ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಲಿ: ಪುರಸಭೆ ಸದಸ್ಯ ವಸಂತ ಮೇಲಿನಮನಿ

| Published : Jan 06 2024, 02:00 AM IST / Updated: Jan 06 2024, 06:07 PM IST

ಜಾನಪದ ಕಲಾವಿದರನ್ನು ಪ್ರೋತ್ಸಾಹಿಸುವ ಕಾರ್ಯವಾಗಲಿ: ಪುರಸಭೆ ಸದಸ್ಯ ವಸಂತ ಮೇಲಿನಮನಿ
Share this Article
  • FB
  • TW
  • Linkdin
  • Email

ಸಾರಾಂಶ

ಇಂದು ಆಧುನಿಕತೆಯ ಪರಿಣಾಮ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಯುವಕರು ದುರ್ಬಳಕೆ ಮಾಡುತ್ತಿದ್ದು, ತಮ್ಮ ಭವಿಷಕ್ಕೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಮನೆಯಲ್ಲಿನ ಹಿರಿಯರು ಹಾಗೂ ಪಾಲಕರು ತಮ್ಮ ಮನೆಯ ಮಕ್ಕಳನ್ನು ಹಾಗೂ ಯುವಕರನ್ನು ನಿಯಂತ್ರಣದಲ್ಲಿಡಬೇಕು.

ಕುಷ್ಟಗಿ: ಇಂದಿನ ಮೊಬೈಲ್ ಯುಗದಲ್ಲಿ ಜಾನಪದ ಹಾಡುಗಳು ನಶಿಸಿ ಹೋಗುತ್ತಿವೆ. ಕಲಾವಿದರಿಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಸಾರ್ವಜನಿಕರು ಹಾಗೂ ಸರ್ಕಾರ ಮಾಡಬೇಕು ಎಂದು ಪುರಸಭೆ ಸದಸ್ಯ ವಸಂತ ಮೇಲಿನಮನಿ ಹೇಳಿದರು.ಪಟ್ಟಣದ ಶರೀಫ್ ನಗರದ ಬ್ರಿಲಿಯಂಟ್ ನವೋದಯ ತರಬೇತಿ ಕೇಂದ್ರದ ಆವರಣದಲ್ಲಿ ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘದ ವತಿಯಿಂದ ನಡೆದ ಜಾನಪದ ಉತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಆಧುನಿಕತೆಯ ಪರಿಣಾಮ ಮೊಬೈಲ್ ಹಾಗೂ ಸಾಮಾಜಿಕ ಜಾಲತಾಣಗಳನ್ನು ಯುವಕರು ದುರ್ಬಳಕೆ ಮಾಡುತ್ತಿದ್ದು, ತಮ್ಮ ಭವಿಷಕ್ಕೆ ತಾವೇ ಕಲ್ಲು ಹಾಕಿಕೊಳ್ಳುತ್ತಿದ್ದಾರೆ. ಮನೆಯಲ್ಲಿನ ಹಿರಿಯರು ಹಾಗೂ ಪಾಲಕರು ತಮ್ಮ ಮನೆಯ ಮಕ್ಕಳನ್ನು ಹಾಗೂ ಯುವಕರನ್ನು ನಿಯಂತ್ರಣದಲ್ಲಿಡಬೇಕು ಎಂದರು.

ಬ್ರಿಲಿಯಂಟ್ ನವೋದಯ ತರಬೇತಿ ಕೇಂದ್ರದ ಮುಖ್ಯಸ್ಥ ರವಿಕುಮಾರ್ ಮೇಳಿ ಮಾತನಾಡಿ, ದೈನಂದಿನ ಆಗುಹೋಗುಗಳ ಹೊರತಾಗಿಯೂ, ಜೀವನದಲ್ಲಿ ಉಲ್ಲಾಸ ಹೊಂದಲು ಸೃಜನಶೀಲ ಸಾಂಸ್ಕೃತಿಕ ಚಟುವಟಿಕೆಗಳು ಬಹುಮುಖ್ಯ ಎಂದರು.

ಕಾರ್ಯಕ್ರಮದಲ್ಲಿ ಸರಸ್ವತಿ ಸಾಂಸ್ಕೃತಿಕ ಮಹಿಳಾ ಸಂಘದ ಅಧ್ಯಕ್ಷೆ ಲಲಿತಮ್ಮ ಹಿರೇಮಠ, ಕಲಾವಿದರಾದ ಸುಖಮುನಿ ಗಡಗಿ, ಹನುಮಂತ ಕುಮಾರ್ ಲಿಂಗನಬಂಡಿ, ಅಯ್ಯಪ್ಪ ಬಡಿಗೇರ ನಿರುಪಾದಿ ಗುರುಕಾರ್, ಮಲ್ಲಿಕಾರ್ಜುನ ಪೂಜಾರ್ ಇವರಿಂದ ಜಾನಪದ ಹಾಡುಗಳು ಮೂಡಿಬಂದವು.

ಬ್ರಿಲಿಯಂಟ್ ನವೋದಯ ತರಬೇತಿ ಕೇಂದ್ರದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಂಘದಿಂದ ಪ್ರತಿಭಾವಂತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸುಜಾತಾ, ರವಿಕುಮಾರ್, ಜ್ಯೋತಿ ಕಂಕುಳ, ಮುನೇಶ ಬಡಿಗೇರ, ಸುಜಾತಾ ರವಿಕುಮಾರ್, ಜ್ಯೋತಿ ಕಂದಕೂರ್, ಮೌನೇಶ್ ಬಡಿಗೇರ್, ಶಿವು ಹಜಾಳ್, ಮೆಹಬೂಬಸಾಬ್, ವಿದ್ಯಾಶ್ರೀ, ಅಂಬಿಕಾ, ದೊಡ್ಡಬಸು, ಬಸವರಾಜ್, ಇತರರು ಪಾಲ್ಗೊಂಡಿದ್ದರು. ಜ್ಯೋತಿ ಹಿರೇಮಠ ನಿರೂಪಿಸಿದರು.