ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಪುನಾರಂಭಗೊಂಡಿದ್ದು, ಜನರಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತು ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ತಿಳಿಸಿದರು.ಇಲ್ಲಿನ ಪಾಲಿಕೆ 16ನೇ ವಾರ್ಡ್ ವಿನೋಬ ನಗರದ 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆಯಲ್ಲಿ ಭಾನುವಾರ 8 ಅಡ್ಡ ರಸ್ತೆಗಳಿಗೆ ಎಸ್‌ಎಫ್‌ಸಿ ಮುಕ್ತನಿಧಿ ಅನುದಾನ ಹಾಗೂ 15ನೇ ಹಣಕಾಸು ಯೋಜನೆ ಅನುದಾನದಿಂದ ಒಟ್ಟು ₹1.06 ಕೋಟಿ ರು. ವೆಚ್ಚದಲ್ಲಿ ಸಿಸಿ, ಒಳ ಚರಂಡಿ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿ ಗುಣಮಟ್ಟದ, ಶಾಶ್ವತ ಕಾಮಗಾರಿ ಆಗುವಂತೆ ಪಾಲಿಕೆ ಸದಸ್ಯರು, ಅಧಿಕಾರಿಗಳು ನಿಗಾ ವಹಿಸಬೇಕು, ಗುತ್ತಿಗೆದಾರರು ಕೆಲಸ ಮಾಡಬೇಕು ಎಂದರು.
ವಿನೋಬ ನಗರದಲ್ಲಿ 1.06 ಕೋಟಿ ವೆಚ್ಚದ ಅಡ್ಡ ರಸ್ತೆಗಳಿಗೆ ಸಿಸಿ ಚರಂಡಿ, 8 ಲಕ್ಷ ರು ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿ ಆರಂಭಿಸಲಾಗಿದೆ. ಬಾಕ್ಸ್ ಚರಂಡಿ ಮಾಡಿ, ಅವುಗಳನ್ನು ಮುಚ್ಚುವುದಕ್ಕಿಂತಲೂ ಎಲ್ ಶೇಪ್‌ನಲ್ಲಿ ಚರಂಡಿ ಮಾಡಿ. ಚರಂಡಿಗಳು ತೆರೆದಿದ್ದರೆ, ಕಸ ನಿಲ್ಲುವುದಿಲ್ಲ. ಕಸ ತೆಗೆಯುವ ಸ್ವಚ್ಛತಾ ಸಿಬ್ಬಂದಿಗೂ ಕಷ್ಟವಾಗುವುದಿಲ್ಲ. ಬಾಕ್ಸ್ ಚರಂಡಿಗಳನ್ನು ನಿರ್ಮಿಸಲು ಹಣವೂ ಹೆಚ್ಚು ಖರ್ಚಾಗುತ್ತದೆ. ಚರಂಡಿಗಳಿಗೆ ಸ್ಲ್ಯಾಬ್ ಹಾಕಿ ಮುಚ್ಚಿದರೆ, ಸರಿಯಾಗಿ ನಿರ್ವಹಿಸಲು ಕಷ್ಟ. ರಸ್ತೆ ನಿರ್ಮಿಸಿದ ನಂತರ ಉಳಿದ ಜಾಗದಲ್ಲಿ ಫ್ಲೇವರ್ಸ್ ಅಳವಡಿಸಿ, ಇಳಿಜಾರು ಮಾಡಿಸಿ. ಆಗ ನೀರು ಸಹ ಚರಂಡಿಗೆ ಸರಿಯಾಗಿ ಹೋಗುತ್ತದೆ ಎಂದು ಇಂಜಿನಿಯರ್‌ಗಳಿಗೆ ಸೂಚಿಸಿದರು.ಪಾಲಿಕೆ ಸದಸ್ಯ ಎ.ನಾಗರಾಜ ಮಾತನಾಡಿ, ವಿನೋಬ ನಗರ 1ನೇ ಮುಖ್ಯರಸ್ತೆಯ ಎರಡೂ ಬದಿ ಇದ್ದಂತಹ ಚರಂಡಿಗಳು ತುಂಬಾ ಹಳೆಯದಾಗಿದ್ದವು. ಅವುಗಳ ಪೂರ್ಣ ಹೊಸದಾಗಿ ಮಾಡಬೇಕು ಎಂದು ಮನವಿ ಮಾಡಿದರು. ಅದಕ್ಕೆ ಸ್ಪಂದಿಸಿದ ಸಚಿವ ಎಸ್ಸೆಸ್ ಮಲ್ಲಿಕಾರ್ಜುನ, 2ನೇ ಮುಖ್ಯರಸ್ತೆಯ ಚರಂಡಿ ಕೆಳಗೆ ಇದ್ದು, ರಸ್ತೆ ಮೇಲೆ ಇದೆ. ಅದನ್ನು ಸರಿಪಡಿಸಬೇಕು. ಚರಂಡಿ ಮೇಲೆ ಸ್ಲ್ಯಾಬ್ ಹಾಕಿ, ಮೇಲೇ ಪಾರ್ಕಿಂಗ್ ಮಾಡುವಂತೆ ಕೆಲಸ ಮಾಡಿಸಬೇಕು. ಇದರಿಂದ ರಸ್ತೆಯೂ ಅಗಲವಾಗಿ ಕಾಣುತ್ತದೆ. ಇದೇ ರೀತಿ ಮಾಡಿಸೋಣ ಎಂದರು.
ಮೇಯರ್ ಬಿ.ಎಚ್.ವಿನಾಯಕ ಪೈಲ್ವಾನ್, ಆಯುಕ್ತೆ ರೇಣುಕಾ, ಸದಸ್ಯರಾದ ಕೆ.ಚಮನ್ ಸಾಬ್, ಜಿ.ಎಸ್.ಮಂಜುನಾಥ ಗಡಿಗುಡಾಳ್, ವಾರ್ಡ್ ಅಧ್ಯಕ್, ಸುರೇಶ ಉತ್ತಂಗಿ, ಎಸ್.ರವಿ, ಸತೀಶ ಶೆಟ್ಟಿ, ರಮೇಶ ಸೋಲಾರ್, ರಾಮಚಂದ್ರ ರಾಯ್ಕರ್, ಚೌಡಪ್ಪ, ಯೋಗೇಶ, ರವಿ ಸೊಸೈಟಿ, ಬಾಬು, ಹಾಲೇಶ, ಕೆಇಬಿ ವಾಸಣ್ಣ, ಗುರುರಾಜ, ಸತೀಶ ಫ್ಯಾಮಿಲಿ ಸ್ಟುಡಿಯೋ, ಮಂಜುನಾಥ ಮಾಸೂರು, ರಮೇಶ, ಅನಿಲ್, ಪಾಲಿಕೆ ಇಇ ಮನೋಹರ, ಎಇಇ ಜಗದೀಶ, ಎಇ ನವೀನಕುಮಾರ, ಮಾರುತಿ, ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್, ಶ್ರೀ ಶಂಭುಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ನ ಪದಾಧಿಕಾರಿಗಳು ಸೇರಿ ಸ್ಥಳೀಯ ನಿವಾಸಿಗಳಿದ್ದರು.