ಸಾರಾಂಶ
ನೆಮ್ಮಾರು ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಸಂಜೀವಿನಿ ಮಾಸಿಕ ಸಂತೆ, ವಸ್ತು ಪ್ರದರ್ಶನ,
ಕನ್ನಡಪ್ರಭ ವಾರ್ತೆ, ಶೃಂಗೇರಿಪ್ರಾಚೀನ ಕಾಲದಿಂದಲೂ ನಮ್ಮ ಪೂರ್ವಿಕರು ಗ್ರಾಮೀಣ ಪ್ರದೇಶಗಳಲ್ಲಿ ಗೃಹ, ಗುಡಿ, ಕರಕುಶಲ ಕೈಗಾರಿಕೆಗಳನ್ನು ಉಳಿಸಿಕೊಂಡು ಬಂದಿದ್ದರು. ಇವುಗಳು ಕುಟುಂಬದ ಆದಾಯದ ಮೂಲಗಳು ಆಗಿದ್ದವು. ಇಂದಿಗೂ ಉಳಿದು ಕೊಂಡು ಬಂದಿರುವ ಗ್ರಾಮೀಣ ಉತ್ಪನ್ನಳು, ಗೃಹ ಕೈಗಾರಿಕೆ ಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕಿದೆ ಎಂದು ನೆಮ್ಮಾರು ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ವಾಣಿ ಹೇಳಿದರು.
ತಾಲೂಕಿನ ನೆಮ್ಮಾರು ಪಂಚಾಯಿತಿ ನೆಮ್ಮಾರು ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಎನ್ಆರ್ ಎಲ್ ಎಂ ಸಂಜೀವಿನಿ ಯೋಜನೆಯಡಿ ಸಂಜೀವಿನಿ ಮಾಸಿಕ ಸಂತೆ, ವಸ್ತು ಪ್ರದರ್ಶನ, ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು. ಬುಟ್ಟಿ ತಟ್ಟಿ, ವಾಟೆ, ಬೆತ್ತದ ವಸ್ತುಗಳ ತಯಾರಿಕೆ, ಪೊರಕೆ, ಕೈಮಗ್ಗ ವಸ್ತುಗಳು, ನೇಯುವಿಕೆ, ಆಹಾರ, ಖಾದ್ಯ ವಸ್ತುಗಳು, ಹಪ್ಪಳ, ಸಂಡಿಗೆ ಇತ್ಯಾದಿ ತಿನಿಸು ವಸ್ತುಗಳ ತಯಾರಿಕೆ, ವಿವಿಧ ರೀತಿಯ ಸೊಪ್ಪು ತರಕಾರಿಗಳನ್ನು ಬೆಳೆಯುವ ಮೂಲಕ ಸ್ವ ಉದ್ಯೋಗ ಮಾಡುತ್ತಿದ್ದರು.ಸೊಪ್ಪು ತರಕಾರಿ ವಸ್ತುಗಳ ಜೊತೆ ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದು, ಇವು ರಾಸಾಯನಿಕ ರಹಿತವಾಗಿವೆ. ಸಾವಯವ ಗೊಬ್ಬರಗಳಿಂದ ಬೆಳೆ ಯುವುದರಿಂದ ಉತ್ತಮ ಆರೋಗ್ಯಕ್ಕೆ ಪೂರಕ. ಇವುಗಳಿಂದ ಉತ್ತಮ ಲಾಭಗಳಿಕೆ ಜೊತೆ ಕುಟುಂಬದ ಆದಾಯದ ಮೂಲವು ಆಗಬಲ್ಲದು. ಬಹುತೇಕ ಕುಟುಂಬಗಳಿಗೆ ಜೀವನೋಪಾಯ ಆಗಿದೆ. ಗೃಹಿಣಿಯರು ಮನೆಯಲ್ಲಿಯೇ ತಯಾರಿಸಿದ ವಸ್ತುಗಳು, ಆಹಾರ ವಸ್ತುಗಳಿಗೆ ಉತ್ತಮ ಮಾರುಕಟ್ಟೆಯೂ ಸಿಗುವ ಜೊತೆಗೆ ಅವರ ಜೀವನೋಪಾಯಕ್ಕೂ ಆದಾರವಾಗುತ್ತದೆ.
ಇಂತಹ ಮಾಸಿಕ ಸಂತೆಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಕರಕುಶಲ ಕಲೆ ಇನ್ನೂ ಅಸ್ತಿತ್ವದಲ್ಲಿದೆ ಎಂಬುದನ್ನು ತಿಳಿಸುತ್ತದೆ. ನಾವು ಇಂತಹ ಮಾಸಿಕ ಸಂತೆ, ವಸ್ತು ಪ್ರದರ್ಶನಗಳನ್ನು ಪ್ರೋತ್ಸಾಹಿಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ತಾವೇ ತಯಾರಿಸಿದಂತಹ ಕರಕುಶಲ ವಸ್ತುಗಳು, ಆಹಾರ ಉತ್ಪನ್ನಗಳು ಮಾಸಿಕ ಸಂತೆಯಲ್ಲಿ ಪ್ರದರ್ಶನಗೊಂಡವು.ಕಾರ್ಯಕ್ರಮದಲ್ಲಿ ನೆಮ್ಮಾರು ಸಂಜೀವಿನಿ ಗ್ರಾಮ ಪಂಚಾಯಿತಿ ಮಟ್ಟದ ಒಕ್ಕೂಟದ ಅಧ್ಯಕ್ಷೆ ವಸಂತಿ, ಮಧುಮತಿ, ಭಾಗ್ಯಲಕ್ಷ್ಮಿ, ನಳಿನಿ, ಸುನಿತಾ, ಆದರ್ಶ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಆದರ್ಶ, ಕೃಷಿಯೇತರ ತಾಲೂಕು ವ್ಯವಸ್ಥಾಪಕರಾದ ಚೈತ್ರ, ನೆಮ್ಮಾರು ಗ್ರಾಪಂ ಸದಸ್ಯ ಪುಟ್ಟಪ್ಪ ಹೆಗ್ಡೆ ಮತ್ತಿತರರು ಇದ್ದರು.
19 ಶ್ರೀ ಚಿತ್ರ 1-ಶೃಂಗೇರಿ ನೆಮ್ಮಾರು ಸರ್ಕಾರಿ ಪ್ರೌಢ ಶಾಲಾವರಣದಲ್ಲಿ ಸಂಜೀವಿನಿ ಮಾಸಿಕ ಸಂತೆ, ವಸ್ತು ಪ್ರದರ್ಶನ ಮಾರಾಟ ಮೇಳವನ್ನು ನೆಮ್ಮಾರು ಗ್ರಾಪಂ ಉಪಾಧ್ಯಕ್ಷೆ ವಾಣಿ ಉದ್ಘಾಟಿಸಿದರು. ಚೈತ್ರ,ವಸಂತಿ ಮತ್ತಿತರರು ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))