ಆಧ್ಯಾತ್ಮಿಕ ಚಿಂತನೆಗಳಿಗೆ ಒತ್ತು ನೀಡಿ

| Published : Apr 27 2024, 01:01 AM IST

ಸಾರಾಂಶ

ಗಿಡ-ಮರ, ನೀರು-ಗಾಳಿ ಪ್ರತಿಫಲ ಅಪೇಕ್ಷೆ ಇಲ್ಲದೆ ಮನುಕುಲಕ್ಕೆ ಒಳ್ಳೆಯದನ್ನು ಮಾಡುತ್ತವೆ. ಮನುಷ್ಯ ಕೂಡ ಇತರರನ್ನು ಪ್ರೀತಿಸುವ ಎಲ್ಲರು ನಮ್ಮವರು ಎಂಬ ಭಾವನೆಗಳೊಂದಿಗೆ ಬದುಕಬೇಕು

ಕನ್ನಡಪ್ರಭ ವಾರ್ತೆ ಶಿರಾ ಗಿಡ-ಮರ, ನೀರು-ಗಾಳಿ ಪ್ರತಿಫಲ ಅಪೇಕ್ಷೆ ಇಲ್ಲದೆ ಮನುಕುಲಕ್ಕೆ ಒಳ್ಳೆಯದನ್ನು ಮಾಡುತ್ತವೆ. ಮನುಷ್ಯ ಕೂಡ ಇತರರನ್ನು ಪ್ರೀತಿಸುವ ಎಲ್ಲರು ನಮ್ಮವರು ಎಂಬ ಭಾವನೆಗಳೊಂದಿಗೆ ಬದುಕಬೇಕು ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ನಂಜಾವಧೂತ ಸ್ವಾಮೀಜಿ ಹೇಳಿದರು.

ತಾಲೂಕಿನ ಪಟ್ಟನಾಯಕನಹಳ್ಳಿ ಗ್ರಾಮದ ಪ್ರಸಿದ್ಧ ಶ್ರೀ ಗುರುಗುಂಡ ಬ್ರಹ್ಮೇಶ್ವರ ಸ್ವಾಮಿ ಮಠದಲ್ಲಿ ಆಯೋಜಿಸಿದ್ದ ಪೌರ್ಣಮಿ ದೀಪೋತ್ಸವ ಮತ್ತು ಸತ್ಸಂಗ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪೌರ್ಣಮಿ ದೀಪೋತ್ಸವ ಎಲ್ಲರ ಬದುಕಿನಲ್ಲಿ ಉಜ್ವಲ ಬೆಳಕನ್ನು ನೀಡಿ, ಸಂಕಷ್ಟಗಳನ್ನು ದೂರ ಮಾಡಲಿ. ಚಂದ್ರ ಪೂರ್ಣ ಪ್ರಮಾಣದ ದರ್ಶನ ಬೆಳಕು ನೀಡುತ್ತಾನೋ, ಅದೇ ರೀತಿ ಮನುಷ್ಯನ ಬದುಕು ಕೂಡ ಬೆಳಕಿನ ಪೂರ್ಣತೆ ಹೊಂದಿದ್ದರೆ ಜೀವನ ಸುಂದರ ರೂಪ ಪಡೆಯುತ್ತದೆ. ಆಧ್ಯಾತ್ಮಿಕ ಚಿಂತನೆಗಳಿಗೆ ಒತ್ತು ನೀಡಬೇಕು. ತಂದೆ, ತಾಯಿ, ಗುರು ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಯುವುದರ ಜತೆಗೆ ಜೀವನದ ನಿಜಾರ್ಥ ತಿಳಿಯಬೇಕು ಎಂದರು.

ಮುಖಂಡರಾದ ನಿರಂಜನ್, ತಮ್ಮಣ್ಣ, ಮಂಜುನಾಥ ಗುಪ್ತ, ಕಿಶೋರ್ ಸೇರಿದಂತೆ ನೂರಾರು ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.