ಸಾರಾಂಶ
ಸಮುದಾಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು, ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರ ಸಮುದಾಯಕ್ಕೋಸ್ಕರ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಎಲ್ಲರೂ ಅವುಗಳ ಸೌಲಭ್ಯ ಬಳಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮಶಿಕ್ಷಣ ನೀಡಿ.
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ಭಾರತದ ಮೊಟ್ಟಮೊದಲ ಮಹಾಕಾವ್ಯ ರಾಮಾಯಣದ ಮೂಲಕ ಜಗತ್ತಿಗೆ ಜೀವನ ಮೌಲ್ಯಗಳನ್ನು ತಿಳಿಸಿದ ಕರ್ತೃ ಆದಿಕವಿ ಮಹರ್ಷಿ ವಾಲ್ಮೀಕಿ ಎಂದ ಸಚಿವ ಕೆ.ಎನ್.ರಾಜಣ್ಣ ಹೇಳಿದರು.ತಾಲೂಕಿನ ಹೊಸೂರು ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತೋತ್ಸವ ಕಾರ್ಯಕ್ರಮವನ್ನು ಶುಕ್ರವಾರ ಸಚಿವ ಕೆ.ಎನ್. ರಾಜಣ್ಣ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಗೌರವ ಸಲ್ಲಿಸಿ ಮಾತನಾಡಿದರು.
ಆರ್ಥಿಕ, ಶೈಕ್ಷಣಿಕ ಪ್ರಗತಿ ಸಾಧಿಸಿರಾಮಾಯಣ, ಮಹಾಭಾರತದಂತಹ ಮಹಾಗ್ರಂಥಗಳನ್ನು ರಚಿಸಿದ್ದು, ತಳ ಸಮುದಾಯದವರು. ಶ್ರೀರಾಮನನ್ನು ದೇಶದಾದ್ಯಂತ ದೊಡ್ಡಮಟ್ಟದಲ್ಲಿ ಪೂಜನೀಯ ಸ್ಥಾನ ನೀಡಲು, ವಾಲ್ಮೀಕಿ ರಾಮಾಯಣ ಕಾರಣ, ಇಂತಹ ಶ್ರೀರಾಮಚಂದ್ರಮೂರ್ತಿಯ ಮಕ್ಕಳಿಗೆ ಶಿಕ್ಷಣ ನೀಡಿದ್ದು ವಾಲ್ಮೀಕಿ. ಇಂತಹ ತಳಮಟ್ಟದ ಸಮುದಾಯಗಳು ಆರ್ಥಿಕವಾಗಿ ಶೈಕ್ಷಣಿಕವಾಗಿ ಸದೃಢವಾದಾಗ ಮಾತ್ರ ಸಮಾಜದಲ್ಲಿ ಉತ್ತಮ ಮನ್ನಣೆ ಸಿಗುತ್ತದೆ.
ಸಮುದಾಯದ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಬೇಕು, ಎಲ್ಲರೂ ಒಗ್ಗಟ್ಟು ಪ್ರದರ್ಶಿಸಿದಾಗ ಮಾತ್ರ ಸರ್ಕಾರದಿಂದ ಯಾವುದೇ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಸರ್ಕಾರ ಸಮುದಾಯಕ್ಕೋಸ್ಕರ ಅನೇಕ ಸೌಲಭ್ಯಗಳನ್ನು ಜಾರಿಗೆ ತಂದಿದ್ದು, ಎಲ್ಲರೂ ಅವುಗಳ ಸೌಲಭ್ಯ ಬಳಸಿಕೊಂಡು ತಮ್ಮ ಮಕ್ಕಳಿಗೆ ಉತ್ತಮಶಿಕ್ಷಣ, ಸಂಸ್ಕಾರ ನೀಡಬೇಕು ಎಂದು ತಿಳಿಸಿದರು.ದೇಶವನ್ನು ಒಗ್ಗೂಡಿಸಿದ ಮಹಾಕಾವ್ಯ
ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮಾತನಾಡಿ, ಇಂದು ಇಡೀ ದೇಶವೇ ಒಗ್ಗಟ್ಟಾಗಿದೆ ಎಂದರೆ ಅದು ಆದಿಕವಿ ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣದ ಪರಿಣಾಮ. ರಾಮಾಯಣದ ಮಹತ್ವವನ್ನು ಇಡೀ ವಿಶ್ವಕ್ಕೆ ಸಾರಿದ ಮಹಾ ಪುರುಷ, ಇಂತಹ ವಾಲ್ಮೀಕಿ ಬೇರೆ ದೇವರುಗಳ ಹಾಗೆ ದೇವರೇ ಆಗಿದ್ದಾನೆ. ಹಲವಾರು ಸಾಹಿತಿಗಳಿಗೆ ಪ್ರೇರಣೆಯಾಗಿ ಇಂದಿಗೂ ರಾಮಾಯಣದ ಪ್ರೇರಣೆಯಿಂದ ಹಲವಾರು ಗ್ರಂಥಗಳನ್ನು ಮನುಕುಲಕ್ಕೆ ಒಳಿತಾಗುವ ನಿಟ್ಟಿನಲ್ಲಿ ರಚಿಸುತ್ತಿದ್ದಾರೆ, ಇಂತಹ ಮಹಾನ್ ಪುರುಷರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ತಿಳಿಸಿದರು.ಜಾತಿ ಜನಗಣತಿ ನಡೆಸಬೇಕು
ಮಾಜಿ ಸಚಿವ ಶಿವಶಂಕರರೆಡ್ಡಿ ಮಾತನಾಡಿ ಮಹರ್ಷಿ ವಾಲ್ಮೀಕಿ ಭರತ ಖಂಡದ ಆದಿ ಕವಿ ಶೋಷಿತ ಸಮಾಜದಲ್ಲಿ ಹುಟ್ಟಿ ಇಡೀ ಮನುಕುಲಕ್ಕೆ ಆದರ್ಶ ಪ್ರಾಯವಾದ ರಾಮಾಯಣವನ್ನು ರಚಿಸಿದರು. ಕರ್ನಾಟಕ್ಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದುಳಿದವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ, ಎಸ್ ಸಿ ಎಸ್ ಎಸ್ ಟಿ ಸಮುದಾಯವರಿಗೆ ಸಬ್ಸಿಡಿಯಲ್ಲಿ ಅನೇಕ ಸವಲತ್ತುಗಳನ್ನು ಕಲ್ಪಿಸಿದೆ. ಹಿಂದುಳಿದ ಸಮುದಾಯದ ಬದಲಾವಣೆಗೆ ದೊಡ್ಡ ಚಿಂತಕರ ಚಾವಡಿ, ಜಾತಿ ಸರ್ವೇ ನಡೆಸಬೇಕು ಮತ್ತು ಅವರ ಅಭಿವೃದ್ಧಿಗೆ ರಾಷ್ಟ ಮಟ್ಟದಲ್ಲಿ ಆದ್ಯತೆ ನೀಡಲು ಯೋಜನೆ ರೂಪಿಸಬೇಕು ಎಂದರು. ಈ ಕಾರ್ಯಕ್ರಮದಲ್ಲಿ, ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ, ರಾಜಘಟ್ಟ ದ ಶ್ರೀ ಬ್ರಹ್ಮಾನಂದ ಸ್ವಾಮೀಜಿ, ತಹಸೀಲ್ದಾರ್ ಮಹೇಶ್ ಪತ್ರಿ ಕಾರ್ಯನಿರ್ವಾಹಕ ಅಧಿಕಾರಿ ಜೆ ಕೆ ಹೊನ್ನಯ್ಯ , ರಾಘವೇಂದ್ರ ಹನುಮಾನ್, ವಾಲ್ಮೀಕಿ ಸಂಘದ ತಾಲ್ಲೂಕು ಅಧ್ಯಕ್ಷರು ಬಾಬಣ್ಣ, ಅಶೋಕ್, ಡಾ ಶಶಿಧರ್, ಎಚ್ ವಿ ಮಂಜುನಾಥ್, ವೇಣುಗೋಪಾಲ್ ರೆಡ್ಡಿ, ಭವ್ಯ ರಂಗನಾಥ್, ಮುಖಂಡರಾದ ಲೋಕೇಶ್, ಗೀತಾ ನಾಗರಾಜ್, ನಿರಂಜನ್, ನರಸಿಂಹ ಮೂರ್ತಿ, ರಮೇಶ್ ರಾವ್ ಮುಂತಾದವರು ಪಾಲ್ಗೊಂಡಿದ್ದರು.