ಅಂಕ ಗಳಿಕೆಯ ಜೊತೆಗೆ ಭವಿಷ್ಯಕ್ಕೆ ಆಧಾರವಾಗುವ ವಿವಿಧ ರೀತಿಯ ಕೌಶಲ್ಯಗಳನ್ನು ಬೆಳೆಸುವುದರ ಕಡೆಗೂ ನಾವುಗಳೆಲ್ಲ ಗಮನ ನೀಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.

ರಾಣಿಬೆನ್ನೂರು: ಅಂಕ ಗಳಿಕೆಯ ಜೊತೆಗೆ ಭವಿಷ್ಯಕ್ಕೆ ಆಧಾರವಾಗುವ ವಿವಿಧ ರೀತಿಯ ಕೌಶಲ್ಯಗಳನ್ನು ಬೆಳೆಸುವುದರ ಕಡೆಗೂ ನಾವುಗಳೆಲ್ಲ ಗಮನ ನೀಡಬೇಕು ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು. ತಾಲೂಕಿನ ಕಮದೋಡ ಬಳಿಯ ರೇನ್‌ಬೋ ರೆಸಿಡೆನ್ಸಿಯಲ್ ಪಬ್ಲಿಕ್ ಶಾಲೆಯ ವಾರ್ಷಿಕೋತ್ಸವ ರೇನ್‌ಫೆಸ್ಟ್ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಡಿಡಿಪಿಐ ಮೋಹನ ದಂಡಿನ ಮಾತನಾಡಿ, ವಿದ್ಯಾರ್ಥಿಗಳ ಉಜ್ವಲ ಭವಿಷ್ಯದ ನಿರ್ಮಾಣಕ್ಕೆ ಶಾಲೆಯೊಂದಿಗೆ ಪಾಲಕರೂ ಕೈಜೋಡಿಸಬೇಕು ಎಂದರು. ನಿವೃತ್ತ ಪ್ರಾ. ಪ್ರೊ.ಎಸ್.ಎನ್. ಕಟ್ಟೀಮನಿ ಅಧ್ಯಕ್ಷತೆ ವಹಿಸಿದ್ದರು. ಬಿಇಒ ಶಾಮಸುಂದರ ಅಡಿಗ, ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುರೇಶ ಸಿ.ಟಿ., ಉಪಾಧ್ಯಕ್ಷೆ ಲಲಿತಾ ಸುರೇಶ, ನಾಗರಾಜ ಎಸ್. ಕೆ., ಮಾಲತೇಶ ಐ.ಕೆ., ವೀರಣ್ಣ ಸಿ. ಟಿ., ಶಾರದಾ ವೀರಣ್ಣ, ಶಾಂತಮ್ಮ ಐ. ಕೆ., ಬಸವರಾಜ ಎನ್. ಟಿ., ರಾಘವೇಂದ್ರ ಐ.ಕೆ., ಶಿಲ್ಪಾ ಎಂ.ಕೆ., ಪ್ರಾಚಾರ್ಯ ಸಂಗಮೇಶ ಎಸ್.ಎ., ಸುಜಾತ ಎಸ್.ಸಿ. ಉಪಸ್ಥಿತರಿದ್ದರು. ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಸುರೇಶ ಸಿ.ಟಿ., ಉಪಾಧ್ಯಕ್ಷೆ ಲಲಿತಾ ಸುರೇಶ, ನಾಗರಾಜ ಎಸ್. ಕೆ., ಮಾಲತೇಶ ಐ. ಕೆ., ವೀರಣ್ಣ ಸಿ. ಟಿ., ಶಾರದಾ ವೀರಣ್ಣ, ಶಾಂತಮ್ಮ ಐ. ಕೆ., ಬಸವರಾಜ ಎನ್. ಟಿ., ರಾಘವೇಂದ್ರ ಐ. ಕೆ., ಶಿಲ್ಪಾ.ಎಂ.ಕೆ., ಪ್ರಾಚಾರ್ಯರಾದ ಸಂಗಮೇಶ.ಎಸ್.ಎ., ಸುಜಾತ ಎಸ್.ಸಿ. ಉಪಸ್ಥಿತರಿದ್ದರು. ಸಮಾರಂಭದಲ್ಲಿ ಉತ್ತಮ ಸಾಧನೆಗೈದ ಶಾಲೆಯ ವಿದ್ಯಾರ್ಥಿಗಳಾದ ಭುವನಾ ಬಿಲ್ಲಾಳ, ರಿತಿಕ್ಷಾ ಪಾಟೀಲ, ಶ್ರಾವ್ಯ ಬಾಪುಗೌಡ, ತನುಷ ಹಿರೇಮಠ, ಚೇತನ್ ಇ.ಎಂ., ರಾಘವೇಂದ್ರ ಟಿ., ಹರ್ಷಿತಾ ಆರ್.ಎಚ್., ನರೇಂದರ್ ಸಿಂಗ್, ಸಾಕ್ಷಿ, ದಿವ್ಯಾ.ಎಸ್.ಕೆ. ಅವರುಗಳನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶಿಸಿದರು.