ಮಹಿಳೆಯರ ಸಬಲೀಕರಣ ಅತ್ಯಗತ್ಯ: ಜಿಲ್ಲಾಧಿಕಾರಿ ಡಾ.ಕುಮಾರ

| Published : Apr 07 2025, 12:34 AM IST

ಮಹಿಳೆಯರ ಸಬಲೀಕರಣ ಅತ್ಯಗತ್ಯ: ಜಿಲ್ಲಾಧಿಕಾರಿ ಡಾ.ಕುಮಾರ
Share this Article
  • FB
  • TW
  • Linkdin
  • Email

ಸಾರಾಂಶ

ಮಹಿಳೆಯರು ಸ್ವಾವಲಂಬಿಗಳಾಗಿ ಆರೋಗ್ಯವಂತರಾದರೆ ನಿಜಕ್ಕೂ ಮಹಿಳಾ ಸಶಕ್ತೀಕರಣ ಯಶಸ್ವಿ ಆದಂತೆ. ಈ ನಿಟ್ಟಿನಲ್ಲಿ ಇಂದು ೧೦ ಕಿ. ಮೀ ದೂರ ಸೈಕ್ಲೋಥಾನ್‌ನಲ್ಲಿ ಭಾಗವಹಿಸಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಿಳೆಯರು ಎಲ್ಲಾ ರಂಗದಲ್ಲೂ ಮುಂಚೂಣಿ ಸ್ಥಾನ ಪಡೆಯಬೇಕು, ಮಹಿಳೆಯರ ಸಬಲೀಕರಣಕ್ಕೆ ಎಲ್ಲರೂ ಸೇರಿ ಶ್ರಮಿಸುವುದು ಅತ್ಯಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಹಸಿರು ಬಾವುಟ ಪ್ರದರ್ಶಿಸಿ ಚಾಲನೆ ನೀಡಿ ಮಾತನಾಡಿದ ಅವರು, ದೇಶದ ಅಭಿವೃದ್ಧಿಗೆ ಮಹಿಳೆಯರು ಪಾತ್ರ ದೊಡ್ಡದು ಎಂದರು.

ಮಹಿಳೆಯರು ಸ್ವಾವಲಂಬಿಗಳಾಗಿ ಆರೋಗ್ಯವಂತರಾದರೆ ನಿಜಕ್ಕೂ ಮಹಿಳಾ ಸಶಕ್ತೀಕರಣ ಯಶಸ್ವಿ ಆದಂತೆ. ಈ ನಿಟ್ಟಿನಲ್ಲಿ ಇಂದು ೧೦ ಕಿ. ಮೀ ದೂರ ಸೈಕ್ಲೋಥಾನ್‌ನಲ್ಲಿ ಭಾಗವಹಿಸಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದರು.

ಜಿಪಂ ಸಿಇಒ ಕೆ.ಆರ್.ನಂದಿನಿ ಮಾತನಾಡಿ, ಜಿಲ್ಲೆಯ ಎಲ್ಲಾ ಭಾಗದಿಂದಲೂ ಮಹಿಳೆಯರು ಮತ್ತು ಪುರುಷರು ಭಾಗವಹಿಸಿ ಸೈಕೋಥಾನ್‌ನನ್ನು ಯಶಸ್ವಿಗೊಳಿಸಿದ್ದಾರೆ, ಕೇವಲ ೩೫ ನಿಮಿಷಗಳಲ್ಲಿ ೧೦ ಕಿ.ಮೀ. ದೂರವನ್ನು ಕ್ರಮಿಸಲಾಗಿದೆ, ಸೈಕ್ಲೋಥಾನ್ ಶಾರೀರಿಕ ಮತ್ತು ಮಾನಸಿಕವಾಗಿ ಶಕ್ತಿ ಕನ್ನಡಿ ಹಿಡಿದಂತೆ ಎಂದರು.

ಮಹಿಳೆಯರ ಏಳಿಗೆಗಾಗಿ ಕೇವಲ ಮಹಿಳೆಯರು ಶ್ರಮಿಸಿದರೆ ಸಾಕಾಗುವುದಿಲ್ಲ, ಮಹಿಳೆಯರು ಸಮಾಜದಲ್ಲಿ ಸಮಾನತೆ ಸಾಧಿಸಲು ಅಭಿವೃದ್ಧಿಯತ್ತ ಸಾಗಲು ಪುರುಷರ ಸಹಭಾಗಿತ್ವವವೂ ಸಹ ಅಗತ್ಯ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಮೂರ್ತಿ, ರೆಡ್ ಕ್ರಾಸ್ ಸಂಸ್ಥೆ ಸಭಾಧ್ಯಕ್ಷೆ ಡಾ. ಮೀರಾ ಶಿವಲಿಂಗಯ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ಸೌಜನ್ಯ ಹತ್ಯೆ ಪ್ರಕರಣ: ನ್ಯಾಯಕ್ಕಾಗಿ ಉಪವಾಸ ಸತ್ಯಾಗ್ರಹ

ಮಂಡ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸೌಜನ್ಯ ಹತ್ಯೆ ಪ್ರಕರಣದಲ್ಲಿ ನ್ಯಾಯಕ್ಕೆ ಒತ್ತಾಯಿಸಿ ರಾಜ್ಯ ರೈತಸಂಘದ ಏಕೀಕರಣ ಸಮಿತಿ ಕಾರ್ಯಕರ್ತರು ಶುಕ್ರವಾರ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದರು.

ನಗರದ ಜಯಚಾಮರಾಜೇಂದ್ರ ಒಡೆಯರ್ ಪ್ರತಿಮೆ ಎದುರು ಸೇರಿದ ಸಮಿತಿಯ ಕಾರ್ಯಕರ್ತರು ಹೈಕೋರ್ಟ್ ಅಪರಾಧಿಯನ್ನು ದೋಷ ಮುಕ್ತಗೊಳಿಸಿದ್ದು, ನಿಜವಾದ ಅಪರಾಧಿ ಯಾರು ಎಂಬುದನ್ನು ಪತ್ತೆ ಹಚ್ಚುವಂತೆ ಒತ್ತಾಯಿಸಿದರು. ಕೃತ್ಯ ನಡೆದ ಸಮಯದಲ್ಲಿ ಸಾಕ್ಯಾಧಾರ ಕಲೆ ಹಾಕದೆ ಕರ್ತವ್ಯ ಲೋಪವೆಸಗಿರುವ ಪೊಲೀಸರು, ಸಿಬಿಐ ಅಧಿಕಾರಿಗಳನ್ನು ವಶಕ್ಕೆ ಪಡೆದು ಬ್ರೈನ್ ಮ್ಯಾಪಿಂಗ್ ಪರೀಕ್ಷೆಗೆ ಒಳಪಡಿಸಬೇಕು. ಸತ್ಯಾಸತ್ಯತೆ ಹೊರತಂದು ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಪಡಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಳ್ಳಿ ಚಂದ್ರಶೇಖರ್, ಅಣ್ಣೂರು ಮಹೇಂದ್ರ, ಸಂತೋಷ್ ಮಂಡ್ಯಗೌಡ, ಪಣಕನಹಳ್ಳಿ ನಾಗಣ್ಣ, ಚಿಕ್ಕಮರಿಗೌಡ, ಮರಿಚನ್ನೇಗೌಡ ಇದ್ದರು.