡಿ.ಕೆ.ಸುರೇಶ್ ಜೊತೆಗೂಡಿ ನೆಲಮಂಗಲ ತಾಲೂಕಿನ ಡೈರಿಗಳ ಅಭಿವೃದ್ಧಿಗೆ ಶ್ರಮಿಸಲಿದ್ದು, ಗುಣಮಟ್ಟದ ಹಾಲನ್ನು ಪೂರೈಸಿಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ಹೇಳಿದರು.

ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿ ಡೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 2024-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆ ಉದ್ಘಾಟಿಸಿ ಮಾತನಾಡಿದರು.

ಡೇರಿ ಅಧ್ಯಕ್ಷ ಡಿ.ಎಸ್. ಜಯದೇವಪ್ಪ ಮಾತನಾಡಿ, ಸಹಕಾರ ಸಂಘಗಳಲ್ಲಿ ಯಾವುದೇ ಪಕ್ಷವಿರುವುದಿಲ್ಲ, ಬಮೂಲ್ ನಿರ್ದೇಶಕ ಬೈರೇಗೌಡರು ಮತ್ತು ಹಾಲು ಉತ್ಪಾದಕರ ಸಹಕಾರದಿಂದ ದೊಡ್ಡೇರಿ ಡೈರಿಯನ್ನು ಉನ್ನತ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತೇವೆ ಎಂದರು.

ಸಭೆಯಲ್ಲಿ ಬಮೂಲ್ ಸಹಾಯಕ ವ್ಯವಸ್ಥಾಪಕ ಡಾ.ಆದರ್ಶ, ಗ್ರಾಪಂ ಸದಸ್ಯೆ ಪದ್ಮಾವತಿ, ನಾಮಿನಿ ಸದಸ್ಯ ಡಿ.ಆರ್.ಚಂದ್ರಶೇಖರಯ್ಯ ನಿರ್ದೇಶಕ ಮಂಡಳಿಯ ಉಪಾಧ್ಯಕ್ಷೆ ಮಂಜುಳ, ಸದಸ್ಯರಾದ ಗಂಗಯ್ಯ, ರಾಜಶೇಖರಯ್ಯ, ರುದ್ರೇಶ್, ವೆಂಕಟೇಶ, ಶಂಕರಯ್ಯ, ಪ್ರಕಾಶ್, ಮಹಾದೇವಮ್ಮ, ರವಿಶಂಕರ್, ಶೆಟ್ಟಳ್ಳಯ್ಯ, ಸಿಇಒ ಸೋಮಶೇಖರ್, ಪದ ನಿಮಿತ್ತ ನಿರ್ದೇಶಕ ಚಿಕ್ಕಮಾರೇಗೌಡ, ಸಿಬ್ಬಂದಿ ಮಂಜುನಾಥ್, ಶ್ರೀನಿವಾಸಮೂರ್ತಿ ಇತರರಿದ್ದರು.

ಫೆÇೀಟೋ 2 : ತ್ಯಾಮಗೊಂಡ್ಲು ಹೋಬಳಿಯ ದೊಡ್ಡೇರಿ ಹಾಲಿನ ಡೈರಿ ಆವರಣದಲ್ಲಿ ವಾರ್ಷಿಕ ಸಭೆಯನ್ನು ಬಮೂಲ್ ನಿರ್ದೇಶಕ ಭವಾನಿ ಶಂಕರ್ ಬೈರೇಗೌಡ ಉದ್ಘಾಟಿಸಿದರು.