2023ರ ಪ್ರತಿಷ್ಠಿತ ಎನ್ಬಾ ಪ್ರಶಸ್ತಿ ಪ್ರಕಟವಾಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ 3 ಚಿನ್ನ, 5 ಬೆಳ್ಳಿ ಸೇರಿ ಒಟ್ಟು 8 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ದೆಹಲಿ : 2023ರ ಪ್ರತಿಷ್ಠಿತ ಎನ್ಬಾ ಪ್ರಶಸ್ತಿ ಪ್ರಕಟವಾಗಿದ್ದು, ಏಷ್ಯಾನೆಟ್ ಸುವರ್ಣ ನ್ಯೂಸ್ 3 ಚಿನ್ನ, 5 ಬೆಳ್ಳಿ ಸೇರಿ ಒಟ್ಟು 8 ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ.

ದೆಹಲಿಯಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೆಸ್ಟ್‌ ಲೇಟ್ ಪ್ರೈಮ್ ಟೈಮ್ ಶೋ (ಬೆಳ್ಳಿ), ಬೆಸ್ಟ್ ಬ್ರೇಕ್‌ಫಾಸ್ಟ್ ಶೋ (ಚಿನ್ನ), ಬೆಸ್ಟ್ ಪ್ರೈಮ್ ಟೈಮ್ ಶೋ (ಚಿನ್ನ), ಬೆಸ್ಟ್ ಕರೆಂಟ್ ಅಫೇರ್ಸ್‌ (ಚಿನ್ನ), ಬೆಸ್ಟ್ ಅರ್ಲಿ ಪ್ರೈಮ್ ಶೋ (ಬೆಳ್ಳಿ), ಬೆಸ್ಟ್ ಇನ್ ಡೆಪ್ತ್ ಸೀರೀಸ್‌ (ಬೆಳ್ಳಿ), ಬೆಸ್ಟ್ ನ್ಯೂಸ್ ಕವರೇಜ್‌ (ಬೆಳ್ಳಿ), ಬೆಸ್ಟ್ ಆ್ಯಂಕರ್‌ (ಪ್ರಶಾಂತ್ ನಾತು-ಬೆಳ್ಳಿ) ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ.

ಬೆಸ್ಟ್ ಮೈಕ್ರೋ ಸೈಟ್ (ಡಿಜಿಟಲ್ ಮಲಯಾಳಂ) ವಿಭಾಗದಲ್ಲಿಯೂ ಏಷ್ಯಾನೆಟ್ ಸಂಸ್ಥೆಗೆ ಚಿನ್ನದ ಪದಕ ದೊರೆತಿದೆ.