ಸಾರಾಂಶ
ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರಾಗಿದ್ದು, ಹೆಣ್ಣು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಯೊಬ್ಬರೂ ಎಲ್ಲ ರೀತಿಯ ಪ್ರೋತ್ಸಾಹ ನೀಡಬೇಕು.
ಕಾರವಾರ:
ಸಮಾಜದಲ್ಲಿ ಹೆಣ್ಣು ಮತ್ತು ಗಂಡು ಇಬ್ಬರೂ ಸಮಾನರಾಗಿದ್ದು, ಹೆಣ್ಣು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಪ್ರತಿಯೊಬ್ಬರೂ ಎಲ್ಲ ರೀತಿಯ ಪ್ರೋತ್ಸಾಹ ನೀಡಬೇಕು ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಹೇಳಿದರು.ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಬುಧವಾರ ಇಲ್ಲಿನ ವೈದ್ಯಕೀಯ ಕಾಲೇಜಿನಲ್ಲಿ ಜನಿಸಿದ್ದ ನವಜಾತ ಹೆಣ್ಣು ಮಗುವಿನ ತಾಯಂದಿರನ್ನು ಅಭಿನಂದಿಸಿ, ಸಿಹಿ ವಿತರಿಸಿ ಮಾತನಾಡಿದರು.ಹೆಣ್ಣು ಮತ್ತು ಗಂಡು ಮಕ್ಕಳ ನಡುವೆ ಪೋಷಕರು ಭೇದ ಮಾಡಬಾರದು. ಹೆಣ್ಣು ಮಕ್ಕಳು ಇಂದು ಎಲ್ಲ ಕ್ಷೇತ್ರದಲ್ಲಿ ಪುರುಷರಿಗೆ ಸಮಾನವಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತಿದ್ದಾರೆ. ಆದ್ದರಿಂದ ಪೋಷಕರು ಹಿಂದಿನಂತೆ ಹೆಣ್ಣು ಮಗು ಆಯಿತು ಎಂದು ನಿರಾಸೆ ಪಡಬಾರದು ಮತ್ತು ಕೊರಗಬಾರದು. ಅವರು ಎಲ್ಲ ಕ್ಷೇತ್ರದಲ್ಲೂ ಬೆಳೆಯಲು ಸೂಕ್ತ ಪ್ರೋತ್ಸಾಹ ಮತ್ತು ಬೆಂಬಲ ನೀಡಬೇಕು. ಹೆಣ್ಣು ಮತ್ತು ಗಂಡಿನ ನಡುವೆ ಸಮಾನತೆ ಮೂಡಬೇಕು ಎಂದರು.ನವಜಾತು ಹೆಣ್ಣು ಶಿಶುವನ್ನು ಎತ್ತಿಕೊಂಡ ಡಿಸಿ ಗಂಗೂಬಾಯಿ ಮಗುವಿನ ಮತ್ತು ತಾಯಿಯ ಆರೋಗ್ಯ ವಿಚಾರಿಸಿ, ಹೆಣ್ಣು ಮಕ್ಕಳು ಎಂದರೆ ನನಗೆ ತುಂಬಾ ಪ್ರೀತಿ, ಏನನಗೂ ಒಬ್ಬಳೇ ಮಗಳಿದ್ದಾಳೆ ಎಂದು ಅಭಿಪ್ರಾಯಿಸಿದರು.ಕಾಲೇಜಿನ ಹೆರಿಗೆ ಕೊಠಡಿಯಲ್ಲಿನ ವ್ಯವಸ್ಥೆ ಪರಿಶೀಲಿಸಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ವೈದ್ಯರು ಮತ್ತು ಸಿಬ್ಬಂದಿಗೆ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಶುಭಾಶಯ ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಎಚ್.ಎಚ್. ಕುಕನೂರು ಮತ್ತು ಕಾಲೇಜಿನ ವೈದ್ಯರು ಇದ್ದರು.