ದೈಹಿಕ ಕ್ರೀಡೆಯ ಜೊತೆಗೆ ಬೌದ್ಧಿಕ ಕ್ರೀಡೆಗೂ ಒತ್ತು ನೀಡಿ: ಶಾಸಕ ಸುಬ್ಬಾರೆಡ್ಡಿ

| Published : Nov 22 2025, 02:15 AM IST

ದೈಹಿಕ ಕ್ರೀಡೆಯ ಜೊತೆಗೆ ಬೌದ್ಧಿಕ ಕ್ರೀಡೆಗೂ ಒತ್ತು ನೀಡಿ: ಶಾಸಕ ಸುಬ್ಬಾರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳು ಚೆಸ್, ಕೇರಂನಂತಹ ಏಕಾಗ್ರತೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುವ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಮೆದುಳಿನ ಶಕ್ತಿಯನ್ನು ಚುರುಕುಗೊಳಿಸಿಕೊಳ್ಳಬೇಕು.

ಕನ್ನಡಪ್ರಭ ವಾರ್ತೆ ಗುಡಿಬಂಡೆ

ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕೇವಲ ಓದು ಅಥವಾ ದೈಹಿಕ ಕ್ರೀಡೆಗಳಷ್ಟೇ ಸಾಲದು, ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಆಟಗಳೂ ಅತ್ಯಗತ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಚೆಸ್, ಕೇರಂನಂತಹ ಏಕಾಗ್ರತೆ ಮತ್ತು ಬುದ್ಧಿಶಕ್ತಿಯನ್ನು ಹೆಚ್ಚಿಸುವ ಕ್ರೀಡೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ತಮ್ಮ ಮೆದುಳಿನ ಶಕ್ತಿಯನ್ನು ಚುರುಕುಗೊಳಿಸಿಕೊಳ್ಳಬೇಕು ಎಂದು ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ತಿಳಿಸಿದರು.

ತಾಲೂಕಿನ ಜೆ.ಪಿ. ನಗರದ ಆದರ್ಶ ವಿದ್ಯಾಲಯದಲ್ಲಿ ತಾಲೂಕು ಪಂಚಾಯಿತಿ ಹಾಗೂ ತಿರುಮಣಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ 14 ವರ್ಷದೊಳಗಿನ ಮಕ್ಕಳ ಚೆಸ್ ಹಾಗೂ ಕೇರಂ ಕ್ರೀಡಾಕೂಟ ಹಾಗೂ ಬಾಲ್ಯ ವಿವಾಹದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಾಪಂ ಇಒ ನಾಗಮಣಿ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಬುದ್ಧಿಶಕ್ತಿಯನ್ನು ಹೆಚ್ಚಿಸಲು ಚೆಸ್, ಕೇರಂನಂತಹ ಆಟಗಳು ಸಹಕಾರಿಯಾಗಿವೆ. ಈ ಕ್ರೀಡೆಗಳ ಕುರಿತು ಈ ಭಾಗದಲ್ಲಿ ಹೆಚ್ಚು ಪ್ರಚಾರ ಮಾಡಬೇಕಿದೆ ಎಂದರು.

ಇನ್ನೂ ಚೆಸ್, ಕೇರಂ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಮಕ್ಕಳಿಗೆ ಬಹುಮಾನಗಳನ್ನು ವಿತರಣೆ ಮಾಡಲಾಯಿತು.

ಜಿಪಂ ಉಪ ಕಾರ್ಯದರ್ಶಿ ಅತಿಕ್ ಪಾಷ, ತಿರುಮಣಿ ಗ್ರಾಪಂ ಅಧ್ಯಕ್ಷೆ ಮಮತಾ, ಸೋಮೇನಹಳ್ಳಿ ಗ್ರಾಪಂ ಅಧ್ಯಕ್ಷೆ ಸುಮಂಗಲಮ್ಮ, ತಿರುಮಣಿ ಪಿಡಿಒ ಶ್ರೀನಿವಾಸಮೂರ್ತಿ, ಸೋಮೇನಹಳ್ಳಿ ಪಿಡಿಒ ನರಸಿಂಹಮೂರ್ತಿ, ದಪ್ಪರ್ತಿ ಪಿಡಿಒ ರಾಮಾಂಜಿ, ಬಿಇಒ ಕೃಷ್ಣಕುಮಾರಿ, ಆದರ್ಶ ಶಾಲೆಯ ಮುಖ್ಯಶಿಕ್ಷಕಿ ಕೃಷ್ಣಕುಮಾರಿ, ನೌಕರರ ಸಂಘದ ಅಧ್ಯಕ್ಷ ಮುನಿಕೃಷ್ಣಪ್ಪ, ಕಾರ್ಯದರ್ಶಿ ಬಿ.ಆರ್.ಮಂಜುನಾಥ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬಾಲಾಜಿ, ಶ್ರೀರಾಮಪ್ಪ, ಜಿಪಿಟಿ ಶಿಕ್ಷಕರ ಸಂಘದ ರಾಜಶೇಖರ್, ಪ್ರೌಢಶಾಲಾ ಶಿಕ್ಷಕರ ಸಂಘದ ಲಕ್ಷ್ಮೀನರಸಿಂಹಗೌಡ, ಸಿಡಿಪಿಒ ರಫೀಕ್ ಇದ್ದರು.

------

ಗುಡಿಬಂಡೆ ತಾಲೂಕಿನ ಆದರ್ಶ ವಿದ್ಯಾಲಯದಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

----

ಗುಡಿಬಂಡೆ ತಾಲೂಕಿನ ಜೆ.ಪಿ. ನಗರದ ಆದರ್ಶ ವಿದ್ಯಾಲಯದಲ್ಲಿ ಆಯೋಜಿಸಿದ್ದ ಚೆಸ್ ಹಾಗೂ ಕೇರಂ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಣೆ ಮಾಡಲಾಯಿತು.