ಸಾರಾಂಶ
ಹಲ್ಲುಗಳ ಶುಚಿತ್ವಕ್ಕೆ ಒತ್ತು ನೀಡಿ
ಕನ್ನಡಪ್ರಭ ವಾರ್ತೆ ಮುಧೋಳ
ಆರೋಗ್ಯವಂತ ಮಾನವನ ಶರೀರಕ್ಕೆ ದೇಹದ ಎಲ್ಲ ಅಂಗಗಳಂತೆ ಪಚನ ಕ್ರಿಯೆಗೆ ಸಹಕರಿಸುವ ಜೊತೆಗೆ ಸುಂದರವಾದ ನಗುಮುಖ ಹೊಂದಲು ಹಲ್ಲುಗಳು ಸಹಕಾರಿಯಾಗಿವೆ. ಆದ್ದರಿಂದ ಹಲ್ಲುಗಳ ಸ್ವಚ್ಛತೆ ಬಗ್ಗೆ ಗಮನ ಹರಿಸಿ ಎಂದು ಮುಧೋಳ ಇನ್ನರ್‌ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ಡಾ.ಆಶಾ ಮಲಘಾಣ ಹೇಳಿದರು.ತಾಲೂಕಿನ ಮಾಲಾಪೂರ ಗ್ರಾಮದ ಕೊಲ್ಹಾರ ಶಿಕ್ಷಣ ಸಂಸ್ಥೆಯ ಭಾಗೀರಥಿ ಸಮಗ್ರ ಶಿಶು ಮಂದಿರ ಹಾಗೂ ಬಂಗಾರಮ್ಮ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಇನ್ಹರ್‌ವ್ಹೀಲ್ ಸಂಸ್ಥೆಯ ಅಡಿಯಲ್ಲಿ ಜರುಗಿದ ಮಕ್ಕಳ ದಂತ ಚಿಕಿತ್ಸಾ ಶಿಬಿರದಲ್ಲಿ ಮುಖ್ಯ ಅತಿಥಿ ಸ್ಥಾನವಹಿಸಿ ಅವರು ಮಾತನಾಡಿದರು.
ವಕೀಲ ರಾಮಕೃಷ್ಣ ಬುದ್ನಿ ಸಸಿಗೆ ನೀರುಣಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಭಾರತಿ ಪೂಜಾರಿ ಹಾಗೂ ಸದಸ್ಯೆ ಡಾ.ಮನಿಷಾ ನಾಗವೇಕರ ದಂತ ಪರೀಕ್ಷೆಯೊಂದಿಗೆ ಸೂಕ್ತ ಸಲಹೆಗಳನ್ನು ಸೂಚಿಸಿದರು.ಭಾರೀರಥಿ ಶಿಶು ಮಂದಿರದ 50 ಹಾಗೂ ಬಂಗಾರಮ್ಮ ಪ್ರಾಥಮಿಕ ಶಾಲೆಯ 50 ಮಕ್ಕಳು ಶಿಬಿರದ ಪ್ರಯೋಜನ ಪಡೆದುಕೊಂಡರು.ಇದೇ ಸಂದರ್ಭದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ನೀತಿ ಬೋಧಕ ಹಾಗೂ ಅತ್ಯುತ್ತಮ ಪುಸ್ತಕಗಳನ್ನು ಇನ್ನರ್ ವ್ಹೀಲ್ ಘಟಕದಿಂದ ವಿತರಿಸಲಾಯಿತು. ಪ್ರೇಮಕ್ಕ ಮೂಡಲಗಿ, ಕಾವೇರಿ ಮ್ಯಾಗೇರಿ ಹಾಗೂ ಜ್ಯೋತಿ ನಾಗರಾಳ ಉಪಸ್ಥಿತರಿದ್ದರು. ಮುಖ್ಯೋಪಾಧ್ಯಾಯ ಉದಯ ವಾಳ್ವೇಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ದೀಪಾ ನಾಗರಾಳ ಸ್ವಾಗತಿಸಿದರು. ಸರೋಜಾ ಮೂಡಶಿ ನಿರೂಪಿಸಿದರು. ವಿದ್ಯಾಶ್ರೀ ಹೊಸಕೋಟಿ ವಂದಿಸಿದರು.
---------ಪೊಟೋ ಡಿ.13ಎಂಡಿಎಲ್ 4