ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ಸಿಗಲಿ: ಡಾ. ಭೀಮಶೇನರಾವ್‌ ಶಿಂಧೆ

| Published : Feb 12 2024, 01:37 AM IST

ಉದಯೋನ್ಮುಖ ಕಲಾವಿದರಿಗೆ ಪ್ರೋತ್ಸಾಹ ಸಿಗಲಿ: ಡಾ. ಭೀಮಶೇನರಾವ್‌ ಶಿಂಧೆ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡದ ಮಣ್ಣಿನ ಶಕ್ತಿ ಆಗಾಧ. ಇಂತಹ ಊರಿನಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ ಎಂದು ಡಾ. ಭೀಮಶೇನರಾವ್‌ ಶಿಂಧೆ ಹೇಳಿದರು.

ಧಾರವಾಡ: ಸಂಘ-ಸಂಸ್ಥೆಗಳು ಯುವ ಕಲಾವಿದರಿಗೆ ಪ್ರೋತ್ಸಾಹಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹಿರಿಯ ಐಎಎಸ್‌ ಅಧಿಕಾರಿ ಡಾ. ಭೀಮಶೇನರಾವ್‌ ಶಿಂಧೆ ಹೇಳಿದರು.

ಪಂ.ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ, ರೋಟರಿ ಕ್ಲಬ್ ಧಾರವಾಡ ಸೆಂಟ್ರಲ್ ಮತ್ತು ರೋಟರಿ ಕ್ಲಬ್ ಸೆವೆನ್ ಹಿಲ್ಸ್ ಸಂಯುಕ್ತಾಶ್ರಯದಲ್ಲಿ ಇಲ್ಲಿಯ ಕರ್ನಾಟಕ ಕುಲ ಪುರೋಹಿತ ಆಲೂರ ವೆಂಕಟರಾವ್ ಸಭಾಭವನದಲ್ಲಿ ಹಮ್ಮಿಕೊಂಡ ಪುಟ್ಟರಾಜ ಸಂಗೀತ ಪುರಸ್ಕಾರ ಹಾಗೂ ಸಂಗೀತೋತ್ಸವದಲ್ಲಿ ಮಾತನಾಡಿದರು.

ಧಾರವಾಡದ ಮಣ್ಣಿನ ಶಕ್ತಿ ಆಗಾಧ. ಇಂತಹ ಊರಿನಲ್ಲಿ ಸಲ್ಲಿಸಿದ ಸೇವೆ ಸ್ಮರಣೀಯ ಎಂದ ಅವರು, ಯುವ ಕಲಾವಿದರಿಗೆ ವೇದಿಕೆ ನೀಡುವ ಕಾರ್ಯಕ್ರಮಗಳಾಗಬೇಕು ಎಂದರು.

ನಿರ್ದೇಶಕ ಶಶಿಧರ ನರೇಂದ್ರ ಮಾತನಾಡಿ, ಯುವಗಾಯಕರಿಗೆ ಪ್ರೋತ್ಸಾಹ ನೀಡುತ್ತಿರುವುದು, ಗಾಯಕರು ಸಂಗೀತ ಕ್ಷೇತ್ರದಲ್ಲಿ ಇನ್ನಷ್ಟು ಖ್ಯಾತಿ ಗಳಿಸಲಿ ಎಂದು ಹಾರೈಸಿದರು. ಮಾಜಿ ಮೇಯರ್‌ ಈರೇಶ ಅಂಚಟಗೇರಿ ಮಾತನಾಡಿ, ಸಂಗೀತ ಕಲಾವಿದರಿಗೆ ಪ್ರೋತ್ಸಾಹ ನೀಡಲು ನಾವು ಪ್ರತಿಷ್ಠಾನದೊಂದಿಗೆ ಸದಾ ಸಿದ್ಧ ಎಂದರು.

ಅಧ್ಯಕ್ಷತೆ ವಹಿಸಿದ್ದ ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷ ಸುನೀಲ ಬಾಗೇವಾಡಿ, ನಿತ್ಯ ಬದುಕಿನ ಜಂಜಾಟದ ನಿವಾರಣೆಗೆ ಸಂಗೀತ ಉತ್ತಮ ಔಷಧಿ. ಸಮಾಜಮುಖಿ ಕೆಲಸದ ಜೊತೆಗೆ ಸಂಗೀತದ ಸೇವೆಯನ್ನು ರೋಟರಿ ಸಂಸ್ಥೆ ಪ್ರತಿಷ್ಠಾನದ ಜೊತೆಗೆ ಮಾಡುತ್ತಿದೆ ಎಂದರು.

ಪಂ. ಇನ್ಸಾಫ್ ಹೊಸಪೇಟ್ ಅವರಿಗೆ ಪುಟ್ಟರಾಜ ಸಂಗೀತ ಪುರಸ್ಕಾರವನ್ನು ಹಿರಿಯರಾದ ಎಂ.ಆರ್. ದರಗದ ಪ್ರದಾನ ಮಾಡಿದರು. ಜಾನಪದ ವಿವಿ ವಿಶ್ರಾಂತ ಕುಲಪತಿ ಡಾ. ಡಿ.ಬಿ. ನಾಯ್ಕ, ಗಾಯಕರಾದ ಕೃಷ್ಣಾಜಿ ಚವ್ಹಾಣ, ರೋಟರಿ ಕ್ಲಬ್ ಆರ್ಫ ಸೆವನ್ ಹಿಲ್ಸ್‌ ಅಧ್ಯಕ್ಷರಾದ ಸಂಗೀತಾ ಬಾಗೇವಾಡಿ, ಸಾವಿತ್ರಿಭಾಯಿ ಪುಲೆ ಸಂಸ್ಥೆಯ ಡಾ.ಲತಾ ಮುಳ್ಳೂರ, ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್. ಫರಾಸ್ ಮಾತನಾಡಿದರು.

ಸಂಘಟಕ ಮಾರ್ತಾಂಡಪ್ಪ ಕತ್ತಿ ಸ್ವಾಗತಿಸಿದರು. ಪ್ರೇಮಾನಂದ ಶಿಂದೆ ಪ್ರಾರ್ಥಿಸಿದರು. ಉಪಾಧ್ಯಕ್ಷ ಸುರೇಶ ಬೆಟಗೇರಿ ವಂದಿಸಿದರು. ನಂತರ ಕಿರಾಣಾ ಗ್ವಾಲಿಯರ್ ಘರಾಣೆಯ ಹಿಂದೂಸ್ತಾನಿ ಸಂಗೀತ ಕಚೇರಿಯನ್ನು ವಿದ್ವಾನ ಇನ್ಸಾಫ್ ಹೊಸಪೇಟ್ ನಡೆಸಿಕೊಟ್ಟರು. ಅವರಿಗೆ ಡಾ. ಶ್ರೀಹರಿ ದಿಗ್ಗಾವಿ ತಬಲಾ ಮತ್ತು ವಿನೋದ್ ಪಾಟೀಲ ಸಂವಾದಿನಿಯಲ್ಲಿ ಸಾಥ್‌ ನೀಡಿದರು. ನಂತರ ಗಾಯಕರಾದ ಅರುಣ ಶೀಲವಂತ, ಸುಭಾಸ ಸೊಗಲದ, ಗುಲ್ಷನ್ ಸಿಂಗ್, ವೀಣಾ ಚಿಕ್ಕಮಠ, ಡಾ. ಎಚ್.ಎ. ಇಳಕಲ್ ಮತ್ತಿತರರು ಕರೋಕೆ ಹಾಡುಗಳನ್ನು ಪ್ರಸ್ತುತ ಪಡಿಸಿದರು. ತದ ನಂತರ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.