ನೌಕರರು, ಪತ್ರಕರ್ತರು ಸಮಾಜ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮ

| Published : Dec 18 2024, 12:46 AM IST

ನೌಕರರು, ಪತ್ರಕರ್ತರು ಸಮಾಜ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ನೌಕರರ ವರ್ಗ ಮತ್ತು ಪತ್ರಕರ್ತರು ಸಮಾಜದ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ನಾವು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಪತ್ರಕರ್ತ ಬಿ.ಚನ್ನವೀರಯ್ಯ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಕನಕ ನೌಕರರ ಬಳಗ ಸನ್ಮಾನ ಸಮಾರಂಭದಲ್ಲಿ ಚನ್ನವೀರಯ್ಯ - - - ದಾವಣಗೆರೆ: ನೌಕರರ ವರ್ಗ ಮತ್ತು ಪತ್ರಕರ್ತರು ಸಮಾಜದ ಶ್ರೇಯೋಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಾರೆ. ಇಂತಹ ಸಂದರ್ಭಗಳಲ್ಲಿ ನಾವು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಪತ್ರಕರ್ತ ಬಿ.ಚನ್ನವೀರಯ್ಯ ಹೇಳಿದರು.

ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದಲ್ಲಿ ಸೋಮವಾರ ಜಿಲ್ಲಾ ಕನಕ ನೌಕರರ ಬಳಗದಿಂದ ಮಹಾನಗರ ಪಾಲಿಕೆ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದವರಿಗೆ ಕನಕ ನೌಕರರ ಬಳಗದವರು ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಸಾರ್ವಜನಿಕರು ನಮ್ಮ ಮೇಲೆ ಅಷ್ಟೇ ನಂಬಿಕೆ ಇಟ್ಟಿರುತ್ತಾರೆ. ಸಾರ್ವಜನಿಕರ ಹಿತ್ತಾಸಕ್ತಿಗೆ ಧಕ್ಕೆ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಬೇಕು. ಆಗ ಮಾತ್ರ ನಮ್ಮ ಜವಾಬ್ದಾರಿ ಹಾಗೂ ಕರ್ತವ್ಯಗಳಿಗೆ ನ್ಯಾಯ ಕೊಟ್ಟಂತಾಗುತ್ತದೆ ಎಂದು ಹೇಳಿದರು.

ಈ ಸಂದರ್ಭ ಜಿಲ್ಲಾ ಕುರುಬ ಸಮಾಜ ಅಧ್ಯಕ್ಷ ಬಿ.ಎಚ್. ಪರುಶುರಾಮಪ್ಪ, ಕೃಷಿ ಇಲಾಖೆಯ ಬಿ.ಆರ್. ತಿಪ್ಪೇಸ್ವಾಮಿ, ಪತ್ರಕರ್ತ ಲೋಕಿಕೆರೆ ಪುರಂದರ್, ಸಂಘದ ಪ್ರಧಾನ ಕಾರ್ಯದರ್ಶಿ ಶಿವಾನಂದ ದಳವಾಯಿ, ಗಣೇಶ್ ದಳವಾಯಿ, ಗೌರವಾಧ್ಯಕ್ಷ ಹಾಲೇಶಪ್ಪ, ಉಪಾಧ್ಯಕ್ಷರಾದ ನಾಗೇಶ್ ಗೌಡ, ಪರಶುರಾಮಪ್ಪ, ಗುರುಮೂರ್ತಿ, ಅವಿನಾಶ್, ರಂಗನಾಥ್, ಕುಬೇಂದ್ರ ಕುಮಾರ್, ಜೆ.ಉಮೇಶ್, ಆರ್.ಶಿವಲಿಂಗಪ್ಪ, ಶಾಮನೂರು ಪದ್ದಪ್ಪ, ಮಂಜುನಾಥ್, ಜಿಲ್ಲಾ ಕನಕ ನೌಕರ ಬಳಗದ ಪದಾಧಿಕಾರಿಗಳು ಉಪಸ್ಥಿತರಿದ್ದರು.

- - - -17ಕೆಡಿವಿಜಿ34.ಜೆಪಿಜಿ:

ದಾವಣಗೆರೆಯಲ್ಲಿ ಪಾಲಿಕೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ಬಿ.ಚನ್ನವೀರಯ್ಯ ಅವರಿಗೆ ಕನಕ ನೌಕರರ ಸಂಘದಿಂದ ಅಭಿನಂದಿಸಿದರು.