ನಾಡಿನ ಸಂಸ್ಕೃತಿ ಬಿಂಬಿಸುವ ಕಬಡ್ಡಿ, ಲಗೋರಿ, ಚಿನ್ನಿದಾಂಡು, ಕುಂಟೆಬಿಲ್ಲೆ, ಬುಗುರಿ, ಹಗ್ಗಜಗ್ಗಾಟ, ಗೋಲಿ ಆಟದಂತಹ ಸಾಂಪ್ರದಾಯಿಕ ಮತ್ತು ಗ್ರಾಮೀಣ ದೇಶಿಯ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಮುಂದಿನ ಪೀಳಿಗೆಗೆ ಇಂತಹ ಕ್ರೀಡೆ ಉಳಿಸಿ ಪರಿಚಯಿಸುವುದು ಯುವ ಸಮುದಾಯದ ಕರ್ತವ್ಯ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಗ್ರಾಮೀಣ ಯುವಕರು ಕ್ರಿಕೆಟ್ ಜೊತೆಗೆ ಸಾಂಪ್ರದಾಯಿಕ ಮತ್ತು ಗ್ರಾಮೀಣ ದೇಶಿ ಕ್ರೀಡೆಗಳಿಗೂ ಒತ್ತು ನೀಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅಭಿಪ್ರಾಯಪಟ್ಟರು.

ತಾಲೂಕಿನ ಮಲ್ಲೇಗೌಡನಹಳ್ಳಿ ಕ್ರಾಸ್ ಬಳಿ ಕಾವಡಿಹಳ್ಳಿ ಮತ್ತು ಕೆಬ್ಬೆಕೊಪ್ಪಲು ಗ್ರಾಮದ ವಜ್ರಮುನಿ ಬಾಯ್ಸ್ ತಂಡದ ವತಿಯಿಂದ ಭಾನುವಾರ ಆಯೋಜಿಸಿದ್ದ ಸಿಆರ್‌ಎಸ್ ಕಪ್ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟಿಂಗ್ ಮಾಡುವ ಮೂಲಕ ಚಾಲನೆ ನೀಡಿ, ಕ್ರೀಡೆಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುವುದರಿಂದ ದೈಹಿಕ ಸಾಮರ್ಥ್ಯದ ಜೊತೆಗೆ ಮಾನಸಿಕವಾಗಿ ಸದೃಢವಾಗಬಹುದು ಎಂದರು.

ನಾಡಿನ ಸಂಸ್ಕೃತಿ ಬಿಂಬಿಸುವ ಕಬಡ್ಡಿ, ಲಗೋರಿ, ಚಿನ್ನಿದಾಂಡು, ಕುಂಟೆಬಿಲ್ಲೆ, ಬುಗುರಿ, ಹಗ್ಗಜಗ್ಗಾಟ, ಗೋಲಿ ಆಟದಂತಹ ಸಾಂಪ್ರದಾಯಿಕ ಮತ್ತು ಗ್ರಾಮೀಣ ದೇಶಿಯ ಕ್ರೀಡೆಗಳು ನಶಿಸಿ ಹೋಗುತ್ತಿವೆ. ಮುಂದಿನ ಪೀಳಿಗೆಗೆ ಇಂತಹ ಕ್ರೀಡೆ ಉಳಿಸಿ ಪರಿಚಯಿಸುವುದು ಯುವ ಸಮುದಾಯದ ಕರ್ತವ್ಯ ಎಂದರು.

ಹಳ್ಳಿಯಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಿರುವುದು ಉತ್ತಮ ಬೆಳವಣಿಗೆ. ಕ್ರೀಡಾಪಟುಗಳು ಕ್ರೀಡಾ ಮನೋಭಾವದಿಂದ ಆಟವಾಡಬೇಕು. ಗೆದ್ದವರು ಹಿಗ್ಗದೆ ಸೋತವರು ಕುಗ್ಗದೇ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಬೇಕು ಎಂದರು.

ಈ ವೇಳೆ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಚಿಣ್ಯ ವೆಂಕಟೇಶ್, ಹೊಣಕೆರೆ ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜು, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಎಸ್.ಸಿ.ಚೇತನ್‌ಕುಮಾರ್, ಸಿಪಿಐ ಹೇಮಂತ್‌ಕುಮಾರ್, ಮುಖಂಡರಾದ ಅಶೋಕ್, ಸತೀಶ್, ನಿಂಗರಾಜು, ಶಿವಣ್ಣ ಸೇರಿದಂತೆ ಹಲವರು ಇದ್ದರು.

ಸೊಸೈಟಿ ನೂತನ ಅಧ್ಯಕ್ಷರಾಗಿ ಎಚ್‌.ಪಿ.ಸಚ್ಚಿದಾನಂದ ಆಯ್ಕೆ

ಕನ್ನಡಪ್ರಭ ವಾರ್ತೆ ಮಂಡ್ಯ

ತಾಲೂಕು ಹೊಳಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ನೂತನ ಅಧ್ಯಕ್ಷರಾಗಿ ಎಚ್.ಪಿ.ಸಚ್ಚಿದಾನಂದ ಅವಿರೋಧವಾಗಿ ಆಯ್ಕೆಯಾದರು.

ಎಚ್.ಬಿ.ದೊಡ್ಡೇಗೌಡರವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆದು 12 ಮಂದಿ ಸದಸ್ಯರ ಬಲದ ಸಂಘದಲ್ಲಿ ಎಚ್.ಪಿ.ಸಚ್ಚಿದಾನಂದ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ, ಸಂಘದ ಸಿಇಒ ಕೆ.ಎಂ.ಹರ್ಷವರ್ಧನ್ ಅವರು ಎಚ್.ಬಿ.ಸಚ್ಚಿದಾನಂದ ಅವರು ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.

ಈ ವೇಳೆ ಸಂಘದ ಮಾಜಿ ಅಧ್ಯಕ್ಷ ಎಚ್.ಬಿ.ದೊಡ್ಡೇಗೌಡ, ಉಪಾಧ್ಯಕ್ಷೆ ಎಚ್.ಕೆ.ಸವಿತಾ ಹಾಗೂ ಗ್ರಾಮದ ಮುಖಂಡರಾದ ನಾರಾಯಣಿ, ಬುಲೆಟ್ ಶಿವು, ಎಚ್.ಬಿ.ಶಿವಣ್ಣ, ವಿಜಯ್ ಕುಮಾರ್, ಜಟ್ಟಿ ಕುಮಾರ್, ಎಚ್.ಎಸ್.ಯೋಗೇಶ್ ಕುಮಾರ್, ಗ್ರಾಪಂ ಉಪಾಧ್ಯಕ್ಷ ಜಯಪ್ರಕಾಶ್ ನಾರಾಯಣ್, ಎಚ್.ಎಂ.ನಾರಾಯಣಪ್ಪ, ಎಚ್.ಸಿ.ಲಿಂಗರಾಜು, ಎಚ್.ಎಸ್. ನಂದೀಶ್, ಪಟೇಲ್ ರಾಮು, ನಿಂಗೇಗೌಡ, ಅಭಿನಂದನ್, ಎಚ್.ಡಿ.ರವಿ, ರಾಜಶೇಖರ್, ಎಚ್.ಟಿ.ಸದಾನಂದ, ಚಂದನ್, ಶ್ಯಾಮ್, ಶಂಕರ್, ಪ್ರದೀಪ್ ಕುಮಾರ್, ಪುಟ್ಟಸ್ವಾಮಿ, ಮಾತೃಶ್ರೀ ಶಂಕರ್, ಕುಮಾರ್ ಎಲೆಗೌಡ್ರು, ವಿನೋದ್, ಚರಣ್, ಶಂಕರ್ ಪೂಜಾರಿ, ತಿಮ್ಮೇಗೌಡ, ಸಂತೋಷ್, ರಂಜನ್, ಮಾರನಹಳ್ಳಿ ಶ್ರೀನಿವಾಸ್, ಪ್ರಸನ್ನ ಗುನ್ನಾಯಕನಹಳ್ಳಿ ಹಾಗೂ ಸಂಘದ ಕಾರ್ಯಕಾರಿ ಮಂಡಳಿ ಸದಸ್ಯರು, ಪದಾಧಿಕಾರಿಗಳು , ಮುಖಂಡರು ಇದ್ದರು.