ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಒತ್ತು: ಶಾಸಕ ಬಾಬಾಸಾಹೇಬ ಪಾಟೀಲ

| Published : Jul 23 2024, 12:32 AM IST

ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬುವ ಕೆಲಸಕ್ಕೆ ಒತ್ತು: ಶಾಸಕ ಬಾಬಾಸಾಹೇಬ ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದೇನೆ. ಸರ್ಕಾರಿ ಶಾಲೆಗೆ ಬಡ ಮಕ್ಕಳು ವಿದ್ಯೆ ಕಲಿಯಲು ಬರುತ್ತಾರೆ. ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲ ಸವಲತ್ತು ಒದಗಿಸಲು ನಾನು ಸದಾಸಿದ್ಧ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು

ವಿದ್ಯಾರ್ಥಿಗಳಿಗೆ ಶೈಕ್ಷಣಿಕವಾಗಿ ಆತ್ಮಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿದ್ದೇನೆ. ಸರ್ಕಾರಿ ಶಾಲೆಗೆ ಬಡ ಮಕ್ಕಳು ವಿದ್ಯೆ ಕಲಿಯಲು ಬರುತ್ತಾರೆ. ಅಂತಹ ಮಕ್ಕಳನ್ನು ಗುರುತಿಸಿ ಅವರಿಗೆ ವಿದ್ಯಾಭ್ಯಾಸಕ್ಕೆ ಬೇಕಾಗುವ ಎಲ್ಲ ಸವಲತ್ತು ಒದಗಿಸಲು ನಾನು ಸದಾಸಿದ್ಧ, ಇಂದಿನ ವಿದ್ಯಾರ್ಥಿಗಳು ದೇಶದ ಭವಿಷ್ಯ ರೂಪಿಸುವ ರೂವಾರಿಗಳು. ಕಾರಣ ಅವರಿಗೆ ಬೇಕಾಗುವ ಸವಲತ್ತು ನೀಡಲು ನಾನು ಸಿದ್ಧನಿದ್ದೇನೆ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು.

ತಮ್ಮ 52ನೇ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಪಟ್ಟಣದ ಸರ್ಕಾರಿ ಬಾಲಕಿಯರ ಶಾಲೆ ಸೇರಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ ಬುಕ್ ಹಾಗೂ ಪೆನ್ನು ಸೇರಿ ಶೈಕ್ಷಣಿಕ ಪರಿಕರ ವಿತರಿಸಿ ಮಾತನಾಡಿದರು.

ಇದಕ್ಕೂ ಮೊದಲು ಸ್ವಗ್ರಾಮವಾದ ನೇಗಿನಹಾಳದಲ್ಲಿ ಆಪ್ತರು, ಕಾರ್ಯಕರ್ತರು, ಅಭಿಮಾನಿಗಳ ಶುಭ ಹಾರೈಕೆ ಸ್ವೀಕರಿಸಿದ ಅವರು, ಗ್ರಾಮದ ಶ್ರೀ ಗುರುಮಡಿವಾಳೇಶ್ವರ ಮಠದಲ್ಲಿ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು. ಬಳಿಕ ಕಿತ್ತೂರು ಪಟ್ಟಣಕ್ಕೆ ಆಗಮಿಸಿ ಕೋಟೆ ಆವರಣದಲ್ಲಿರುವ ಗ್ರಾಮದೇವತೆಯರು ಹಾಗೂ ಆಂಜನೇಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಇದಕ್ಕೂ ಮುನ್ನ ಸರ್ಕಾರಿ ಉರ್ದು ಶಾಲೆ ಹಾಗೂ ಸರ್ಕಾರಿ ಪದವಿ ಕಾಲೇಜು ಕೊಂಡವಾಡ ಚೌಕ್‌ದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಬುಕ್, ಪೆನ್ನು ಹಾಗೂ ಶಾಲಾ ಬ್ಯಾಗ್ ವಿತರಿಸಿದರು. ಬಳಿಕ ವಿದ್ಯಾಗಿರಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಲೋಕಾರ್ಪಣೆಗೊಳಿಸಿದ ಅವರು, ತಾಪಂ, ಜಿಪಂ ಬೆಳಗಾವಿಯಿಂದ ಡಿಜಿಟಲ್ ಸಾಧನ ವಿತರಿಸಿದರು. ಪ್ರಧಾನಮಂತ್ರಿ ಪೋಷಣ್‌ ಶಕ್ತಿ ನಿರ್ಮಾಣ ಯೋಜನೆಯಡಿ ಅಡುಗೆ ಸ್ವ ಸಹಾಯ ಸಂಘದಿಂದ ತಯಾರಿಸಿದ ಅಫ್ರಾನ್ ವಿತರಣೆ, ವಿಕಲಚೇತನರಿಗೆ ಹಾಗೂ ಹಿರಿಯರಿಗೆ ವಿವಿಧ ಸಾಧನ ಸಲಕರಣೆ ವಿತರಿಸಿದರು. ಸರ್ಕಾರಿ ಪದವಿ ಕಾಲೇಜಿಗೆ ಭೇಟಿ ನೀಡಿದರು‌.

ಈ ವೇಳೆ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸಂಗನಗೌಡ ಪಾಟೀಲ, ಆಶ್ಪಾಕ್‌ ಹವಾಲ್ದಾರ, ಸಿದ್ದಣ್ಣ ಮಾರಿಹಾಳ, ಬಸವರಾಜ ಸಂಗೊಳ್ಳಿ, ಅಪ್ಪಾಸಾಹೇಬ ಶಿಲೇದಾರ, ಮುದಕಪ್ಪ ಮರಡಿ, ಎಂ.ಎಫ್‌. ಜಕಾತಿ, ಮಹೇಶ ಶೆಟ್ಟರ, ಸುನೀಲ ಘೀವಾರಿ, ಚಂದ್ರಗೌಡ ಪಾಟೀಲ, ಶಂಕರ ಬಡಿಗೇರ, ಕುತುಬುದ್ದಿನ್‌ ನದಿಮುಲ್ಲಾ, ಪ್ರವೀಣ ಗೌಡ್ರ, ಮುಸ್ತಾಕ್‌ ಸುತಗಟ್ಟಿ ಸೇರಿದಂತೆ ಪಪಂ ಸದಸ್ಯರು, ಆಪ್ತರು, ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಇದ್ದರು.ಶಿಕ್ಷಣ ದೇಶ ಕಟ್ಟುವ ಸಾಧನ. ಗ್ರಾಮೀಣ ಬಡಮಕ್ಕಳು ತಂತ್ರಜ್ಞಾನ ಸಹಾಯದಿಂದ ಕಲಿತು ಗುಣಾತ್ಮಕ ಶಿಕ್ಷಣ ಪಡೆಯುವುದು ಇಂದಿನ ಅಗತ್ಯವಾಗಿದ್ದು, ಗುಣಾತ್ಮಕ ಕಲಿಕೆ ಗುಣಾತ್ಮಕ ಶಿಕ್ಷಣ ಮೂಲಕ ಸರ್ಕಾರಿ ಶಾಲೆಗಳ ಸಬಲೀಕರಣವೇ ನನ್ನ ಗುರಿಯಾಗಿದೆ.

- ಬಾಬಾಸಾಹೇಬ ಪಾಟೀಲ ಶಾಸಕ ಕಿತ್ತೂರು ಮತಕ್ಷೇತ್ರ