ಮಾಗಡಿ: ಆಡಂಬರದ ಮದುವೆ ಮಾಡಿ ಸಾಲದಲ್ಲಿ ಸಿಲುಕುವ ಬದಲು ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಿ, ಆ ಮದುವೆಯ ಖರ್ಚನ್ನು ಮಗಳಿಗೆ ಜೀವನಾಧಾರ ಮಾಡಿಕೊಡುವಂತೆ ಬನಶಂಕರಿ ದೇವಸ್ಥಾನದ ಧರ್ಮದರ್ಶಿ ಹಾಗೂ ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷರಾದ ಎ.ಎಚ್.ಬಸವರಾಜು ಮನವಿ ಮಾಡಿದರು.
-ಬನಶಂಕರಿ ಸಾಮೂಹಿಕ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ
ಮಾಗಡಿ: ಆಡಂಬರದ ಮದುವೆ ಮಾಡಿ ಸಾಲದಲ್ಲಿ ಸಿಲುಕುವ ಬದಲು ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಿ, ಆ ಮದುವೆಯ ಖರ್ಚನ್ನು ಮಗಳಿಗೆ ಜೀವನಾಧಾರ ಮಾಡಿಕೊಡುವಂತೆ ಬನಶಂಕರಿ ದೇವಸ್ಥಾನದ ಧರ್ಮದರ್ಶಿ ಹಾಗೂ ಬಿಜೆಪಿ ಒಬಿಸಿ ರಾಜ್ಯ ಉಪಾಧ್ಯಕ್ಷರಾದ ಎ.ಎಚ್.ಬಸವರಾಜು ಮನವಿ ಮಾಡಿದರು.ಪಟ್ಟಣದ ಸೋಮೇಶ್ವರ ದೇವಸ್ಥಾನದ ಆವರಣದಲ್ಲಿ 27ನೇ ಬನಶಂಕರಿ ಸಾಮೂಹಿಕ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಬನಶಂಕರಿ ದೇವಸ್ಥಾನದಲ್ಲಿ 1999ರಿಂದ ಸಾಮೂಹಿಕ ವಿವಾಹ ಮಹೋತ್ಸವ ನಡೆಯುತ್ತಿದೆ. ಇದುವರೆಗೂ 1591 ವಿವಾಹಗಳು ನಡೆದಿದ್ದು, 24ನೇ ವಿವಾಹ ಮಹೋತ್ಸವದಲ್ಲಿ ನನ್ನ ಮಗನ ಮದುವೆಯನ್ನೂ ಸಾಮೂಹಿಕ ವಿವಾಹದಲ್ಲೇ ಮಾಡಿದ್ದೇನೆ ಎಂದರು. ಮುಂದಿನ ವರ್ಷ ಫೆ.26ರಂದು ಬೆಂಗಳೂರು ಬನಶಂಕರಿ ದೇವಸ್ಥಾನದಲ್ಲಿ ವಿವಾಹ ಮಹೋತ್ಸವ ನಡೆಯುತ್ತಿದ್ದು ಫೆ.15ರಂದು ವಿವಾಹ ಮಹೋತ್ಸವಕ್ಕೆ ನೋಂದಣಿ ಮಾಡಲು ಕಡೆಯ ದಿನವಾಗಿದ್ದು ,ಸರ್ಕಾರದ ನಿಯಮದಂತೆ ಹುಡುಗಿಗೆ 18, ಹುಡುಗನಿಗೆ 21 ವರ್ಷ ಕಡ್ಡಾಯ. ಸರ್ಕಾರದ ದಾಖಲಾತಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಎರಡು ಭಾವಚಿತ್ರ ನೀಡಬೇಕು. ನೋಂದಣಿಯಾದ ವಧು-ವರರಿಗೆ ಉಚಿತ ಬಟ್ಟೆ, ಚಿನ್ನದ ತಾಳಿ, ಬೆಳ್ಳಿ ಉಂಗುರ, ಪೇಟ ಹಾಗೂ ಹೂವಿನ ಹಾರ ಮತ್ತು ಊಟದ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ವೇಳೆ ಹಿರಿಯ ಮುಖಂಡರಾದ ಕೆ.ಆರ್.ದಾಮೋದರ ನಾಯ್ಡು, ಮುತ್ತಪ್ಪ, ನಾರಾಯಣಸ್ವಾಮಿ, ರಾಮು, ಹನುಮಂತೇಗೌಡ, ಭಾಸ್ಕರ್, ರಾಘವೇಂದ್ರ, ಶಶಿ, ಮಾರಪ್ಪ, ಗಂಗರೇವಣ್ಣ, ಕುಮಾರ್, ದಯಾನಂದ್, ಮಂಜುನಾಥ್, ಅಂಜು, ಕಿರಣ್, ಮಣಿ, ವಿನಯ್ ಇತರರಿದ್ದರು.(ಫೋಟೊ ಕ್ಯಾಫ್ಷನ್)
ಮಾಗಡಿ ಸೋಮೇಶ್ವರ ದೇವಸ್ಥಾನದಲ್ಲಿ ಬನಶಂಕರಿ ಸಾಮೂಹಿಕ ವಿವಾಹ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಗಣ್ಯರು ಬಿಡುಗಡೆ ಮಾಡಿದರು.